Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್‌ S24 ಸ್ಮಾರ್ಟ್‌ಫೋನ್‌!

ಅಗ್ಗದ ಬೆಲೆಯಲ್ಲಿ ಭಿನ್ನ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಐಟೆಲ್‌ ಸಂಸ್ಥೆಯು ಇದೀಗ ಭಾರತದಲ್ಲಿ ನೂತನವಾಗಿ ಐಟೆಲ್‌ S24 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಇನ್ನು ಬರಲಿರುವ ಈ ಫೋನ್‌ ಸಂಸ್ಥೆಯು ಐಟೆಲ್‌ S23+ ಸ್ಮಾರ್ಟ್‌ಫೋನ್‌ ಉತ್ತರಾಧಿಕಾರಿ ಆಗಿರಲಿದೆ.

ಹೌದು, ಐಟೆಲ್‌ ಸಂಸ್ಥೆಯು ಶೀಘ್ರದಲ್ಲೇ ಹೊಸದಾಗಿ ಐಟೆಲ್‌ S24 (itel S24) ಫೋನ್‌ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಸಂಸ್ಥೆಯು ಲಾಂಚ್‌ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಅಮೆಜಾನ್‌ ತಾಣದಲ್ಲಿ ಮೈಕ್ರೋ-ಸೈಟ್ ಲೈವ್ ಆಗಿದೆ. ಅಂದಹಾಗೆ ಈ ಮೊಬೈಲ್‌ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆಯನ್ನು ಒಳಗೊಂಡಿರಲಿದೆ.

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್‌ S24 ಸ್ಮಾರ್ಟ್‌ಫೋನ್‌!

ಐಟೆಲ್‌ ಕಂಪನಿಯು ಐಟೆಲ್‌ S24 ಫೋನ್‌ ಜೊತೆಗೆ ಐಟೆಲ್‌ T11 ಪ್ರೊ ( itel T11 Pro) ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಲಿದೆ. ಇನ್ನು ಈ ನೂತನ ಇಯರ್‌ಬಡ್ಸ್ 360 ಡಿಗ್ರಿ ಸೂಪರ್ ಬಾಸ್ ತಂತ್ರಜ್ಞಾನವನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ. ಹಾಗಾದರೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐಟೆಲ್‌ S24 ಫೋನ್‌ ಜೊತೆಗೆ ಐಟೆಲ್‌ T11 ಪ್ರೊ ಡಿವೈಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್‌ S24 ಫೋನ್‌ ನಿರೀಕ್ಷಿತ ಫೀಚರ್ಸ್

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐಟೆಲ್‌ S24 ಮೊಬೈಲ್‌ 6.6 ಇಂಚಿನ LCD ಡಿಸ್‌ಪ್ಲೇ ಪಡೆದಿರಲಿದ್ದು, 1612 × 720 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಪಡೆದಿರಲಿದೆ. ಇದು ಪಂಚ್ ಹೋಲ್ ನಾಚ್ ವಿನ್ಯಾಸ ಇರಲಿದ್ದು, 90Hz ರಿಫ್ರೆಶ್ ರೇಟ್ ಹೊಂದಿರಲಿದೆ.

ಹಾಗೆಯೇ ಈ ಫೋನ್‌ 4GB + 128GB ಹಾಗೂ 8GB RAM + 256GB ಸ್ಟೋರೇಜ್‌ ವೇರಿಯಂಟ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ 8GB ವರ್ಚುವಲ್‌ RAM ಸೌಲಭ್ಯದ ಆಯ್ಕೆ ಪಡೆದಿರಲಿದೆ. ಇನ್ನು ಈ ಮೊಬೈಲ್‌ ಮೀಡಿಯಾ ಟೆಕ್ ಹಿಲಿಯೊ G91 ಚಿಪ್‌ಸೆಟ್‌ ಪ್ರೊಸೆಸರ್‌ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಖಚಿತ ಎನ್ನಲಾಗಿದೆ.

ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದ್ದು, ಇದು f/1.6 ಅಪರ್ಚರ್ ಪಡೆದಿರಲಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯ ಇರಲಿದೆ. ಇದರೊಂದಿಗೆ ಈ ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಕೂಡಾ ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್‌ S24 ಸ್ಮಾರ್ಟ್‌ಫೋನ್‌!

ಐಟೆಲ್‌ T11 ಪ್ರೊ ಫೀಚರ್ಸ್‌

ನೂತನ ಫೋನ್‌ ಜೊತೆಗೆ ಕಂಪನಿಯು ಐಟೆಲ್‌ T11 ಪ್ರೊ ಬಡ್ಸ್‌ ಡಿವೈಸ್‌ ಸಹ ಲಾಂಚ್ ಮಾಡಲು ರೆಡಿಯಾಗಿದೆ. ಈ ಸಾಧನವು ಅತ್ಯುತ್ತಮ ಆಡಿಯೋ ಅನುಭವಕ್ಕಾಗಿ 13mm ಆಡಿಯೋ ಡ್ರೈವರ್‌ ಸೌಲಭ್ಯ ಪಡೆದಿರಲಿದೆ. ಇದರೊಂದಿಗೆ 360 ಡಿಗ್ರಿ ಸೂಪರ್ ಬಾಸ್ ತಂತ್ರಜ್ಞಾನವನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಸಂಸ್ಥೆಯು ಕೆಲ ತಿಂಗಳ ಹಿಂದೆ ಬಿಡುಗಡೆ ಮಾಡಿರುವ ಐಟೆಲ್‌ S23+ ಸ್ಮಾರ್ಟ್‌ಫೋನ್ 3D ಕರ್ವ್ಡ್‌ AMOLED ಮಾದರಿಯ ಡಿಸ್‌ಪ್ಲೇ ಪಡೆದಿದೆ. ಅಲ್ಲದೇ UNISOC T616 ಆಕ್ಟಾ-ಕೋರ್ 12nm ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ಇದ್ದು, ಬೆಂಬಲವಾಗಿ 18W ಬಲದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

Best Mobiles in India

English summary
itel S24 with 108MP ultra-clear camera and itel T11 Pro set to launch in India soon. check all other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+