Home
ಸುದ್ದಿಜಾಲ

ಭಾರತದಲ್ಲಿ ಜಬ್ರಾ ಕಂಪೆನಿಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌! ಏನಿದು 6 ಮೈಕ್ ಕಾಲ್‌ ಟೆಕ್ನಾಲಜಿ!

ಜಬ್ರಾ ಕಂಪೆನಿ ಜನಪ್ರಿಯ ಆಡಿಯೋ ಆಕ್ಸಿಸರೀಸ್‌ ಕಂಪೆನಿಗಳಲ್ಲಿ ಒಂದಾಗಿದೆ. ತನ್ನ ವಿಭಿನ್ನ ಮಾದರಿಯ ಇಯರ್‌ಬಡ್ಸ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಹೊಸದಾಗಿ ಜಬ್ರಾ ಎಲೈಟ್‌ 8 ಆಕ್ಟಿವ್ ಮತ್ತು ಎಲೈಟ್ 10 ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ಗಳು Spatial ಸೌಂಡ್‌ ಮತ್ತು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಒಳಗೊಂಡಿದೆ.

ಹೌದು, ಜಬ್ರಾ ಕಂಪೆನಿ ಹೊಸದಾಗಿ ಎರಡು ಹೊಸ ಇಯರ್‌ಬಡ್ಸ್‌ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಜಬ್ರಾ ಎಲೈಟ್ 8 ಆಕ್ಟಿವ್ ಅನ್ನು ಕಠಿಣವಾದ ಇಯರ್‌ಬಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇದು ಜಬ್ರಾ ಶೇಕ್‌ಗ್ರಿಪ್ ಮತ್ತು ಡೋಬಿ ಆಡಿಯೊ ಜೊತೆಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರಲಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಜಬ್ರಾ ಕಂಪೆನಿಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!

ಜಬ್ರಾ ಎಲೈಟ್ 8 ಆಕ್ಟಿವ್‌ ಫೀಚರ್ಸ್‌ ಹೇಗಿದೆ?
ಜಬ್ರಾ ಎಲೈಟ್ 8 ಆಕ್ಟಿವ್‌ ಇಯರ್‌ಬಡ್ಸ್‌ IP68 ರೇಟಿಂಗ್ ಅನ್ನು ಹೊಂದಿದೆ. ಇದು 1.5m ನೀರಿನಲ್ಲಿ ಮುಳುಗಿದರೂ ಕೂಡ ಯಾವುದೇ ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ತಾಪಮಾನ, ತೇವಾಂಶ, ಮಳೆ ಮತ್ತು ಎತ್ತರದಂತಹ ಪರಿಸ್ಥಿತಿಗಳನ್ನು ಒಳಗೊಂಡಿದೆ. ಇದು ತುಕ್ಕು-ನಿರೋಧಕ ಮತ್ತು 1 ಮೀ ಡ್ರಾಪ್-ನಿರೋಧಕ ಎಂದು ಹೇಳಲಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಜಬ್ರಾ ಶೇಕ್‌ಗ್ರಿಪ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇನ್ನು ಇಯರ್‌ಬಡ್ಸ್‌ ಅಡಾಪ್ಟಿವ್ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಫೀಚರ್ಸ್‌ ಹೊಂದಿದೆ. ಇದು ಉತ್ತಮ ಒಟ್ಟಾರೆ ಆಲಿಸುವ ಅನುಭವವನ್ನು ನೀಡಲಿದೆ.

