ಐಟೆಲ್ P55 ಪವರ್ ಸರಣಿ ಫೋನ್ ನಾಳೆಯಿಂದ ಖರೀದಿಗೆ ಲಭ್ಯ!..ಬೆಲೆ ಎಷ್ಟು?
ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಫೋನ್‌ಗಳ ಮೂಲಕ ಗುರುತಿಸಿಕೊಮಡಿರುವ ಐಟೆಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಟೆಲ್ P55 ಪವರ್ ಸರಣಿಯ ಸ್ಮಾರ್ಟ್‌ಫೋನ್ ಆಕರ್ಷಕ ಎನಿಸಿವೆ. ನಾಳೆ ಅಮೆಜಾನ್ ತಾಣದಲ್ಲಿ ಈ ಸರಣಿಯ ಮಾರಾಟ ಶುರುವಾಗಲಿದೆ.
ಹೌದು, ಫೆಬ್ರವರಿ 13 ರಂದು (ನಾಳೆ) ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಐಟೆಲ್ P55 ಪವರ್ ಸರಣಿ ಸ್ಮಾರ್ಟ್‌ಫೋನ್ಗಳ ಸೇಲ್ ನಡೆಯಲಿದೆ. ಈ ಸರಣಿಯು ಮೂರು ಫೋನ್‌ಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಐಟೆಲ್ P55+, ಐಟೆಲ್ P55T ಹಾಗೂ ಐಟೆಲ್ P55 ಆಗಿವೆ.

ಆ ಪೈಕಿ ಐಟೆಲ್ P55+ ಫೋನ್ 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದ್ದು, ಉಳಿದೆರಡು ಫೋನ್‌ಗಳು ಅಧಿಕ RAM ಮತ್ತು ಸ್ಟೋರೇಜ್ ಸೌಲಭ್ಯ ಪಡೆದಿವೆ. ಹಾಗಾದರೇ ಈ ನೂತನ ಫೋನ್‌ಗಳ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ P55+ ಫೋನ್ ಫೀಚರ್ಸ್
ಐಟೆಲ್ P55+ ಸ್ಮಾರ್ಟ್‌ಫೋನ್ 6.6 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸ್ಮಾರ್ಟ್‌ಫೋನ್ ಆಕ್ಟಾ ಕೋರ್ Unisoc T606 SoC ಪ್ರೊಸೆಸರ್ ಪವರ್ ಅನ್ನು ಹೊಂದಿದೆ.

ಇದು ಆಂಡ್ರಾಯ್ಡ್ 13 OS ನಲ್ಲಿ ರನ್ ಆಗಲಿದೆ. ಹಾಗೆಯೇ ಹಾಗೆಯೇ 16GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿದೆ. ಅಂದರೆ 8GB RAM + 8GB ಡೈನಾಮಿಕ್ RAM ರೂಪಾಂತರದಲ್ಲಿ ಲಭ್ಯವಿರುತ್ತದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೂಪರ್ ಕ್ಲಿಯರ್ ಲೆನ್ಸ್‌ನೊಂದಿಗೆ ಬರಲಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ.
ಇದು AI ಲೆನ್ಸ್ ಹೊಂದಿದ್ದು, AI ಕ್ಲಿಯರ್ ಪೋರ್ಟ್ರೇಟ್ ಫೀಚರ್ಸ್‌ನೊಂದಿಗೆ ಬರಲಿದೆ. ಇದಲ್ಲದೆ ಕ್ಯಾಮೆರಾ ಫೀಚರ್ಸ್‌ನಲ್ಲಿ ಸೂಪರ್ ನೈಟ್ ಮೋಡ್ ಮತ್ತು ಪನೋರಮಾ ಮೋಡ್‌ನೊಂದಿಗೆ ಹೊಂದಿದೆ.
ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಫೋರ್ಟ್ ಪಡೆದಿದ್ದು, ಇದು 45W ಹೈಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಬ್ಯಾಟರಿಯು ಸ್ಮಾರ್ಟ್ ಚಾರ್ಜಿಂಗ್ ಮತ್ತು ಕಡಿಮೆ ಟೆಂಪ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ಲಭ್ಯ. ಈ ಫೋನ್ ಪ್ರೀಮಿಯಂ ಲೆದರ್ ವಿನ್ಯಾಸವನ್ನು ಹೊಂದಿದ್ದು, ಹಸಿರು ಬಣ್ಣದಲ್ಲೂ ಲಭ್ಯವಿದೆ.
ಐಟೆಲ್ P55 ಫೋನ್ ಫೀಚರ್ಸ್
ಈ ಸ್ಮಾರ್ಟ್‌ಫೋನ್ 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದರೊಂದಿಗೆ ಈ ಸ್ಮಾರ್ಟ್‌ಫೋನ್ 24GB RAM (8GB RAM + 16GB) ಆಯ್ಕೆಯ ಸೌಲಭ್ಯ ಪಡೆದಿದೆ.
ಹಾಗೆಯೇ ಈ ಫೋನ್ 50 ಮೆಗಾಪಿಕ್ಸೆಲ್ ಎಐ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಈ ಮೂಲಕ ಉತ್ತಮವಾದ ಫೋಟೋ ಪಡೆಯಬಹುದು. ಇದರ ಜೊತೆಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ಫಾಸ್ಟ್ ಚಾರ್ಜ್ ಸಪೋರ್ಟ್ ಪಡೆದಿದೆ.
ಈ ಸ್ಮಾರ್ಟ್‌ಪೋನ್ ಭಾರತದಲ್ಲಿ 8GB RAM + 256GB ಸ್ಟೋರೇಜ್ ರೂಪಾಂತರವು 9,499ರೂ ಬೆಲೆಯನ್ನು ಹೊಂದಿದೆ. ಇದರ ಮೇಲೆ 500ರೂ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದು ಫೆಬ್ರವರಿ 13 ರಿಂದ ಮಾರಾಟವಾಗಲಿದ್ದು, ನೀವು ಅಎಜಾನ್ ನಲ್ಲಿ ಆರ್ಡರ್ ಮಾಡಬಹುದು.


Click it and Unblock the Notifications








