Home
ಸುದ್ದಿಜಾಲ

Itel: ಭಾರತದಲ್ಲಿ ಐಟೆಲ್ S24 ಲಾಂಚ್‌! 108MP ಕ್ಯಾಮೆರಾ.. ಬೆಲೆ ಇಷ್ಟೇ

ಬಹು ನಿರೀಕ್ಷಿತ ಐಟೆಲ್ S24 ಸ್ಮಾರ್ಟ್‌ಫೋನ್‌ (Itel S24 Smartphone) ಅನ್ನು ಕೊನೆಗೂ ಭಾರತದಲ್ಲಿ ಲಾಂಚ್‌ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಡೈನಾಮಿಕ್ ಬಾರ್ ಫೀಚರ್ಸ್‌ ಹೊಂದಿದ್ದು, ಹೆಚ್‌ಡಿ ಪ್ಲಸ್‌ ಪಂಚ್-ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ.

ಹೌದು, ಭಾರತದಲ್ಲಿ ಇದೀಗ ಐಟೆಲ್ S24 ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಎಐ ಚಾಲಿತ 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಡ್ಯುಯಲ್ ಡಿಟಿಎಸ್‌ ಸ್ಪೀಕರ್‌ಗಳು ಮತ್ತು ಬಣ್ಣ ಬದಲಾಯಿಸುವ ವಿನ್ಯಾಸದೊಂದಿಗೆ ಬರುತ್ತದೆ. ಹಾಗಂದ ಮಾತ್ರಕ್ಕೆ ಈ ಫೋನ್‌ಗೆ ಭಾರೀ ಬೆಲೆ ಇರಲಿದೆ ಎಂದುಕೊಳ್ಳಬೇಡಿ. ಹಾಗಿದ್ರೆ ಇದರ ಫೀಚರ್ಸ್‌ ಏನು?, ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಐಟೆಲ್ S24 ಲಾಂಚ್‌! 108MP ಕ್ಯಾಮೆರಾ.. ಬೆಲೆ ಇಷ್ಟೇ

ಐಟೆಲ್ S24 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಇದು ಪಂಚ್-ಹೋಲ್ ಶೈಲಿ ಪಡೆದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ನಲ್ಲಿ 'ಡೈನಾಮಿಕ್ ಬಾರ್' ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಇದು ಸೆಲ್ಫಿ ಕ್ಯಾಮರಾ ಕಟೌಟ್ ಸುತ್ತಲೂ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮತ್ತು ಬ್ಯಾಟರಿ ಚಾರ್ಜಿಂಗ್ ವಿವರಗಳು, ಒಳಬರುವ ಕರೆ ನೋಟಿಫಿಕೇಶನ್‌ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ತೋರಿಸುತ್ತದೆ.

ಐಟೆಲ್ S24 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಮೀಡಿಯಾಟೆಕ್‌ ಹಿಲಿಯೋ G91 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM (ವರ್ಚುವಲ್ RAM ವಿಸ್ತರಣೆಯ ಮೂಲಕ) ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಈ ಫೋನ್ ಮಾಲಿ G52 ಜಿಪಿಯು ಬಲ ಪಡೆದಿದೆ.

ಭಾರತದಲ್ಲಿ ಐಟೆಲ್ S24 ಲಾಂಚ್‌! 108MP ಕ್ಯಾಮೆರಾ.. ಬೆಲೆ ಇಷ್ಟೇ

ಐಟೆಲ್ S24 ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್‌ ಸ್ಯಾಮ್‌ಸಂಗ್‌‌ ISOCELL HM6 ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ ಹೊಂದಿದ್ದು, ಇದು 3x ಜೂಮ್ ಮತ್ತು f/1.6 ಅಪರ್ಚರ್ ಹೊಂದಿದೆ. ಮುಖ್ಯ ಕ್ಯಾಮೆರಾವನ್ನು ಸೆಕೆಂಡರಿ ಕ್ಯೂವಿಜಿಎ ಡೆಪ್ತ್ ಸೆನ್ಸರ್ ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ ಸೆಲ್ಪಿ ಹಾಗೂ ವಿಡಿಯೋ ಕರೆಗಳಿಗಾಗಿ ಇದರಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಐಟೆಲ್ S24 ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 18W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎಐ ಸ್ಮಾರ್ಟ್ ಚಾರ್ಜ ಆಯ್ಕೆ ಪಡೆದಿದ್ದು, ಇದು ಚಾರ್ಜಿಂಗ್ ದಿನಚರಿಗಳನ್ನು ಲೆಕ್ಕಹಾಕಲಿದೆ. ಹಾಗೆಯೇ ಬ್ಯಾಟರಿ ವಯಸ್ಸನ್ನು ಜಾಸ್ತಿ ಮಾಡಲು ಮತ್ತು ಸುರಕ್ಷಿತ ಚಾರ್ಜಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಚಾರ್ಜಿಂಗ್ ವೇಗವನ್ನು ಇದು ಸರಿಹೊಂದಿಸುವ ಕೆಲಸ ಮಾಡುತ್ತದೆ.

ಭಾರತದಲ್ಲಿ ಐಟೆಲ್ S24 ಲಾಂಚ್‌! 108MP ಕ್ಯಾಮೆರಾ.. ಬೆಲೆ ಇಷ್ಟೇ

ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುತ್ತದೆ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, ವೈ-ಫೈ, ಜಿಪಿಎಸ್‌, ಬ್ಲೂಟೂತ್ ಆವೃತ್ತಿ 5.0, ಯುಎಸ್‌ಬಿ ಟೈಪ್-ಸಿ 2.0 ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ ಐಟೆಲ್ S24 ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಐಟೆಲ್ S24 ಸ್ಮಾರ್ಟ್‌ಫೋನ್‌ನ 8GB/128GB ವೇರಿಯಂಟ್‌ಗೆ 10,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಡಾನ್ ವೈಟ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದ್ದು ಗ್ರಾಹಕರು ಈ ಫೋನ್‌ ಅನ್ನು ಅಮೆಜಾನ್‌ನಿಂದ ಮುಂದಿನ ಖರೀದಿ ಮಾಡಬಹುದು. ಈ ಮೂಲಕ ಖರೀದಿ ಮಾಡುವ ಗ್ರಾಹಕರು 999 ಮೌಲ್ಯದ ಐಟೆಲ್‌ 42 ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.

Best Mobiles in India

English summary
Itel S24 smartphone has just been unveiled in India. The smartphone features an 108-megapixel camera, dual DTS speakers and a color-changing design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+