ಭಾರೀ ಗಮನ ಸೆಳೆದಿರುವ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್!
ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಇದು ಮೊಬೈಲ್‌ಗಳಿಗೆ ಏನಾದರೊಂದು ಡಿಸ್ಕೌಂಟ್ ನೀಡುತ್ತಾ ಗ್ರಾಹಕರನ್ನು ಆಕರ್ಷಿಸುತ್ತದೆ. ಈ ನಿಟ್ಟಿನಲ್ಲಿ ಖರೀದಿದಾರರು ಈ ಸೈಟ್ ಮೂಲಕ ಖರೀದಿಗೆ ಗಮನ ನೀಡುತ್ತಾರೆ. ಸದ್ಯ ಅಮೆಜಾನ್ ತಾಣದಲ್ಲಿ ಐಟೆಲ್ S23 ಮೊಬೈಲ್ ಅತ್ಯುತ್ತಮ ಕೊಡುಗೆಯ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ನಲ್ಲಿ ಐಟೆಲ್ S23 ಮೊಬೈಲ್ ಶೇ. 21% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಖರೀದಿದಾರರು 8GB RAM + 128GB ವೇರಿಯಂಟ್‌ನ ಫೋನ್ ಅನ್ನು 8,699ರೂ. ಗಳ ಆಫರ್ ಬೆಲೆಯಲ್ಲಿ ಖರೀದಿಗೆ ಅವಕಾಶ ಲಭ್ಯ. ಅಮೆಜಾನ್ ತಾಣದಲ್ಲಿ ಲಭ್ಯ ಇರುವ ಎಕ್ಸ್‌ಚೆಂಜ್ ಆಫರ್, ಬ್ಯಾಂಕ್ ಕೊಡುಗೆ ಹಾಗೂ ಇತರೆ ಆಫರ್ ಪಡೆದುಕೊಂಡರೆ 7469ರೂ. ಗಳ ದರದಲ್ಲಿ ಖರೀದಿ ಮಾಡಬಹುದು.

ಐಟೆಲ್ S23 ಮೊಬೈಲ್ ಆಕ್ಟಾ ಕೋರ್ 12nm ಯುನಿಸೊಕ್ T606 SoC ಪ್ರೊಸೆಸರ್ ಪವರ್‌ನೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಅಲ್ಲದೇ ಇದು 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಹೊಂದಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಐಟೆಲ್ S23 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೀಗಿದೆ
ಐಟೆಲ್ S23 ಮೊಬೈಲ್ 6.6 ಇಂಚಿನ HD+ ಐಪಿಎಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ.

ಪ್ರೊಸೆಸರ್ ಪವರ್ ಎಷ್ಟಿದೆ
ಐಟೆಲ್ S23 ಮೊಬೈಲ್ ಆಕ್ಟಾ ಕೋರ್ 12nm ಯುನಿಸೊಕ್ T606 SoC ಪ್ರೊಸೆಸರ್ ಪವರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೊರೇಜ್ ಅನ್ನು ಹೊಂದಿದೆ. ಇದಲ್ಲದೆ ವರ್ಚುವಲ್ RAM ಬಳಸುವುದಕ್ಕೆ ಕೂಡ ಅವಕಾಶ ಲಭ್ಯ, ಇದರಿಂದ ಆನ್‌ಬೋರ್ಡ್ ಮೆಮೊರಿಯನ್ನು 16 GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ಸೆನ್ಸಾರ್ ಮಾಹಿತಿ
ಐಟೆಲ್ S23 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದು ಕೊಂಡಿದೆ. ಇದರೊಟ್ಟಿಗೆ ಈ ಫೋನ್ LED ಫ್ಲ್ಯಾಷ್‌ನೊಂದಿಗೆ ಕಾಣಿಸಿಕೊಂಡಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಕೂಡಾ ಪಡೆದಿದೆ. ಹಿಂದಿನ ಕ್ಯಾಮೆರಾ ಡಿಸೈನ್ ವೃತ್ತಾಕಾರ ಮಾದರಿಯಲ್ಲಿ ಇದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಮಾಹಿತಿ
ಐಟೆಲ್ S23 ಮೊಬೈಲ್ 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡುವ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 15 ಗಂಟೆಗಳ ಬ್ಯಾಟರಿ ಅವಧಿ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಪಡೆದುಕೊಂಡಿದೆ.
ಮೆಮೊರಿ ಮತ್ತು ಕಲರ್ ಆಯ್ಕೆಯ ಸೌಲಭ್ಯ
ಐಟೆಲ್ S23 ಫೋನ್ 8 GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಹಾಗೆಯೇ ಈ ಮೊಬೈಲ್ ಅನ್ನು ಗ್ರಾಹಕರು ಮಿಸ್ಟರಿ ವೈಟ್ ಮತ್ತು ಸ್ಟಾರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಲು ಅವಕಾಶ ಇದೆ.


Click it and Unblock the Notifications