ವಿಂಡ್ ನ್ಯೂಟ್ರಲೈಸಿಂಗ್ ಹಾರ್ಥ್ರೂ ಟೆಕ್ನಾಲಜಿಯು ಹಸ್ತಕ್ಷೇಪವನ್ನು ಮಫಿಲ್ ಮಾಡುತ್ತದೆ. ಇದು ಮತ್ತೊಮ್ಮೆ ಸ್ಪಷ್ಟವಾದ ಧ್ವನಿ ಗುಣಮಟ್ಟಕ್ಕೆ ಸಹಾಯ ಮಾಡಲಿದೆ. ಇನ್ನು ಇಯರ್‌ಬಡ್ಸ್‌ 6-ಮೈಕ್ ಕಾಲ್‌ ಟೆಕ್ನಾಲಜಿ, 6mm ಸ್ಪೀಕರ್‌ಗಳು, ಇಯರ್‌ಬಡ್ಸ್‌ಗಳಲ್ಲಿ 8 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಮತ್ತು ANC ಸ್ವಿಚ್ ಆನ್ ಆಗಿದ್ದರೆ 32 ಗಂಟೆಗಳ ಬಾಳಿಕೆಯನ್ನು ನೀಡಲಿದೆ. ಇದು ಗೂಗಲ್ ಅಸಿಸ್ಟೆಂಟ್, ಫಾಸ್ಟ್ ಪೇರ್, ಸ್ವಿಫ್ಟ್ ಪೇರ್, ಸ್ಪಾಟಿಫೈ ಟ್ಯಾಪ್ ಪ್ಲೇಬ್ಯಾಕ್ ಮತ್ತು ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ.

ಜಬ್ರಾ ಎಲೈಟ್ 10 ಫೀಚರ್ಸ್‌ ಹೇಗಿದೆ?
ಜಬ್ರಾ ಎಲೈಟ್ 10 ಇಯರ್‌ಬಡ್ಸ್‌ ಡಾಲ್ಬಿ ಹೆಡ್ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಇದು 6 ಮೈಕ್ ಕಾಲ್‌ ಟೆಕ್ನಾಲಜಿಯನ್ನು ನೀಡಲಿದ್ದು, 6 ಗಂಟೆಗಳ ಬ್ಯಾಟರಿ ಮತ್ತು ಕೇಸ್‌ನೊಂದಿಗೆ 27 ಗಂಟೆಗಳ ಬ್ಯಾಟರಿ ಅವಧಿಯನ್ನು ಬೆಂಬಲಿಸಲಿದೆ. ಇದು IP57 ರೇಟ್ ಹೊಂದಿದ್ದು, ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿಯನ್ನು ಹೊಂದಿರಲಿದೆ. ಜೊತೆಗೆ ಹ್ಯಾಂಡ್ಸ್-ಫ್ರೀ ವಾಯ್ಸ್‌ ಅಸಿಸ್ಟೆಂಟ್‌ ವೇಗದ ಜೋಡಿ, ಸ್ವಿಫ್ಟ್ ಜೋಡಿ ಮತ್ತು ಸ್ಪಾಟಿಫೈ ಟ್ಯಾಪ್ ಪ್ಲೇಬ್ಯಾಕ್ ಅನ್ನು ನೀಡಲಿದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಜಬ್ರಾ ಎಲೈಟ್ 8 ಆಕ್ಟಿವ್ ಇಯರ್‌ಬಡ್ಸ್‌ 17,999ರೂ. ಬೆಲೆಯಲ್ಲಿ ಬರಲಿದೆ. ಇದು ಕ್ಯಾರಮೆಲ್, ನೇವಿ, ಬ್ಲಾಕ್ ಮತ್ತು ಡಾರ್ಕ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಜಬ್ರಾ ಎಲೈಟ್ 10 ಇಯರ್‌ಬಡ್ಸ್‌ ಭಾರತದಲ್ಲಿ 20,999 ರೂ. ಬೆಲೆಯನ್ನು ಹೊಂದಿದೆ. ಇದನ್ನು ಕ್ರೀಮ್, ಕೊಕೊ, ಗ್ಲೋಸ್ ಬ್ಲ್ಯಾಕ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಜಬ್ರಾ ಎಲೈಟ್ 8 ಆಕ್ಟಿವ್ ಮತ್ತು ಜಬ್ರಾ ಎಲೈಟ್ 10 ಇಯರ್‌ಬಡ್ಸ್‌ ಇದೇ ಸೆಪ್ಟೆಂಬರ್ 20 ರಿಂದ ಲಭ್ಯವಾಗಲಿದೆ. ಇದನ್ನು ಅಮೆಜಾನ್, ಕ್ರೋಮಾ ಮತ್ತು ಜಬ್ರಾ ವೆಬ್‌ಸೈಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸೇಲ್‌ ಆಗಲಿದೆ.

Best Mobiles in India

English summary
Jabra Elite 10 and Elite 8 Active TWS Launched in India: Price and Specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+