Home
ಸುದ್ದಿಜಾಲ

3D ಕರ್ವ್ ಡಿಸ್‌ಪ್ಲೇ ಸೌಲಭ್ಯದ ಈ ಫೋನ್‌ ಬಜೆಟ್‌ ಬೆಲೆಗೆ ಎಂಟ್ರಿ ಕೊಡಲಿದೆ!

ಸ್ವದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಐಟೆಲ್‌ (itel) ತನ್ನ ಇತ್ತೀಚಿನ ಐಟೆಲ್‌ S23+ ಸ್ಮಾರ್ಟ್‌ಫೋನ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮಹತ್ವದ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ 10,000ರೂ. ಒಳಗಿನ ಸ್ಮಾರ್ಟ್‌ಫೋನ್ ಮೂಲಕ ಸದ್ದು ಮಾಡಿರುವ, ಐಟೆಲ್‌ ಈಗ 15,000 ರೂ. ವಿಭಾಗದಲ್ಲಿ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.

ಹೌಡು, ಮೂಲಗಳ ಪ್ರಕಾರ, ಸಂಸ್ಥೆಯ ಮುಂಬರುವ ಸ್ಮಾರ್ಟ್‌ಫೋನ್‌ 6.78 ಇಂಚಿನ FHD+ ಅಮೋಲೆಡ್‌ 3D ಕರ್ವ್ಡ್ ಸ್ಕ್ರೀನ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಅಲ್ಲದೇ ಇದು ನಯವಾದ ಮತ್ತು ದೃಶ್ಯ ಅನುಭವಕ್ಕಾಗಿ ಹೊಸ ಮಾನದಂಡವನ್ನು ಹೊಂದಿಸುತ್ತದೆ.

3D ಕರ್ವ್ ಡಿಸ್‌ಪ್ಲೇ ಸೌಲಭ್ಯದ ಈ ಫೋನ್‌ ಬಜೆಟ್‌ ಬೆಲೆಗೆ ಎಂಟ್ರಿ ಕೊಡಲಿದೆ!

ವರದಿಗಳ ಪ್ರಕಾರ, ಐಟೆಲ್‌ ಸಂಸ್ಥೆಯ ಹೆಸರಾಂತ S ಸರಣಿಯ ಪ್ರಭಾವಶಾಲಿ ಮಾದರಿಗೆ ಅನುಗುಣವಾಗಿ, ಐಟೆಲ್‌ S23+ (itel S23+) ಶಕ್ತಿಶಾಲಿ ಕ್ಯಾಮೆರಾವನ್ನು ಹೊಂದಿದ್ದು, ಅತ್ಯುತ್ತಮ ಛಾಯಾಗ್ರಹಣ ಉತ್ಸಾಹಿಗಳಿಗೆ ಇದು ಸೂಕ್ತ ಆಯ್ಕೆಯಾಗಿದೆ. ನಾವೀನ್ಯತೆಯಿಂದ ನಡೆಸಲ್ಪಡುವ ಉದ್ಯಮದಲ್ಲಿ, ಗಣನೀಯ ಸಂಗ್ರಹಣೆ ಮತ್ತು ಸಾಟಿಯಿಲ್ಲದ ಕಾರ್ಯಕ್ಷಮತೆಯನ್ನು ನೀಡುವ ಸ್ಮಾರ್ಟ್‌ಫೋನ್ ಆಟವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರತಿಯೊಬ್ಬರಿಗೂ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ಉದ್ದೇಶ ವನ್ನು ಐಟೆಲ್‌ ಕಂಪನಿಯು ಹೊಂದಿದೆ. ಸಂಸ್ಥೆಯ ಹೊಸ ಬ್ರ್ಯಾಂಡ್ ದೃಷ್ಟಿ, #JodeIndiaKaHarDilitel, ತಂತ್ರಜ್ಞಾನದ ಶಕ್ತಿಯ ಮೂಲಕ ಪ್ರತಿಯೊಬ್ಬ ಭಾರತೀಯನ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅವರ ಬದ್ಧತೆಯ ಬಗ್ಗೆ ಹೇಳುತ್ತದೆ.

