ಇತ್ತೀಚಿಗಷ್ಟೆ ಲಾಂಚ್ ಆಗಿರುವ ಈ ಫೋನಿಗೆ ಭಾರೀ ರಿಯಾಯಿತಿ!
ದೈತ್ಯ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಒಂದಿಲ್ಲೊಂದು ಆಫರ್ ಮೂಲಕ ಶಾಪಿಂಗ್ ಪ್ರಿಯರ ಗಮನ ಸೆಳೆಯುತ್ತವೆ. ಸದ್ಯ ಇ ಕಾಮರ್ಸ್ ಅಮೆಜಾನ್ ತಾಣವು ಇತ್ತೀಚಿನ ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ರಿಯಯಾತಿ ಘೋಷಿಸಿದ್ದು, ಆ ಪೈಕಿ ಕರ್ವ್ ಡಿಸ್‌ಪ್ಲೇಯ ಐಟೆಲ್ S23+ ಸ್ಮಾರ್ಟ್‌ಫೋನ್ ಸಖತ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಜನಪ್ರಿಯ ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣದಲ್ಲಿ ಐಟೆಲ್ S23+ ಫೋನ್ ಶೇ 13% ರಷ್ಟು ರಿಯಾಯಿತಿ ಪಡೆದು ಮೊಬೈಲ್ ಪ್ರಿಯರ ಗಮನ ಸೆಳೆದಿದೆ. 16GB RAM+256GB ವೇರಿಯಂಟ್ ಫೋನಿನ ಆಫರ್ ಬೆಲೆಯು 13,999ರೂ. ಗಳು ಆಗಿದೆ. ಗ್ರಾಹಕರು ಅಮೆಜಾನ್‌ನಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್ ಸೇರಿದಂತೆ ಇತರೆ ಪಡೆದರೆ ಹೆಚ್ಚಿನ ಡಿಸ್ಕೌಂಟ್ ಪಡೆಯಲು ಅವಕಾಶ ಇದೆ.

ಅಂದಹಾಗೆ ಐಟೆಲ್ S23+ ಫೋನ್ 3D ಕರ್ವ್ಡ್ AMOLED ಮಾದರಿಯ ಡಿಸ್‌ಪ್ಲೇ ಪಡೆದಿರುವುದು ಪ್ರಮುಖ ಹೈಲೈಟ್ ಆಗಿದೆ. ಅಲ್ಲದೇ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಐಟೆಲ್ S23+ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಕರ್ವ್ಡ್ ಮಾದರಿಯ ಡಿಸ್‌ಪ್ಲೇ ರಚನೆ
ಐಟೆಲ್ S23+ ಮೊಬೈಲ್ 3D ಕರ್ವ್ಡ್ AMOLED ಮಾದರಿಯ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ರಚನೆ ಪಡೆದುಕೊಂಡಿದೆ. ಈ ಫೋನಿನ 2400 x 1080 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಹಾಗೆಯೇ ಪಂಚ್ ಹೋಲ್ ರಚನೆ ಕೂಡಾ ಪಡೆದುಕೊಂಡಿದ್ದು, ಸ್ಕ್ರೀನ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒದಗಿಸಲಾಗಿದೆ.

ಯಾವ ಪ್ರೊಸೆಸರ್ ಕೆಲಸ ಮಾಡುತ್ತೆ
ಈ ಮೊಬೈಲ್ 2GHz UNISOC T616 ಆಕ್ಟಾ-ಕೋರ್ 12nm ಪ್ರೊಸೆಸರ್ ಪವರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದು ಈ ಫೋನ್ 8 RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಬೆಂಬಲ ಅನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಅವಕಾಶ ಒದಗಿಸಲಾಗಿದೆ.
ಕ್ಯಾಮೆರಾ ಸೆನ್ಸಾರ್ ಮಾಹಿತಿ
ಐಟೆಲ್ S23+ ಮೊಬೈಲ್ ಹಿಂಬದಿ ಎರಡು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇರುವ ಮೊದಲ ಕ್ಯಾಮೆರಾವು ಸ್ಯಾಮ್‌ಸಂಗ್ ಐಸೊಸೆಲ್ GW3 ಸೆನ್ಸಾರ್ ಹೊಂದಿದೆ. ಅದೇ ರೀತಿ ಇದರ ದ್ವಿತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಪಡೆದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಸೆಲ್ಫಿ ಪ್ರಿಯರ ಗಮನ ಸೆಳೆದಿದೆ.

ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ
ಐಟೆಲ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಒಳಗೊಂಡಿದೆ. ಅಲ್ಲದೇ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಹೊಂದಿದೆ.
ಕಲರ್ ಆಯ್ಕೆ ಹಾಗೂ ಮೆಮೊರಿ
ಐಟೆಲ್ S23+ ಮೊಬೈಲ್ 8GB RAM + 256 GB ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಎಲಿಮೆಂಟಲ್ ಬ್ಲೂ ಮತ್ತು ಲೇಕ್ ಸಯಾನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








