ಐಟೆಲ್ S23+ ವಿಮರ್ಶೆ: ಕಡಿಮೆ ಬೆಲೆಗೆ 3D ಕರ್ವ್ಡ್ ಡಿಸ್‌ಪ್ಲೇಯ ಜಬರ್ದಸ್ತ್ ಫೋನ್!
ಐಟೆಲ್ ಸಂಸ್ಥೆಯು ತನ್ನ S ಸರಣಿಯಲ್ಲಿ ಇತ್ತೀಚಿಗೆ ಹೊಸದಾಗಿ ಬಿಡುಗಡೆ ಮಾಡಿರುವ ಐಟೆಲ್ S23+ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಬಜೆಟ್ ಪ್ರೈಸ್ ಹೊಂದಿರುವ ಐಟೆಲ್ S23+ ಫೋನ್ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ತನ್ನ ವರ್ಗದಲ್ಲೇ ಇತರೆ ಬ್ರ್ಯಾಂಡ್‌ಗಳಿಗೆ ಪೈಫೋಟಿ ನೀಡುವಂತಿದೆ.
ಐಟೆಲ್ ಕಂಪನಿಯ ಹೊಸ ಐಟೆಲ್ S23+ ಸ್ಮಾರ್ಟ್‌ಫೋನ್ ಕೆಲವು ಅಪ್‌ಡೇಟ್ ಆಯ್ಕೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ಕರ್ವ್ಡ್ ಡಿಸ್‌ಪ್ಲೇ ರಚನೆ, ಫೋನ್ ಬಾಹ್ಯ ವಿನ್ಯಾಸ, ಪ್ರೊಸೆಸರ್ ಪವರ್ ಹಾಗೂ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಇತರೆ ಕೆಲವು ಅಂಶಗಳು ಗ್ರಾಹಕರನ್ನು ಈ ಫೋನಿನತ್ತ ನೋಡುವಂತೆ ಮಾಡಿವೆ. ಹಾಗಾದರೆ ಐಟೆಲ್ S23+ ಫೋನಿನ ಫೀಚರ್ಸ್ ಹೇಗಿವೆ? ಈ ಫೋನಿನ ಕಾರ್ಯವೈಖರಿ ಹೇಗಿದೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

3D ಕರ್ವ್ಡ್ ಡಿಸ್‌ಪ್ಲೇ ರಚನೆ
ಐಟೆಲ್ S23+ ಸ್ಮಾರ್ಟ್‌ಫೋನ್ 3D ಕರ್ವ್ಡ್ AMOLED ಮಾದರಿಯ ಡಿಸ್‌ಪ್ಲೇ ಪಡೆದಿರುವುದು ಪ್ರಮುಖ ಹೈಲೈಟ್ ಆಗಿ ಕಾಣಿಸಿಕೊಂಡಿದೆ. ಬಜೆಟ್ ಬೆಲೆಯ ವಿಭಾಗದಲ್ಲಿ ಇದು ಗಮನ ಸೆಳೆವ ಫೀಚರ್ಸ್ ಆಗಿದೆ. ಇನ್ನು ಈ ಫೋನ್ ಡಿಸ್‌ಪ್ಲೇಯು 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ರಚನೆ ಇದ್ದು, 2400 x 1080 ಪಿಕ್ಸೆಲ್ ರೆಸಲ್ಯೂಶನ್ ಒಳಗೊಂಡಿದೆ. ಹಾಗೆಯೇ ಪಂಚ್ ಹೋಲ್ ರಚನೆ ಕೂಡಾ ಪಡೆದುಕೊಂಡಿದ್ದು, ಸ್ಕ್ರೀನ್ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒದಗಿಸಲಾಗಿದೆ. ತನ್ನ ವರ್ಗದಲ್ಲೇ ಇದು ಉತ್ತಮ ಡಿಸ್‌ಪ್ಲೇ ಎನ್ನಬಹುದಾಗಿದೆ.
ಪ್ರೊಸೆಸರ್ ಕಾರ್ಯವೈಖರಿ ಹೇಗೆ
ಈ ಸ್ಮಾರ್ಟ್‌ಫೋನ್ 2GHz UNISOC T616 ಆಕ್ಟಾ-ಕೋರ್ 12nm ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 8 RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಅವಕಾಶ ನೀಡಲಾಗಿದೆ. ಈ ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ ಅಥವಾ ಮೀಡಿಯಾ ಟೆಕ್ ಪ್ರೊಸೆಸರ್ ಆಯ್ಕೆ ಒದಗಿಸಿದ್ದರೆ ಮತ್ತಷ್ಟು ಬಲ ನೀಡಿದಂತೆ ಆಗುತ್ತಿತ್ತು ಎಂದು ಅನಿಸುತ್ತದೆ.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ರಚನೆ
ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇರುವ ಪ್ರಾಥಮಿಕ ಕ್ಯಾಮೆರಾವು ಸ್ಯಾಮ್‌ಸಂಗ್ ಐಸೊಸೆಲ್ GW3 ಸೆನ್ಸಾರ್ ಪಡೆದಿದೆ. ಅದೇ ರೀತಿ ಇದರ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದ್ದು, ಇದು ಫೋನಿನ ಮತ್ತೊಂದು ಹೈಲೈಟ್ಸ್‌ಗಳಲ್ಲಿ ಒಂದಾಗಿದೆ.
ಸ್ಪರ್ಧಾತ್ಮಕ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ
ಐಟೆಲ್ ಸಂಸ್ಥೆಯು ಸ್ಮಾರ್ಟ್‌ಫೋನ್ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಗಮನ ಸೆಳೆಯುವ ಪ್ರಯತ್ನ ಮಾಡಿದ್ದು, ಈ ನಿಟ್ಟಿನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ನೀಡಿದೆ. ಇದಕ್ಕೆ ಪೂರಕವಾಗಿ 18W ಬಲದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು ತನ್ನ ವಿಭಾಗದಲ್ಲಿ ಸ್ಪರ್ಧಾತ್ಮಕ ಬ್ಯಾಟರಿ ಆಯ್ಕೆ ಎನ್ನಬಹುದಾಗಿದೆ.

