Home
ಸುದ್ದಿಜಾಲ

ಈ 108ಎಂಪಿ ಕ್ಯಾಮೆರಾ ಫೋನಿಗೆ ಬಿಗ್‌ ಡಿಸ್ಕೌಂಟ್‌!..ಉಚಿತ ಸ್ಮಾರ್ಟ್‌ವಾಚ್‌ ಸಿಗುತ್ತೆ!

ಇ ಕಾಮರ್ಸ್‌ ದೊಡ್ಡಣ್ಣ ಎಂದು ಬಿಂಬಿತವಾಗಿರುವ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಏನಾದರೊಂದು ರಿಯಾಯಿತಿ ಮಾರಾಟದ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾ ಮುನ್ನಡೆದಿದೆ. ಅದರಲ್ಲಿಯೂ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚುವರಿ ಡಿಸ್ಕೌಂಟ್‌ ಕೊಡುಗೆ ತಿಳಿಸುತ್ತದೆ. ಸದ್ಯ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಐಟೆಲ್‌ ಸಂಸ್ಥೆಯ ಐಟೆಲ್ S24 ( itel S24 ) ಮೊಬೈಲ್‌ಗೆ ಈಗ ಭರ್ಜರಿ ರಿಯಾಯಿತಿ ಪಡೆದಿದ್ದು, ಜೊತೆಗೆ ಉಚಿತ ಸ್ಮಾರ್ಟ್‌ವಾಚ್‌ ಸಹ ದೊರೆಯುತ್ತದೆ.

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಐಟೆಲ್ S24 ( itel S24 ) ಮೊಬೈಲ್‌ ಫೋನ್‌ ಶೇ. 23% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 8GB + 128GB ವೇರಿಯಂಟ್‌ 9,999ರೂ. ಗಳ ಆಕರ್ಷಕ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಇದಲ್ಲದೇ ಖರೀದಿದಾರರಿಗೆ ಐಟೆಲ್‌ 42 ಸ್ಮಾರ್ಟ್‌ವಾಚ್‌ (itel 42 Smartwatch) ಲಭ್ಯವಾಗಲಿದೆ. ಇದರೊಂದಿಗೆ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯದ ಆಯ್ಕೆ ಹಾಗೂ ಕೆಲವು ಆಯ್ದ ಬ್ಯಾಂಕ್‌ಗಳಿಂದ ಕೊಡುಗೆ ಸಹ ದೊರೆಯುತ್ತವೆ.

ಈ 108ಎಂಪಿ ಕ್ಯಾಮೆರಾ ಫೋನಿಗೆ ಬಿಗ್‌ ಡಿಸ್ಕೌಂಟ್‌!..ಉಚಿತ ವಾಚ್‌ ಸಿಗುತ್ತೆ!

ಇನ್ನು ಈ ಮೊಬೈಲ್ ಮೀಡಿಯಾಟೆಕ್‌ ಹಿಲಿಯೋ G91 ಆಕ್ಟಾ-ಕೋರ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಡಾನ್ ವೈಟ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇನ್ನುಳಿದಂತೆ ಐಟೆಲ್‌ S24 ಮೊಬೈಲ್‌ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ S24 ಫೀಚರ್ಸ್‌ ಹೀಗಿವೆ

ಐಟೆಲ್ S24 ಮೊಬೈಲ್‌ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಪಡೆದಿದ್ದು, ಇದು ಪಂಚ್-ಹೋಲ್ ಶೈಲಿ ಪಡೆದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ನಲ್ಲಿ 'ಡೈನಾಮಿಕ್ ಬಾರ್' ಫೀಚರ್ಸ್‌ ಇದೆ. ಇದರಲ್ಲಿ ಮತ್ತು ಬ್ಯಾಟರಿ ಚಾರ್ಜಿಂಗ್ ವಿವರಗಳು, ಒಳಬರುವ ಕರೆ ನೋಟಿಫಿಕೇಶನ್‌ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಕಾಣಿಸುತ್ತದೆ.

ಐಟೆಲ್ S24 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G91 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 16GB RAM (ವರ್ಚುವಲ್ RAM ವಿಸ್ತರಣೆಯ ಮೂಲಕ) ಮತ್ತು 128GB ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಈ ಫೋನ್ ಮಾಲಿ G52 ಜಿಪಿಯು ಬಲ ಪಡೆದಿದೆ.

ಐಟೆಲ್ S24 ಮೊಬೈಲ್‌ 108 ಮೆಗಾ ಪಿಕ್ಸೆಲ್‌ ಸ್ಯಾಮ್‌ಸಂಗ್‌ ISOCELL HM6 ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ ಸೌಲಭ್ಯ ಪಡೆದಿದ್ದು, ಇದು 3x ಜೂಮ್ ಮತ್ತು f/1.6 ಅಪರ್ಚರ್ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಪಿ ಹಾಗೂ ವಿಡಿಯೋ ಕರೆಗಳಿಗಾಗಿ ಇದರಲ್ಲಿ 8 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಐಟೆಲ್ S24 ಮೊಬೈಲ್‌ 18W ವೇಗದ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎಐ ಸ್ಮಾರ್ಟ್ ಚಾರ್ಜ ಆಯ್ಕೆ ಪಡೆದಿದೆ. ಹಾಗೆಯೇ ಬ್ಯಾಟರಿ ಬಾಳಿಕೆಯನ್ನು ಜಾಸ್ತಿ ಮಾಡಲು ಮತ್ತು ಸುರಕ್ಷಿತ ಚಾರ್ಜಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಚಾರ್ಜಿಂಗ್ ವೇಗವನ್ನು ಇದು ಸರಿಹೊಂದಿಸುವ ಕೆಲಸ ಮಾಡುತ್ತದೆ.

ಹಾಗೆಯೇ ಈ ಮೊಬೈಲ್‌ ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುತ್ತದೆ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್-ಸಿಮ್, 4G, ವೈ-ಫೈ, ಜಿಪಿಎಸ್‌, ಬ್ಲೂಟೂತ್ ಆವೃತ್ತಿ 5.0, ಯುಎಸ್‌ಬಿ ಟೈಪ್-ಸಿ 2.0 ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
itel S24 received huge discount and buyers get free smartwatch. check out complete details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+