Itel: ಐಟೆಲ್‌ನ 256 GB ಇಂಟರ್ ಸ್ಟೋರೇಜ್ ಆಯ್ಕೆಯ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್!
ಐಟೆಲ್ (Itel) ಸ್ಮಾರ್ಟ್‌ಫೋನ್‌ಗಳು ಭಾರೀ ಅಗ್ಗದರ ಬೆಲೆಯಲ್ಲಿ ಭರ್ಜರಿ ಸೌಲಭ್ಯ ಕಲ್ಪಿಸಿಕೊಡುತ್ತಿವೆ. ಇತ್ತೀಚೆಗಷ್ಟೇ ಬಜೆಟ್ ಬೆಲೆಯಲ್ಲಿ ಹೊಸ ಹೊಸ ಫೋನ್‌ಗಳನ್ನೂ ಸಹ ಐಟೆಲ್ ಅನಾವರಣ ಮಾಡಿದೆ. ಅದರಂತೆ ಈಗ ಈಗಾಗಲೇ ಅಧಿಕ ಬೇಡಿಕೆ ಪಡೆದಿರುವ ಫೋನ್‌ವೊಂದು ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಐಟೆಲ್ S23+ ಸ್ಮಾರ್ಟ್‌ಫೋನ್ (Itel S23+ smartphone) ಅನ್ನು ಈಗ ಇನ್ನೂ ಅಗ್ಗದ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 256 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಆಫರ್ ವಿವರ, ಬ್ಯಾಂಕ್ ಕೊಡುಗೆ ಮತ್ತು ಇದರ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಟೆಲ್ S23+ ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಫೋನ್ 15,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು ನೀವು ಇದನ್ನು ಈಗ 13,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ ಫ್ಲಿಪ್‌ಕಾರ್ಟ್ ಭರ್ಜರಿ 12% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಸಹ ಇದ್ದು, ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಈ ಸ್ಮಾರ್ಟ್‌ಫೋನ್‌ನ ಬ್ಯಾಂಕ್ ಆಫರ್ ಬಗ್ಗೆ ಮಾತನಾಡುವುದಾದರೆ BOB ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಲು ಮುಂದಾದರೆ 10% ರಿಯಾಯಿತಿ, BOB ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಹಾಗೂ ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಸಿಗಲಿದೆ. ಇದರೊಂದಿಗೆ ಎಸಿ ಖರೀದಿ ಮಾಡಲು ಮುಂದಾದರೆ ಅದಕ್ಕೂ ಆಫರ್ ನೀಡಲಾಗುತ್ತದೆ.

ಐಟೆಲ್ S23+ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ 388 ppi ಸಾಂದ್ರತೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದುಕೊಂಡಿದೆ.
ಐಟೆಲ್ S23+ ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13, ಐಟೆಲ್ ಓಎಸ್ 13 ನಲ್ಲಿ ರನ್ ಆಗಲಿದ್ದು, ಯುನಿಸಾಕ್ ಟೈಗರ್ T616 (12 nm) ಪ್ರೊಸೆಸರ್ ಬಲ ಪಡೆದಿದ್ದು, ಮಾಲಿ-G57 MP1 ಗ್ರಾಪಿಕ್ಸ್ ಕಾರ್ಡ್ ಬಲ ಪಡೆದಿದ್ದು, 8 GB RAM ಆಯ್ಕೆ ಹಾಗೂ 256 GB ಇಂಟರ್ ಸ್ಟೋರೇಜ್ ಬಲದೊಂದಿಗೆ ಉತ್ತಮವಾಗಿ ಕೆಲಸ ಮಾಡಲಿದೆ.
ಐಟೆಲ್ S23+ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 0.08 ಮೆಗಾಪಿಕ್ಸೆಲ್ ಆಕ್ಸಿಲಿಯರಿ ಲೆನ್ಸ್ ಆಯ್ಕೆ ಪಡೆದಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಎಲ್ಇಡಿ ಫ್ಲ್ಯಾಶ್ ಫೀಚರ್ಸ್ ಹಾಗೂ 1080p@30fps ಸಾಮರ್ಥ್ಯದ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದಾಗಿದೆ.

ಐಟೆಲ್ S23+ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 18W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದ್ದು ಉತ್ತಮ ಬ್ಯಾಕಪ್ ನೀಡಲಿದೆ. ಇದರೊಂದಿಗೆ ಈ ಫೋನ್ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್ ಸ್ಥಾನೀಕರಣ, ಯುಎಸ್‌ಬಿ ಟೈಪ್-ಸಿ 2.0, ಓಟಿಜಿ, ಫಿಂಗರ್‌ಪ್ರಿಂಟ್, ಅಕ್ಸೆಲೆರೊಮೀಟರ್, ಗೈರೊ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.


Click it and Unblock the Notifications








