ಶೀಘ್ರದಲ್ಲೇ ಲಾಂಚ್ ಆಗಲಿದೆ ನೆಕ್ಲೇಸ್ ಮಾದರಿಯ ಸ್ಮಾರ್ಟ್‌ವಾಚ್; ಫೀಚರ್ಸ್ ಏನಿರುತ್ತೆ?
ಅಗ್ಗದ ಸ್ಮಾರ್ಟ್‌ಫೋನ್ ಜೊತೆಗೆ ಕೆಲವು ಸ್ಮಾರ್ಟ್ ಉತ್ಪನ್ನಗಳಿಂದಲೂ ಗುರುತಿಸಿಕೊಂಡಿರುವ ಐಟೆಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಐಟೆಲ್ ಸಂಸ್ಥೆಯು ಇದೀಗ ಪೆಂಡೆಂಟ್ ಮಾದರಿಯ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಇದು ಮೊದಲ ಭಾರತದ ಮೊದಲ ಪೆಂಡೆಂಟ್ ಸ್ಮಾರ್ಟ್‌ವಾಚ್ ಎಂದು ಹೇಳಲಾಗುತ್ತಿದೆ.
ಹೌದು, ಐಟೆಲ್ ಸಂಸ್ಥೆಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಯುನಿಕಾರ್ನ್ (UNICORN) ಸ್ಮಾರ್ಟ್‌ವಾಚ್ ಲಾಂಚ್ ಮಾಡಲು ರೆಡಿಯಾಗುತ್ತಿದೆ. ಇನ್ನು ಇದು ಲಾಕೆಟ್ ಮಾದರಿಯ ರಚನೆ ಇರಲಿದ್ದು, ಪೆಂಡೆಂಟ್ ಸ್ಮಾರ್ಟ್‌ವಾಚ್ ಆಗಿ ಗುರುತಿಸಿಕೊಳ್ಳಲಿದೆ. ಫ್ಯಾಶನ್ ಪ್ರಿಯ ಯುವಕರನ್ನು ಉದ್ದೇಶವಾಗಿರಿಸಿಕೊಂಡು ಸಂಸ್ಥೆಯು ಈ ರೀತಿಯ ಉತ್ಪನ್ನ ಪರಿಚಯಿಸಲು ಅಣಿಯಾಗಿದೆ.

ಅಂದಹಾಗೆ ಈ ನೂತನ ಯುನಿಕಾರ್ನ್ ಸ್ಮಾರ್ಟ್ ವಾಚ್ 2-ಇನ್-1 ನಂತೆ ಕಾರ್ಯ ನಿರ್ವಹಿಸಲಿದೆ. ಅಂದರೆ ಸ್ಮಾರ್ಟ್‌ವಾಚ್ ರೀತಿ ಕೈಗೆ ಧರಿಸಬಹುದು ಹಾಗೆಯೇ ಇದನ್ನು (fashion element) ಚಿಕ್ಕ ನೆಕ್ಲೇಸ್ ಪೆಂಡೆಂಟ್ ರೀತಿ ಫ್ಯಾಶನ್‌ಗಾಗಿ ಸಹ ಧರಿಸಬಹುದು ಎಂದು ವರದಿಯಾಗಿದೆ. ಹಾಗಾದರೇ ಐಟೆಲ್‌ನ ಹೊಸ ಡಿವೈಸ್‌ನ ಕುರಿತಾಗಿ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ನೂತನ ಡಿವೈಸ್ ರೋಮಾಂಚಕ 1.43 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ ಇದರ ಜೊತೆಗೆ ಈ ವಾಚ್ ಜೊತೆಗೆ ಪ್ರಭಾವಶಾಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಹಾಗೆಯೇ ಈ ಸ್ಮಾರ್ಟ್ ವಾಚ್ ತಿರುಗುವ ಕ್ರೌನ್ ಹಾಗೂ ವಾಚ್ ಡಯಲ್‌ನ ಬಲಭಾಗದಲ್ಲಿ ಪುಶ್ ಬಟನ್ ಆಯ್ಕೆ ಅನ್ನು ಹೊಂದಿರುವುದು ಬಹುತೇಕ ಖಚಿತ. ಈ ವಾಚ್‌ನ ಕುರಿತಾಗಿ ಸ್ಪಷ್ಟ ವಿವರಗಳನ್ನು ಇನ್ನೂ ಲಭ್ಯವಾಗದಿದ್ದರೂ, ಬರಲಿರುವ ಯುನಿಕಾರ್ನ್ ಡಿವೈಸ್ ದೇಶಿಯ ಟೆಕ್ ಮತ್ತು ಫ್ಯಾಶನ್ ದೃಶ್ಯದಲ್ಲಿ ಗೇಮ್-ಚೇಂಜರ್ ಆಗಿ ಕಾಣಿಸಿಕೊಳ್ಳುವ ಭರವಸೆ ನೀಡುತ್ತದೆ.
ಯುವ ಸಮೂಹ-ಕೇಂದ್ರಿತ ಸ್ಮಾರ್ಟ್ ಗ್ಯಾಜೆಟ್‌ಗಳ ಕಡೆಗೆ ಐಟೆಲ್ ನ ಕಾರ್ಯತಂತ್ರದ ನಡೆಯು ಯುನಿಕಾರ್ನ್ ಡಿವೈಸ್‌ನ ವಿನ್ಯಾಸ ಮತ್ತು ಕ್ರಿಯಾತ್ಮಕತೆಯಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಟ್ರೆಂಡ್‌ಸೆಟ್ಟಿಂಗ್ ಶೈಲಿಯೊಂದಿಗೆ ಪ್ರಾಯೋಗಿಕತೆಯನ್ನು ಸೇರ್ಪಡೆ ಮಾಡುವ ಮೂಲಕ, ಹೊಸತನ ಮತ್ತು ಭಿನ್ನತೆಗಾಗಿ ಎದಿರು ನೋಡುವ ಮಾರುಕಟ್ಟೆಯನ್ನು ಆಕರ್ಷಿಸುವ ಗುರಿಯನ್ನು ಐಟೆಲ್ ಹೊಂದಿದೆ.
ಇನ್ನು ಐಟೆಲ್ ಸಂಸ್ಥೆಯು ಇತ್ತೀಚಿಗೆ ಐಟೆಲ್ S24 ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ 90Hz ರಿಫ್ರೆಶ್ ರೇಟ್ ಆಯ್ಕೆ ಜೊತೆಗೆ 6.6 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಪಂಚ್-ಹೋಲ್ ಶೈಲಿ ರಚನೆ ಹಾಗೂ ಡೈನಾಮಿಕ್ ಬಾರ್ ವಿನ್ಯಾಸ ಪಡೆದಿದೆ.
ಅಲ್ಲದೇ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G91 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಒಳಗೊಂಡಿದೆ. ಹಾಗೆಯೇ ಈ ಫೋನ್ 128GB ಆಂತರೀಕ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ. ಈ ಫೋನ್ ಡಾನ್ ವೈಟ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ಇದಲ್ಲದೇ ಹಿಂಭಾಗದಲ್ಲಿ ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 108 ಮೆಗಾಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇದರ ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