ಇದರ ಜೊತೆಗೆ ಐಟೆಲ್ ಈ ಮೊಬೈಲ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಹೊಂದಿರುವುದು ಪ್ರಮುಖ ಫೀಚರ್ಸ್‌ಗಳಲ್ಲಿ ಇದು ಸಹ ಒಂದು. ಈ ಮೊಬೈಲ್ 5G ನೆಟವರ್ಕ್ ಸಪೋರ್ಟ್ ಮಾಡುತ್ತದೆ. ಉಳಿದಂತೆ ಇತ್ತೀಚಿಗಿನ ಅಗತ್ಯ ಕನೆಕ್ಟಿವಿಟಿ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಇನ್ನು ಐಟೆಲ್ S23+ ಫೋನ್ (8GB RAM + 256GB) ಬೆಲೆಯು 13,999ರೂ. ಆಗಿದ್ದು, ಎಲಿಮೆಂಟಲ್ ಬ್ಲೂ ಮತ್ತು ಲೇಕ್ ಸಯಾನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ಕೊನೆಯ ಮಾತು
ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಐಟೆಲ್ S23+ ಸ್ಮಾರ್ಟ್‌ಫೋನ್ ಬಜೆಟ್ ದರದಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಆಗಿ ಕಾಣಿಸಿಕೊಂಡಿದೆ ಎಂದು ಹೇಳಬಹುದು. ಈ ಫೋನಿನ 3D ಕರ್ವ್ಡ್ ಡಿಸ್‌ಪ್ಲೇ, ಬಿಗ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆಗಳು ಇದಕ್ಕೆ ಪುಷ್ಠಿ ನೀಡುವಂತಿವೆ. ಅದಾಗ್ಯೂ, ಪ್ರೊಸೆಸರ್ ವಿಭಾಗದಲ್ಲಿ ಸ್ನ್ಯಾಪ್‌ಡ್ರಾಗನ್ ಅಥವಾ ಮೀಡಿಯಾ ಟೆಕ್ ಮಾದರಿಯ ಪ್ರೊಸೆಸರ್ ಒದಗಿಸಿದ್ದರೆ, ಇನ್ನಷ್ಟು ಬಲ ನೀಡಿದಂತೆ ಆಗುತ್ತಿತ್ತು. ಉಳಿದಂತೆ ಬಜೆಟ್ ಬೆಲೆ ಬೊಂಬಾಟ್ ಡಿಸ್‌ಪ್ಲೇ ಫೋನ್ ಇದಾಗಿದೆ.


Click it and Unblock the Notifications








