ಈ ನೂತನ 5G ಫೋನ್ ಬೆಲೆ ತಿಳಿದ್ರೆ, ನಿಜಕ್ಕೂ ಶಾಕ್!..ಡ್ಯುಯಲ್ ಕ್ಯಾಮೆರಾ ಪಕ್ಕಾ!
ಐಟೆಲ್ ಮೊಬೈಲ್ ಸಂಸ್ಥೆಯು ಭಾರತದಲ್ಲಿ ಶೀಘ್ರದಲ್ಲೇ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಐಟೆಲ್ ಬಿಡುಗಡೆ ಮಾಡಲಿರುವ ನೂತನ ಫೋನ್ ಸುಮಾರು 10,000ರೂ. ಕ್ಕಿಂತ ಪ್ರೈಸ್‌ಟ್ಯಾಗ್ ಹೊಂದಿರಲಿದ್ದು, 5G ಸಪೋರ್ಟ್ ಕೂಡಾ ಪಡೆದಿರಲಿದೆ.
ಹೌದು, ಐಟೆಲ್ ಮೊಬೈಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಐಟೆಲ್ P55 5G ( itel P55 5G ) ಮೊಬೈಲ್ ಅನ್ನು ಪರಿಚಯಿಸಲಿದ್ದು, ಇದು ಅಗ್ಗದ ಬೆಲೆಯ 5G ಫೋನ್ ಎಂಬ ಹೆಸರಿಗೆ ಪಾತ್ರವಾಗಲಿದೆ. ಇದರೊಂದಿಗೆ ಕೆಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಕೂಡಾ ಈ ಫೋನ್ ಒಳಗೊಂಡಿರಲಿದೆ.
ಕೌಂಟರ್ ಪಾಯಿಂಟ್ ರಿಸರ್ಚ್‌ನ ವರದಿ ಪ್ರಕಾರ, ಐಟೆಲ್ ಮೊಬೈಲ್ ಸಂಸ್ಥೆಯು ಈಗಾಗಲೇ 8,000 ರೂ. ಪ್ರೈಸ್‌ಟ್ಯಾಗ್‌ನಲ್ಲಿ ಲಕ್ಷಾಂತರ ಗ್ರಾಹಕರ ಮನ ಗೆದ್ದಿದೆ. ಅದೇ ರೀತಿ ಸಂಸ್ಥೆಯು ಬರಲಿರುವ ಹೊಸ ಐಟೆಲ್ P55 5G ( itel P55 5G ) ಫೋನ್ ಸಹ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಗಳು ಇವೆ.

ಹಿಂದಿನ ಸಂದರ್ಶನಗಳಲ್ಲಿ, ಐಟೆಲ್ ಸಂಸ್ಥೆಯ CEO, ಅರ್ಜಿತ್ ತಾಲಪತ್ರ (Arijeet Talapatra) 2023 ರಲ್ಲಿ 5G ಸ್ಮಾರ್ಟ್‌ಫೋನ್‌ನ ಸನ್ನಿಹಿತ ಬಿಡುಗಡೆಯ ಕುರಿತು ಪ್ರಸ್ತಾಪಿಸಿದ್ದರು. ಹಾಗಾದರೆ ಐಟೆಲ್ P55 5G ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ P55 5G ನಿರೀಕ್ಷಿತ ಫೀಚರ್ಸ್ :
ಐಟೆಲ್ P55 5G ಫೋನ್ ಬಾಗಿದ ಅಂಚುಗಳಗಳನ್ನು ಪಡೆದಿರಲಿದ್ದು, ಜೊತೆಗೆ ಡ್ಯುಯಲ್-ಕ್ಯಾಮೆರಾ ರಚನೆ ಅನ್ನು ಹೊಂದಿರುತ್ತದೆ ಎಂದು ಟೀಸರ್ ನಿಂದ ತಿಳಿಯುತ್ತದೆ. ಹಾಗೆಯೇ ಇದರ ಪವರ್ ಮತ್ತು ವಾಲ್ಯೂಮ್ ಕೀಗಳನ್ನು ಮೊಬೈಲ್‌ನ ಬಲ ತುದಿಯಲ್ಲಿ ನೀಡಲಾಗಿದೆ. ಆದರೆ ಫೋನಿನ ಡಿಸ್‌ಪ್ಲೇ ಗಾತ್ರ, ಕ್ಯಾಮೆರಾ ಮತ್ತು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
ಐಟೆಲ್ ಸಂಸ್ಥೆಯು ಜುಲೈನಲ್ಲಿ ಭಾರತದಲ್ಲಿ ಐಟೆಲ್ P40+ ಮತ್ತು ಐಟೆಲ್ A60s ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿತು. ಆ ಪೈಕಿ ಐಟೆಲ್ P40+ ಬೆಲೆ 8,099 ರೂ, ಪಡೆದಿದ್ದು, ಹಾಗೆಯೇ itel A60s ಬೆಲೆ 6,299 ರೂ. ಒಳಗೊಂಡಿದೆ. ಅಲ್ಲದೇ 6.8 ಇಂಚಿನ IPS LCD ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು HD+ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ.
ಹಾಗೆಯೇ ಈ ಫೋನ್ Unisoc T606 ಚಿಪ್‌ಸೆಟ್ ಪ್ರೊಸೆಸರ್‌ನಿಂದ ರನ್ ಆಗಲಿದ್ದು, ಇದು 4GB RAM ಮತ್ತು 128GB ಆಂತರಿಕ ಸ್ಟೋರೇಜ್ ನೊಂದಿಗೆ ಕಾಣಿಸಿಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ರಚನೆ ಇದ್ದು, ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸಲ್ ಮತ್ತು 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. 7,000mAh ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಬ್ಯಾಟರಿಯು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಶಕ್ತಿಯನ್ನು ಪಡೆದಿದೆ.
ಇದಲ್ಲದೇ ಸಂಸ್ಥೆಯ ಐಟೆಲ್ A60s ಫೋನ್ ಹೆಚ್‌ಡಿ+ ರೆಸಲ್ಯೂಶನ್ ಜೊತೆಗೆ 6.6 ಇಂಚಿನ IPS LCD ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ Unisoc SC9863A1 SoC ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಡ್ಯುಯಲ್-ಕ್ಯಾಮೆರಾ ಇದದ್ದು, ಪ್ರಾಥಮಿಕ ಕ್ಯಾಮೆರಾ 8 ಎಂಪಿ ಆಗಿದೆ. ಇನ್ನು ಮುಂಭಾಗದಲ್ಲಿ 5 ಎಂಪಿ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಅಲ್ಲದೇ 5,000mAh ಬ್ಯಾಟರಿ ಹಾಗೂ 10W ಫಾಸ್ಟ್ ಚಾರ್ಜಿಂಗ್ ಪಡೆದಿದೆ.


Click it and Unblock the Notifications








