ಬ್ಲೂಟೂತ್ ಕಾಲಿಂಗ್ ಸೌಲಭ್ಯದ ಈ ಸ್ಮಾರ್ಟ್‌ವಾಚ್ ಕಡಿಮೆ ಬೆಲೆಗೆ ಲಭ್ಯ!
ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಐಟೆಲ್ ( itel ) ಭಾರತದಲ್ಲಿ ಇತ್ತೀಚಿಗೆ ಸ್ಮಾರ್ಟ್‌ವಾಚ್ 2ES ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಉತ್ಪನ್ನಗಳ ಪೋರ್ಟ್‌ಫೋಲಿಯೋ ವಿಸ್ತರಿಸಿಕೊಂಡಿದೆ. ಸಂಸ್ಥೆಯು ನೂತನ ಸ್ಮಾರ್ಟ್‌ವಾಚ್ ಆಕರ್ಷಕ ಡಿಸೈನ್ ರಚನೆಯನ್ನು ಪಡೆದುಕೊಂಡಿದೆ. ಇದರ ಜತೆಗೆ ದೊಡ್ಡ ಬ್ಯಾಟರಿ ಸೌಲಭ್ಯ ಹೊಂದಿದ್ದು, ಸುಮಾರು 12 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒದಗಿಸುತ್ತದೆ.
ಹೌದು, ಐಟೆಲ್ ಸಂಸ್ಥೆಯ ಸ್ಮಾರ್ಟ್‌ವಾಚ್ 2SE ವಾಚ್ ( itel Smartwatch 2ES ) ಇದೀಗ ಗ್ರಾಹಕರ ಖರೀದಿಗೆ ಲಭ್ಯ ಇದೆ. ಈ ವಾಚ್ ಅಂತರ್ನಿರ್ಮಿತ ಮೈಕ್ರೊಫೋನ್ ಕರೆಗಳನ್ನು ಮಾಡಲು ಅನುವು ಮಾಡಿಕೊಂಡುತ್ತದೆ. ಹಾಗೆಯೇ ಹೃದಯ ಬಡಿತ ಮಾನಿಟರ್ ಮತ್ತು ರಕ್ತದ ಆಮ್ಲಜನಕ ಮಾನಿಟರ್ ಸೌಲಭ್ಯಗಳನ್ನು ಒಳಗೊಂಡಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಖರೀದಿ ಮಾಡಬಹುದು.

ಇನ್ನು ಈ ವಾಚ್ AI ವಾಯಿಸ್ ಅಸಿಸ್ಟಂಟ್ ಸೌಲಭ್ಯ ಪಡೆದಿದ್ದು, ಇದು ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಬಳಕೆದಾರರಿಗೆ ಕರೆಗಳನ್ನು ಮಾಡಲು, ಮೆಸೆಜ್‌ಗಳನ್ನು ಕಳುಹಿಸಲು ಮತ್ತು ಇತರೆ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ನಿಯಂತ್ರಿಸಲು ಅನುಮತಿಸುತ್ತದೆ. ಹಾಗಾದರೆ ಐಟೆಲ್ ಸ್ಮಾರ್ಟ್‌ವಾಚ್ 2SE ಡಿವೈಸ್‌ನ ಇತರೆ ಸೌಲಭ್ಯಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ IP68 ವಾಟರ್ ರೆಸಿಸ್ಟೆಂಟ್ ಸೌಲಭ್ಯ ಪಡೆದಿದ್ದು, 1.8 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಡಿಸ್‌ಪ್ಲೇಯು 90% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದ್ದು, 500nits ವರೆಗಿನ ಬ್ರೈಟ್ನೆಸ್ ಅನ್ನು ಹೊಂದಿದೆ. ಹಾಗೆಯೇ ಈ ವಾಚ್ 250mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ.
ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ 12 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಡಿವೈಸ್ ಮ್ಯಾಗ್ನೆಟಿಕ್ ಚಾರ್ಜಿಂಗ್ ಸೌಲಭ್ಯ ಅನ್ನು ಒಳಗೊಂಡಿದೆ. ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ ಸಿಟಿ ಬ್ಲೂ, ರೆಡ್, ಗ್ರೀನ್ ಮತ್ತು ವಾಟರ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ ಮ್ಯೂಸಿಕ್ ಮತ್ತು ಕ್ಯಾಮರಾ ಕಂಟ್ರೋಲ್ ಆಯ್ಕೆಯನ್ನು ಕೂಡಾ ನೀಡುತ್ತದೆ. ಇದರ ಜೊತೆಗೆ ಬಳಕೆದಾರರು ಮೆಸೆಜ್‌ಗಳನ್ನು ಮತ್ತು ಸೋಶೀಯಲ್ ಮೀಡಿಯಾ ನೋಟಿಫಿಕೇಶನ್‌ಗಳೊಂದಿಗೆ ನವೀಕೃತವಾಗಿರಲು ಅನುಮತಿಸುವ ಸ್ಮಾರ್ಟ್ ನೋಟಿಫಿಕೇಶನ್‌ಗಳನ್ನು ಕೂಡಾ ನೀಡುತ್ತದೆ.
ಈ ಸ್ಮಾರ್ಟ್‌ವಾಚ್ 2ES ಎಐ ವಾಯಿಸ್ ಅಸಿಸ್ಟಂಟ್ ಆಯ್ಕೆ ಪಡೆದಿದ್ದು, ಧ್ವನಿ ಆಜ್ಞೆ ಮೂಲಕ ಗ್ಯಾಡ್ಜೆಟ್ಸ್ ನಿಯಂತ್ರಿಸಬಹುದಾಗಿದೆ. ಹಾಗೆಯೇ ಕಾಲ್ ಎನಿಟೈಮ್, ಎನಿವೇರ್ ಫೀಚರ್ ಪಡೆದಿದ್ದು, ಇದರ ಜೊತೆಗೆ ಹೆಲ್ತ್‌ಗೆ ಸಂಬಂಧಿಸಿದಂತೆ ಕೆಲವು ಟ್ರ್ಯಾಕಿಂಗ್ ಆಯ್ಕೆಗಳನ್ನು ಸಹ ಒಳಗೊಂಡಿದೆ.
ಈ ವಾಚ್ BT ವಾಯಿಸ್ ಕರೆ ಮತ್ತು 1.8 ಬಿಗ್ ಡಿಸ್‌ಪ್ಲೇ ಸೌಲಭ್ಯ ಸಹ ಪಡೆದಿದೆ. ಇನ್ನು ಇದು ಸ್ಲಿಮ್ ಬೆಜೆಲ್, 50 ಸ್ಪೋರ್ಟ್ಸ್ ಮೋಡ್, 12 ದಿನಗಳ ಬ್ಯಾಟರಿ ಬಾಳಿಕೆ, 100+ ವಾಚ್ ಫೇಸ್‌ಗಳು ಮತ್ತು ಹೃದಯ ಬಡಿತ ಮತ್ತು SpO2 ಮಾನಿಟರ್‌ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಪ್ರಮುಖ ಹೈಲೈಟ್ ಆಗಿ ಕಾಣಿಸಿದೆ.
ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ ಬ್ಲೂಟೂತ್ ಆವೃತ್ತಿ 5.3 ಅನ್ನು ಪಡೆದಿದೆ. ಭಾರತದಲ್ಲಿ ಐಟೆಲ್ ಸ್ಮಾರ್ಟ್ ವಾಚ್ 2SE ಡಿವೈಸ್ ಬೆಲೆ 1,699ರೂ. ಆಗಿದ್ದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.


Click it and Unblock the Notifications








