Home
ಸುದ್ದಿಜಾಲ

Itel: ಐಟೆಲ್‌ ಸೂಪರ್ ಗುರು 4G ಫೋನ್ ಲಾಂಚ್‌! ಯುಪಿಐ ಬೆಂಬಲ

ಐಟೆಲ್‌ ಫೋನ್‌ಗಳು (Itel phone) ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್‌ ಆಯ್ಕೆ ನೀಡಲಿದ್ದು, ಈ ನಡುವೆ ಭಾರತದಲ್ಲಿ ಹೊಸ ಫೀಚರ್ ಫೋನ್‌ ಅನ್ನು ಅನಾವರಣ ಮಾಡಲಾಗಿದೆ. ಈ ಫೋನ್ ಯುಪಿಐ (UPI) ಬೆಂಬಲ ಪಡೆದುಕೊಂಡಿದೆ.

ಹೌದು, ಐಟೆಲ್‌ ಭಾರತದಲ್ಲಿ ಸೂಪರ್ ಗುರು 4G (Itel Super Guru 4G) ಹೆಸರಿನ ಹೊಸ ಫೀಚರ್ ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ ಬಾಳಿಕೆ ಜೊತೆಗೆ ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ನಯವಾದ ಮೆಟಲ್ ಫಿನಿಶ್, ಅಲ್ಟ್ರಾ-ಸ್ಲಿಮ್ ವಿನ್ಯಾಸ ಮತ್ತು ಟ್ರೆಂಡಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಅಗ್ಗದ ಹಾಗೂ ಆಕರ್ಷಕ ಫೋನ್‌ನ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಟೆಲ್‌ ಸೂಪರ್ ಗುರು 4G ಫೋನ್ ಲಾಂಚ್‌! ಯುಪಿಐ ಬೆಂಬಲ..

ಐಟೆಲ್‌ ಸೂಪರ್ ಗುರು 4G: ಈ ಫೋನ್ 2 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಫೀಚರ್ ಫೋನ್ ಬಳಕೆದಾರರಿಗೆ ಯೂಟ್ಯೂಬ್ ಮತ್ತು ಶಾರ್ಟ್ಸ್ ಪ್ಲೇ ಮಾಡಲು ಸಹ ಅನುಮತಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಫೋನ್‌ನಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ. ಅಂದರೆ ಪಾವತಿಗಳಿಗಾಗಿ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಈ ಫೋನ್‌ ಅನುಮತಿಸುತ್ತದೆ.

ಐಟೆಲ್ ಸೂಪರ್ ಗುರು ಫೀಚರ್ ಫೋನ್ ಡ್ಯುಯಲ್ 4G ಕನೆಕ್ಟಿವಿಟಿ ಬೆಂಬಲದೊಂದಿಗೆ ಬರಲಿದ್ದು, VoLTE, ವೆಬ್ ಬ್ರೌಸಿಂಗ್ ಮತ್ತು 13 ಭಾರತೀಯ ಭಾಷೆಗಳಿಗೆ ಬೆಂಬಲ ನೀಡಲಿದೆ. ಇದರ ಜೊತೆಗೆ ಟೆಟ್ರಿಸ್, ಸೊಕೊಬಾನ್ ಮತ್ತು ಮುಂತಾದವುಗಳಂತಹ ಕೆಲವು ಇನ್‌ಬಿಲ್ಟ್‌ ಗೇಮ್‌ಗಳನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು, ಬಳಕೆದಾರರ ಬೇಸರ ಕಳೆಯಲು ಇದು ಅನುಕೂಲ ಮಾಡಿಕೊಡಲಿದೆ.

