ಅಗ್ಗದ ಬೆಲೆಯಲ್ಲಿ 6,000mAh ಬ್ಯಾಟರಿ ಫೋನ್ ಲಾಂಚ್ ಮಾಡಲಿದೆ ಐಟೆಲ್!
ಐಟೆಲ್ (itel) ಬ್ರ್ಯಾಂಡ್ ಅಗ್ಗದ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಐಟೆಲ್ ಸಂಸ್ಥೆಯು ನೂತನವಾಗಿ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಇರುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ. ಈ ಫೋನ್ ಬೆಲೆಯು ಸುಮಾರು 8000 ರೂ. ಒಳಗೆ ಇರಲಿದೆ ಎಂದು ಹೇಳಲಾಗುತ್ತಿದೆ.
ಹೌದು, ಐಟೆಲ್ ಕಂಪನಿಯ ಮುಂಬರುವ ಫೋನ್ ಅಗ್ಗದ ಪ್ರೈಸ್ ಟ್ಯಾಗ್ ಹೊಂದಿರಲಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಪಡೆದಿರಲಿದೆ. ಈ ಫೋನ್ 6,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಹಾಗೆಯೇ ಇಟೆಲ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸುವ ಮೂಲಕ ಸುದ್ದಿ ಮಾಡಿದೆ.

ಹಾಗೆಯೇ ಐಟೆಲ್‌ನ ಹೊಸ ಫೋನ್ 6,000 mAh ಬ್ಯಾಟರಿ ಪಡೆದಿರಲಿದ್ದು, ಅದಕ್ಕೆ ಪೂರಕವಾಗಿ 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿರಲಿದೆ. ಮುಂಬರುವ ಫೋನ್ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು, ಉನ್ನತ ದರ್ಜೆಯ ಕಾರ್ಯಕ್ಷಮತೆ ಒದಗಿಸುವ ಪ್ರೊಸೆಸರ್ ಪವರ್ ಅನ್ನು ಪಡೆದಿರಲಿದೆ.
ಅಂದಹಾಗೆ ಮುಂಬರುವ ಅಗ್ಗದ ಸ್ಮಾರ್ಟ್‌ಫೋನ್ ಹೆಸರು ಬಹಿರಂಗವಾಗಿಲ್ಲ. ಆದರೆ ಈ ಫೋನ್ 8,000ರೂ. ಪ್ರೈಸ್ ಟ್ಯಾಗ್ ವಿಭಾಗದಲ್ಲಿ ಗಮನ ಸೆಳೆಯಲಿದೆ ಎನ್ನಲಾಗಿದೆ. ಐಟೆಲ್ ಕಂಪನಿಯ ನೂತನ ಫೋನ್ ಅತ್ಯುತ್ತಮ ಕ್ಯಾಮೆರಾ ರಚನೆಯನ್ನು ಪಡೆದಿರಲಿದೆ. ಇನ್ನು ಐಟೆಲ್ ಇತ್ತೀಚಿಗೆ ಭಾರತದಲ್ಲಿ ಐಟೆಲ್ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಆ ಟ್ಯಾಬ್‌ನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ ಪ್ಯಾಡ್ 1 ಫೀಚರ್ಸ್
ಐಟೆಲ್ ಕಂಪನಿಯು ಇತ್ತೀಚಿಗೆ ಐಟೆಲ್ ಪ್ಯಾಡ್ 1 ಟ್ಯಾಬ್ಲೆಟ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಟ್ಯಾಬ್ 10.1 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಹೆಚ್‌ಡಿ+ ಐಪಿಎಸ್ ಮಾದರಿಯಲ್ಲಿದೆ. ಹಾಗೆಯೇ ಈ ಟ್ಯಾಬ್ಲೆಟ್ SC9863A1 ಆಕ್ಟಾ ಕೋರ್ ಪ್ರೊಸೆಸರ್ ಕಾರ್ಯವೈಖರಿ ಪಡೆದಿದ್ದು, ಆಂಡ್ರಾಯ್ಡ್ 12 ಗೋ ಎಡಿಷನ್ ಓಎಸ್ ಸಪೋರ್ಟ್ ಪಡೆದಿದೆ.

ಇದರೊಂದಿಗೆ ಈ ಟ್ಯಾಬ್ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದ್ದು, ಹೆಚ್ಚುವರಿ ಸ್ಟೋರೇಜ್‌ಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಹಾಗೆಯೇ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ರಚನೆಯ ಇದ್ದು, ಅದು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಜೊತೆಗೆ ಫ್ಲ್ಯಾಷ್ ಸೌಲಭ್ಯವನ್ನು ಪಡೆದಿದೆ.
ಇನ್ನು ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಇನ್ನು ಈ ಸಾಧನವು ಮೆಟಲ್ ಬಾಡಿ ರಚನೆಯನ್ನು ಹೊಂದಿದ್ದು, ಡಬಲ್ ಸೂಪರ್ ಸ್ಪೀಕರ್ ಅನ್ನು ಒಳಗೊಂಡಿದೆ.
ಐಟೆಲ್ A60 ಫೀಚರ್ಸ್
ಐಟೆಲ್ A60 ಸ್ಮಾರ್ಟ್‌ಫೋನ್ 1612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಡ್-ಕೋರ್ SC9832E ಪ್ರೊಸೆಸರ್ ಅನ್ನು ಹೊಂದಿದ್ದು, 2GB RAM ಮತ್ತು 32GB ಇಂಟರ್ ಸ್ಟೋರೇಜ್ ಹೊಂದಿದೆ. ಈ ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ LTE ಬೆಂಬಲ, Wi-Fi, GPS, ಬ್ಲೂಟೂತ್ ಮತ್ತು 3.5mm ಆಡಿಯೊ ಜಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications








