ಭಾರತದಲ್ಲಿ ಐಟೆಲ್‌ ವಿಷನ್‌1 3GB ವೇರಿಯಂಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಬಹುತೇಕ ಕಂಪನಿಗಳು ನೂತನ ಫೋನ್‌ಗಳನ್ನು ಪರಿಚಯಿಸುತ್ತವೆ. ಅವುಗಳಲ್ಲಿ ಐಟೆಲ್‌ ಕಂಪನಿಯು ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ ಹೊಸ ವೇರಿಯಂಟ್‌ ಅನ್ನು ಈಗ ಬಿಡುಗಡೆ ಮಾಡಿದೆ.

ಐಟೆಲ್‌ ವಿಷನ್ 1

ಹೌದು, ಐಟೆಲ್‌ ಕಂಪೆನಿ ತನ್ನ ಹೊಸ ಐಟೆಲ್‌ ವಿಷನ್ 1 ಸ್ಮಾರ್ಟ್‌ಫೋನ್‌ 3GB ವೇರಿಯಂಟ್‌ ಅನ್ನು ಬಿಡುಗಡೆ ಮಾಡಿದೆ. 2GB RAM + 32GB ವೇರಿಯಂಟ್‌ನಲ್ಲಿ ಐಟೆಲ್‌ ವಿಷನ್ 1 ಫೋನ್‌ ಲಭ್ಯವಿತ್ತು, ಆದರೆ ಈಗ 3GB RAM + 32GB ಸ್ಟೋರೇಜ್ ಆಯ್ಕೆಯಲ್ಲಿಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು 3GB ವೇರಿಯಂಟ್‌ ಬೆಲೆಯು 6,999ರೂ.ಗಳಾಗಿದ್ದು, ಆಗಷ್ಟ್‌ 18 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದೆ. ಹಾಗಾದ್ರೆ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ತಿಳಿಯಲು ಎಂಬುದನ್ನು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ ವಾಟರ್ ಡ್ರಾಪ್ ನಾಚ್‌ ಶೈಲಿಯನ್ನು ಹೊಂದಿರುವ ಡಿಸ್‌ಪ್ಲೇ ಹೊಂದಿದ್ದು, ಇದು 720x1560 ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.088-ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದಾಗಿದೆ. ಈ ಡಿಸ್‌ಪ್ಲೇಯು IPS 2.5D ಡಿಸ್‌ಪ್ಲೇ ಆಗಿದ್ದು, 500 ನಿಟ್ಸ್ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 19: 5: 9 ಆಸ್ಪೆಕ್ಟ್‌ ರೆಶಿಯೋ ಹೊಂದಿದ್ದು, ಇನ್ಸೆಲ್ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಇದಲ್ಲದೆ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ 1.6GHz ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪೈ 9 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಬಜೆಟ್‌ ಬೆಲೆಯ ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಈಗ ಹೊಸದಾಗಿ 3GB RAM ವೇರಿಯಂಟ್ ಸೇರಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಟೆಕ್ನಾಲಜಿ ಹೊಂದಿರುವ ಪವರ್ ಡ್ಯುಯಲ್ ಕ್ಯಾಮೆರಾ ರಿಯರ್‌ ಸೆಟ್‌ಆಪ್‌ ಹೊಂದಿದ್ದು, ಮೊದಲೇನ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 0.08 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾದಲ್ಲಿ ಎಐ ಬ್ಯೂಟಿ ಮೋಡ್, ಪೋರ್ಟ್ರೇಟ್ ಮೋಡ್, ಎಚ್‌ಡಿಆರ್, ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 820 ಗಂಟೆಗಳ ಸ್ಟ್ಯಾಂಡ್‌ಬೈ, 24 ಗಂಟೆಗಳ ಆವರೇಜ್‌ ಯೂಸೇಜ್‌, 45 ಗಂಟೆಗಳ ಪ್ಲೇಬ್ಯಾಕ್‌ ಮ್ಯೂಸಿಕ್‌, 8 ಗಂಟೆಗಳ ವೀಡಿಯೊ ಮತ್ತು 7 ಗಂಟೆಗಳ ಗೇಮಿಂಗ್ ಅನ್ನು ಒದಗಿಸುತ್ತದೆ ಎಂದು ಐಟೆಲ್ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಡ್ಯುಯಲ್ ಆಕ್ಟಿವ್ 4G VOLTE, ವೈಫೈ, ಬ್ಲೂಟೂತ್‌ , ಹಾಟ್‌ಸ್ಪಾಟ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Itel Vision 1 is priced in India at Rs. 6,999 for the new 3GB RAM + 32GB storage model.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X