ಐಟೆಲ್‌ S23+ ಡಿಸ್‌ಪ್ಲೇ ಮಾಹಿತಿ : ಈ ಫೋನ್‌ 6.78 ಇಂಚಿನ 3D ಬಾಗಿದ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯು FHD+ ಆಗಿರಲಿದೆ. ಸೆಂಟರ್ಡ್ ಪಂಚ್-ಹೋಲ್ ಕಟ್-ಔಟ್, 500 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌, DCI P3 ಬಣ್ಣದ ಹರವು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿರಲಿದೆ.

ಐಟೆಲ್‌ S23+ ಚಿಪ್‌ಸೆಟ್‌ ಮಾಹಿತಿ : ಐಟೆಲ್‌ S23+ ಫೋನ್‌ Unisoc T616 SoC ಪ್ರೊಸೆಸರ್‌ ಪಡೆದಿರಲಿದ್ದು, ಜೊತೆಗೆ G57 MP1 GPU ಸಹ ಇರಲಿದೆ. ಹಾಗೆಯೇ 8GB ವರೆಗೆ RAM ಹೊಂದಿರಲಿದ್ದು, 25GB UFS 2.0 ಆಂತರಿಕ ಸಂಗ್ರಹಣೆ ಪಡೆದಿರಲಿದೆ. ಅಲ್ಲದೇ 8GB ವರ್ಚುವಲ್ RAM, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸೌಲಭ್ಯ ಇರಲಿದೆ. ಅಲ್ಲದೇ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಕೂಡಾ ಲಭ್ಯ.

ಐಟೆಲ್‌ S23+ ಕ್ಯಾಮೆರಾಗಳ ಮಾಹಿತಿ : ಐಟೆಲ್‌ S23+ ಫೋನ್‌ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ, f/1.6 ಅಪರ್ಚರ್, LED ಫ್ಲ್ಯಾಶ್ ಸೌಲಭ್ಯ ಪಡೆದಿದೆ. ಸೆಕೆಂಡರಿ AI ಕ್ಯಾಮೆರಾ, ಐ ಟ್ರ್ಯಾಕಿಂಗ್ ಆಯ್ಕೆ ಸಹ ಪಡೆದಿದೆ. ಹಾಗೆಯೇ ಮುಂಭಾಗದ ಸೆಲ್ಫಿ ಕ್ಯಾಮೆರಾ 32MP ಸಾಮರ್ಥ್ಯದಲ್ಲಿ ಇದೆ.

ಐಟೆಲ್‌ S23+ ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳು : ಐಟೆಲ್‌ S23+ ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 18W ಚಾರ್ಜಿಂಗ್ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಲಭ್ಯ ಇರಲಿದೆ. ಜೊತೆಗೆ ಡೈನಾಮಿಕ್ ಐಲ್ಯಾಂಡ್ ತರಹದ ಡೈನಾಮಿಕ್ ಬಾರ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯಗಳು ಸಿಗಲಿವೆ.

ಐಟೆಲ್‌ S23+ ಕಲರ್‌ ಆಯ್ಕೆ : ಐಟೆಲ್‌ S23+ ಸ್ಮಾರ್ಟ್‌ಫೋನ್‌ ಲೇಕ್ ಸಯಾನ್ ಮತ್ತು ಎಲಿಮೆಂಟಲ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಐಟೆಲ್‌ S23+ ಫೋನ್‌ 15,000 ರೂ. ಪ್ರೈಸ್‌ ಟ್ಯಾಗ್‌ನ ಒಳಗೆ ಲಭ್ಯ.

Best Mobiles in India

English summary
itel S23+ set to redefine the sub 15k segment with 3D curve screen. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+