Home
ಸುದ್ದಿಜಾಲ

Itel: ಐಟೆಲ್‌ P55 ಸ್ಮಾರ್ಟ್‌ಫೋನ್ ಲಾಂಚ್‌, 50MP ಕ್ಯಾಮೆರಾ.. ಬೆಲೆ ಎಷ್ಟು?

ಐಟೆಲ್‌ ಸ್ಮಾರ್ಟ್‌ಫೋನ್‌ಗಳು (itel Smartphones) ಭಾರತದಲ್ಲಿ ಹೆಚ್ಚಿನ ಬೇಡಿಕೆ ಇವೆ. ಈ ನಡುವೆ ಐಟೆಲ್‌ ಭಾರತದಲ್ಲಿ ಹೊಸ ಬಜೆಟ್‌ ಬೆಲೆಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದೆ. ಈ ಫೋನ್‌ಗಳು ಬಳಕೆದಾರರಿಗೆ ಭಿನ್ನ ಫೀಚರ್ಸ್‌ ಅನುಭವ ನೀಡಲಿವೆ. ಈ ಫೋನ್ 50 ಮೆಗಾಪಿಕ್ಸೆಲ್‌ ಎಐ ಕ್ಯಾಮೆರಾ ಆಯ್ಕೆ ಪಡೆದಿದೆ.

ಹೌದು, ಐಟೆಲ್‌ ಇದೀಗ ಐಟೆಲ್‌ P55 ಸ್ಮಾರ್ಟ್‌ಫೋನ್ (Itel P55 Smartphone) ಅನ್ನು ಅನಾವರಣ ಮಾಡಲಿದೆ. ಈ ಫೋನ್ ಹತ್ತು ಸಾವಿರದ ಬೆಲೆಯಲ್ಲಿ ಲಭ್ಯ ಆಗುವ ಅತ್ಯುತ್ತಮ ಫೋನ್ ಎನಿಸಿಕೊಳ್ಳಲಿದೆ. ಈ ಫೋನ್ 24GB RAM ಆಯ್ಕೆ ಹಾಗೂ 45W ಪವರ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ಇಲ್ಲಿದೆ ನೋಡಿ.

ಐಟೆಲ್‌ P55 ಸ್ಮಾರ್ಟ್‌ಫೋನ್ ಲಾಂಚ್‌, 50MP ಕ್ಯಾಮೆರಾ.. ಬೆಲೆ ಎಷ್ಟು?

ಐಟೆಲ್‌ P55 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ ಪ್ರಭಾವಶಾಲಿ 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ (HD+ display) ಆಯ್ಕೆ ಪಡೆದಿದ್ದು, ಈ ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ ಆಕರ್ಷಕ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಕಾಣಬಹುದಾಗಿದೆ.

ಐಟೆಲ್‌ P55 ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 24GB RAM (8GB RAM + 16GB) ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, 128GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಈ ಫೋನ್ ಲಭ್ಯ ಇದೆ. ಈ ಮೂಲಕ ಬಜೆಟ್‌ ಬೆಲೆಯಲ್ಲಿ ಇಷ್ಟು ದೊಡ್ಡ ಮೊತ್ತದ ಸ್ಟೋರೇಜ್‌ ಆಯ್ಕೆ ಪಡೆದಿರುವ ಫೋನ್‌ ಆಗಿ ಗುರುತಿಸಿಕೊಂಡಿದೆ. ಅಲ್ಲದೆ ಈ ಫೋನ್ ದೈನಂದಿನ ಕಾರ್ಯಗಳು ಮತ್ತು ಮನರಂಜನೆಗೆ ಸೂಕ್ತವಾಗಿದೆ.

ಐಟೆಲ್‌ P55 ಸ್ಮಾರ್ಟ್‌ಫೋನ್ ಲಾಂಚ್‌, 50MP ಕ್ಯಾಮೆರಾ.. ಬೆಲೆ ಎಷ್ಟು?