ಬಿಡುಗಡೆಯ ಬಗ್ಗೆ ಪ್ರತಿಕ್ರಿಯಿಸಿದ ಐಟೆಲ್‌ ಇಂಡಿಯಾದ ಸಿಇಓ ಅಜೀತ್‌ ತಳಪತ್ರ ಅವರು, ಯೂಟ್ಯೂಬ್‌ ಬೆಂಬಲ ಮತ್ತು ಯುಪಿಐ ನಂತಹ ಸ್ಮಾರ್ಟ್‌ಫೋನ್-ರೀತಿಯ ಫೀಚರ್ಸ್‌ ಅನ್ನು ಈ ಕೀಪ್ಯಾಡ್ ಫೋನ್‌ಗಳಲ್ಲಿ ಮನಬಂದಂತೆ ಸಂಯೋಜಿಸುವ ಮೂಲಕ ನಾವು ಉದ್ಯಮದ ಗುಣಮಟ್ಟವನ್ನು ಮರುವ್ಯಾಖ್ಯಾನಿಸುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ಆನ್-ದಿ-ಗೋ ಎಂಟರ್ಟೈನ್ಮೆಂಟ್‌ಗಾಗಿ ಯೂಟ್ಯೂಬ್‌ ಬೆಂಬಲ ಮತ್ತು ತಡೆರಹಿತ ಸಂಪರ್ಕವನ್ನು ಖಾತ್ರಿಪಡಿಸುವ ಡ್ಯುಯಲ್ 4G ಸಿಮ್ ಸ್ಲಾಟ್‌ಗಳೊಂದಿಗೆ, ಸೂಪರ್ ಗುರು 4G ನಿಜವಾಗಿಯೂ ಐಟೆಲ್‌ನ ನಾವೀನ್ಯತೆ ಮತ್ತು ವಿಶ್ವಾಸಾರ್ಹತೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದಿದ್ದಾರೆ.

ಐಟೆಲ್‌ ಸೂಪರ್ ಗುರು 4G ಫೋನ್ ಲಾಂಚ್‌! ಯುಪಿಐ ಬೆಂಬಲ..

ಇದರೊಂದಿಗೆ ಈ ಫೋನ್‌ನಲ್ಲಿ 1,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ನೀಡಲಾಗಿದ್ದು, ಒಂದು ಬಾರಿ ಪೂರ್ಣವಾಗಿ ಚಾರ್ಜ್‌ ಮಾಡಿದರೆ 6 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ಪಡೆಯಬಹುದಾಗಿದೆ. ಫೀಚರ್ ಫೋನ್‌ಗಳು ಈ ಕ್ಷಣಕ್ಕೂ ಸಹ ಬೇಡಿಕೆ ಹೊಂದಿದ್ದು, ಈ ಫೋನ್ 4G ಫೋನ್ 2G ಮತ್ತು 3G ಸಂಪರ್ಕವನ್ನು ಬೆಂಬಲಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಹಾಯಕವಾಗಲಿದೆ. ಕರೆ ಮತ್ತು ಮೆಸೆಜ್‌ನಂತಹ ಸಾಮಾನ್ಯ ದೈನಂದಿನ ಬಳಕೆಗಾಗಿ ಈ ಫೋನ್‌ ಉತ್ತಮ ಆಯ್ಕೆ ಆಗಿರಲಿದೆ.

ಐಟೆಲ್‌ ಸೂಪರ್ ಗುರು 4G ಫೋನ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ಫೋನ್‌ ಅನ್ನು 1,799 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಇದು ಗಾಢ ನೀಲಿ, ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಅಮೆಜಾನ್‌ ಹಾಗೂ ಇತರೆ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿ ಮಾಡಬಹುದಾಗಿದೆ.

ಐಟೆಲ್‌ P55+: ಈ ನಡುವೆ ಐಟೆಲ್‌ P55+ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್‌ ಲೀಕ್‌ ಆಗಿವೆ. ಗೂಗಲ್‌ ಪ್ಲೇ ಕನ್‌ಸೋಲ್‌ನಲ್ಲಿ ಸ್ಪ್ರೆಡ್ಟ್ರಮ್ T606 ಪ್ರೊಸೆಸರ್‌ ಮತ್ತು ಆಂಡ್ರಾಯ್ಡ್‌ 13 ನೊಂದಿಗೆ ಈ ಫೋನ್‌ ಅನ್ನು ಗುರುತಿಸಲಾಗಿದೆ. ಮಾದರಿ ಸಂಖ್ಯೆ ಐಟೆಲ್‌ P663L ಅನ್ನು ಖಚಿತಪಡಿಸಿದ್ದು, ಕೆಲವು ಪ್ರಮುಖ ಹಾರ್ಡ್‌ವೇರ್ ಫೀಚರ್ಸ್‌ ಅನ್ನು ಸಹ ಬಹಿರಂಗಪಡಿಸುತ್ತದೆ. ಈಗ ಸಾಧನವು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.

Best Mobiles in India

English summary
Itel has unveiled a new feature phone named Super Guru 4G in India. The phone has a durable yet premium design with a sleek metal finish, ultra-slim design and a trendy camera option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+