Home
ಸುದ್ದಿಜಾಲ

ಈ ಅಗ್ಗದ ಐಟೆಲ್‌ 5G ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ದೇಶಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಐಟೆಲ್‌ ಸಂಸ್ಥೆಯು ಕಡಿಮೆ ಬೆಲೆಯ ಮೊಬೈಲ್‌ ಅನ್ನು ಪರಿಚಯಿಸಿ ಗ್ರಾಹಕರಿಗೆ ತಲುಪಿದೆ. ಹಾಗೆಯೇ ಐಟೆಲ್‌ ಕಂಪನಿಯು ಇತ್ತೀಚಿಗೆ ಕಡಿಮೆ ಬೆಲೆಯಲ್ಲಿ ಐಟೆಲ್‌ P55 5G ಸ್ಮಾರ್ಟ್‌ಫೋನ್‌ ಪರಿಚಯಿಸಿದ್ದು, ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿದೆ. ಸದ್ಯ ಈ ಮೊಬೈಲ್‌ ಜನಪ್ರಿಯ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಭಾರೀ ರಿಯಾಯಿತಿ ಪ್ರೈಸ್ಟ್ಯಾಗ್‌ ನಲ್ಲಿ ಕಾಣಿಸಿಕೊಂಡಿದೆ.

ಹೌದು, ಇ ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಐಟೆಲ್‌ P55 5G ( itel P55 5G ) ಮೊಬೈಲ್‌ ಶೇ. 26% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನ್‌ 128GB ವೇರಿಯಂಟ್‌ ಆಯ್ಕೆಯ ಬೆಲೆಯು 13,499ರೂ. ಆಗಿದ್ದು, ಸದ್ಯ ಗ್ರಾಹಕರು ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ 9,999 ರೂ. ಗಳಿಗೆ ಖರೀದಿ ಮಾಡಬಹುದು. ಇದರ ಜೊತೆಗೆ ಇತರೆ ಕೆಲವು ಡಿಸ್ಕೌಂಟ್‌ ಸಹ ದೊರೆಯುತ್ತವೆ.

ಈ ಅಗ್ಗದ ಐಟೆಲ್‌ 5G ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಅಲ್ಲದೇ ಈ ಮೊಬೈಲ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಹೊಂದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ ಮಿಂಟ್ ಗ್ರೀನ್ ಮತ್ತು ಗ್ಯಾಲಕ್ಸಿ ಬ್ಲೂ ಬಣ್ಣದ ಆಯ್ಕೆ ಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೆ ಐಟೆಲ್‌ P55 5G ( itel P55 5G ) ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ P55 5G - ಫೀಚರ್ಸ್‌

ಐಟೆಲ್‌ P55 5G ಮೊಬೈಲ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಪಡೆದಿದ್ದು, ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಸಾಮರ್ಥ್ಯದಲ್ಲಿ ಇದೆ.

ಈ ಅಗ್ಗದ ಐಟೆಲ್‌ 5G ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಐಟೆಲ್‌ ಸಂಸ್ಥೆಯ ಈ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಕೂಡಾ ಪಡೆದಿದೆ. ಹಾಗೆಯೇ 4GB RAM + 64GB ಹಾಗೂ 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಐಟೆಲ್‌ P55 5G ಮೊಬೈಲ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್ ಮತ್ತು ದ್ವಿತೀಯ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜತೆ 8 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಬೇಸಿಕ್‌ ಎಡಿಟಿಂಗ್ ಆಯ್ಕೆಗಳು ಲಭ್ಯ.

ಈ ಅಗ್ಗದ ಐಟೆಲ್‌ 5G ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

ಐಟೆಲ್‌ P55 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಮೊಬೈಲ್‌ ಸೈಡ್‌ ಮೌಂಟೆಡ್‌ ಫಿಂಗರ್ಪ್ರಿಂಟ್‌ ಸೆನ್ಸಾರ್, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್‌-ಸಿ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.

ಭಾರತದಲ್ಲಿ ಐಟೆಲ್‌ P55 5G ಫೋನ್‌ 6GB + 128GB ವೇರಿಯಂಟ್‌ ಹಾಗೂ 4GB + 64GB ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಮೊಬೈಲ್‌ ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಮಾಡಬಹುದಾಗಿದೆ. ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
itel P55 5G mobile price down on amazon. offer, price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+