ಐಟೆಲ್‌ P55 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ ಹಾಗೂ ಬ್ಯಾಟರಿ: ಈ ಫೋನ್ 50 ಮೆಗಾಪಿಕ್ಸೆಲ್‌ ಎಐ ಡ್ಯುಯಲ್ ಕ್ಯಾಮೆರಾ (AI dual camera) ರಚನೆ ಪಡೆದಿದೆ. ಈ ಮೂಲಕ ಉತ್ತಮವಾದ ಇಮೇಜ್ ಔಟ್‌ಪುಟ್ ಅನ್ನು ಪಡೆಯಬಹುದಾಗಿದೆ. ಜೊತೆಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ಫಾಸ್ಟ್ ಚಾರ್ಜ್ ಬೆಂಬಲ ಪಡೆದಿದೆ.

ಈ ಸಂಬಂಧ ಸಿಇಒ ಅರಿಜೀತ್ ತಾಲಪಾತ್ರ ಮಾಹಿತಿ ನೀಡಿ, ಐಟೆಲ್ P55 ಮತ್ತು P55+ ನ ಪರಿಚಯವು ನಮ್ಮ ಪೋರ್ಟ್‌ಫೋಲಿಯೊಗೆ ಒಂದು ದೊಡ್ಡ ಸೇರ್ಪಡೆಯಾಗಿದೆ. ನಾವೀನ್ಯತೆಗಾಗಿ ನಮ್ಮ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಸಾಟಿಯಿಲ್ಲದ ಫೀಚರ್ಸ್‌ಗಳು, ನಯವಾದ ಸೌಂದರ್ಯಶಾಸ್ತ್ರ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಇವುಗಳಲ್ಲಿ ಸಂಯೋಜಿಸಲಾಗಿದೆ. ಇವೆಲ್ಲವೂ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯ ಇವೆ ಎಂದಿದ್ದಾರೆ.

ಐಟೆಲ್‌ P55 ಸ್ಮಾರ್ಟ್‌ಫೋನ್ ಲಾಂಚ್‌, 50MP ಕ್ಯಾಮೆರಾ.. ಬೆಲೆ ಎಷ್ಟು?

ಇನ್ನು ಈ ಫೋನ್‌ಗಳು ಆಂಡ್ರಾಯ್ಡ್‌ 14 ಗೋ ಓಎಸ್‌ನೊಂದಿಗೆ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಆಗಿ ಇದು ಗುರುತಿಸಿಕೊಂಡಿದೆ. ದೀರ್ಘಾವಧಿಯ ಬ್ಯಾಟರಿ, ಕ್ಷಿಪ್ರ ಚಾರ್ಜಿಂಗ್, ಬಹುಕಾರ್ಯಕ ಸಾಮರ್ಥ್ಯ, ಹೆಚ್ಚಿದ ಶೇಖರಣಾ ಸಾಮರ್ಥ್ಯಗಳು ಮತ್ತು ಡಿಸ್‌ಪ್ಲೇಯ ಸ್ಪಷ್ಟತೆಯ ಹೆಚ್ಚುತ್ತಿರುವ ಅಗತ್ಯತೆಯ ಮಧ್ಯೆ, ಪವರ್ ಸರಣಿಯು ಆಧುನಿಕ ಸ್ಮಾರ್ಟ್‌ಫೋನ್ ಬಳಕೆದಾರರ ಅಗತ್ಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.

ಐಟೆಲ್‌ P55 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಐಟೆಲ್‌ ಸ್ಮಾರ್ಟ್‌ಫೋನ್ 4+8GB+128GB ವೇರಿಯಂಟ್‌ ಫೋನ್‌ 6,999 ರೂ.ಗಳ ಆಕರ್ಷಕ ಬೆಲೆಯಲ್ಲಿ ಲಭ್ಯ ಇದೆ. ಅಲ್ಲದೆ 8+16GB+128GB ವೇರಿಯಂಟ್‌ 8,999 ರೂ.ಗಳ ಬೆಲೆಗೆ ಲಭ್ಯ ಇದೆ. ಇನ್ನು ಬ್ಯಾಂಕ್ ಕೊಡುಗೆಗಳೊಂದಿಗೆ ಐಟೆಲ್‌ P55 ಸ್ಮಾರ್ಟ್‌ಫೋನ್ ಅನ್ನು 500 ರೂ.ಗಳ ರಿಯಾಯಿತಿ ಸಹ ಸಿಗಲಿದೆ.

Best Mobiles in India

English summary
Itel is now going to unveil the Itel P55 Smartphone. This phone is going to be the best phone available under ten thousand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+