ಅತಿ ವಿಸ್ಮಯ ಜೇಮ್ಸ್ ಬಾಂಡ್ ಗ್ಯಾಜೆಟ್ಸ್

By Shwetha
|

ಇಂದಿನ ಆಧುನಿಕ ಯುಗದಲ್ಲಿ ಬಳಕೆಯಾಗುತ್ತಿರುವ ಹೈಟೆಕ್ ತಂತ್ರಜ್ಞಾನಗಳ ಬಗ್ಗೆ ನಿಮಗೆ ಗೊತ್ತೇ? ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಾ ಮಾನವ ಇಂದು ಪ್ರಪಂಚವನ್ನೇ ತನ್ನ ಕೈಯಲ್ಲಿ ಆಡಿಸುತ್ತಿದ್ದಾನೆ. ಹೆಚ್ಚಿನ ಅಧ್ಯಯನ ಮತ್ತು ತಂತ್ರಜ್ಞಾನದ ಬಳಕೆ ಆತನನ್ನು ಉನ್ನತಿಗೆ ಏರಿಸಿದೆ.

ಓದಿರಿ: ವಿಶ್ವದ ಪ್ರಥಮ ರೊಬೋಟ್ ನಟಿ ಸಯೋನಾರಾ

ಇಂದಿನ ಆಧುನಿಕ ಟೆಕ್ ತಂತ್ರಗಳು ಅಂದಿನ ಇಂಗ್ಲೀಷ್ ಚಲನ ಚಿತ್ರಗಳ ಜೀವಾಳ ಎಂದೆನಿಸಿದ್ದವು ಎಂಬುದು ನಿಮಗೆ ಗೊತ್ತೇ? ಜೇಮ್ಸ್ ಬಾಂಡ್ ಚಿತ್ರದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಅತ್ಯಾಧುನಿಕ ಟೆಕ್ ಗ್ಯಾಜೆಟ್‌ಗಳ ಪರಿಚಯವನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ಮಾಡಿಸಲಿರುವೆವು.

1965 ರ ಥಂಡರ್‌ಬಾಲ್ ಚಿತ್ರ

1965 ರ ಥಂಡರ್‌ಬಾಲ್ ಚಿತ್ರ

1965 ರ ಥಂಡರ್‌ಬಾಲ್ ಚಿತ್ರದಲ್ಲಿ ಜೇಮ್ಸ್ ಬಾಂಡ್ ಕ್ಯುಎಸ್ ಜೆಟ್‌ಪ್ಯಾಕ್ ಅನ್ನು ಬಳಸಿದ್ದರು. 2008 ರಲ್ಲಿ ಮಾರ್ಟಿನ್ ಏರ್‌ಕ್ರಾಫ್ಟ್ ಕಂಪೆನಿ ಮಾರ್ಟಿನ್ ಜೆಟ್‌ಪ್ಯಾಕ್ ಅನ್ನು ನಿರ್ಮಿಸಿತ್ತು. ಇದು ಗ್ಯಾಸೊಲಿನ್ ಇಂಜಿನ್‌ನ ಬಳಕೆಯನ್ನು ಮಾಡುತ್ತಿದ್ದು, ಇದಕ್ಕೆ ಎರಡು ಫ್ಯಾನ್‌ಗಳು ಮೇಲೆತ್ತಲು ಸಹಾಯ ಮಾಡುತ್ತಿದ್ದವು.

ನೀರಿನೊಳಗೆ ಬಳಸಬಹುದಾದ ಕ್ಯಾಮೆರಾ

ನೀರಿನೊಳಗೆ ಬಳಸಬಹುದಾದ ಕ್ಯಾಮೆರಾ

ಥಂಡರ್‌ಬಾಲ್ ಚಿತ್ರದಲ್ಲಿಯೇ ಬಾಂಡ್ ನೀರಿನೊಳಗೆ ಬಳಸಬಹುದಾದ ಕ್ಯಾಮೆರಾವನ್ನು ಉಪಯೋಗಿಸಿದ್ದರು. ಇಂದಿನ ಒಲಿಂಪಸ್ ಸ್ಟೈಲಸ್ ಟಿಜಿ-3 ನೀರಿನೊಳಗೆ 15 ಮೀನಲ್ಲಿ ಕಾರ್ಯನಿರ್ವಹಿಸಬಲ್ಲುದು. ಇದು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಂದಿದೆ.

1997 ರ ಟುಮಾರೊ ನೆವರ್ ಡೈಸ್

1997 ರ ಟುಮಾರೊ ನೆವರ್ ಡೈಸ್

ನೆವರ್ ಡೈಸ್, ಚಿತ್ರದಲ್ಲಿ ಬಾಂಡ್ ತಮ್ಮ ಬಿಎಮ್‌ಡಬ್ಲ್ಯೂ 750 ಅನ್ನು ಕಾರಿನ ಹಿಂಭಾಗದ ಸೀಟ್‌ನಲ್ಲಿ ಕುಳಿತುಕೊಂಡು ತಮ್ಮ ಎರಿಕ್‌ಸನ್ ಮೊಬೈಲ್ ಮೂಲಕ ನಿಯಂತ್ರಿಸುತ್ತಾರೆ. ಇಂದು ಜಾಗರ್ ಲಾಂಡ್ ರೋವರ್ ಇಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಳಸಿಕೊಂಡು ಕಾರು ಚಾಲಕರು ಕಾರನ್ನು ನಿಯಂತ್ರಿಸಬಹುದಾಗಿದೆ.

ಸೋನಿ ಕಂಪೆನಿ ಐಬೊ

ಸೋನಿ ಕಂಪೆನಿ ಐಬೊ

1985 ರ ಚಿತ್ರವಾದ ಎ ವ್ಯೂ ಟು ಎ ಕಿಲ್‌ನಲ್ಲಿ ರಿಮೋಟ್‌ನಲ್ಲಿ ನಿಯಂತ್ರಿಸಬಹುದಾದ ರೊಬೋಟ್ ನಾಯಿಯನ್ನು ನಿಮಗೆ ಕಾಣಬಹುದು. ಸೋನಿ ಕಂಪೆನಿ ಐಬೊ ಹೆಸರಿನ ರೊಬೋಟ್ ನಾಯಿಯನ್ನು ತಯಾರಿಸಿತ್ತು. ಮನೆಯಲ್ಲಿರುವ ಇತರ ಇಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಇದು ಸಂವಹನವನ್ನು ನಡೆಸುತ್ತಿತ್ತು. ಆದರೆ 2006 ರಲ್ಲಿ ಐಬೊ ಉತ್ಪನ್ನವನ್ನು ಸೋನಿ ನಿಲ್ಲಿಸಿತ್ತು.

ಐಫೋನ್‌ಗಳಲ್ಲಿ ಟಚ್ ಐಡಿ ಸೆನ್ಸಾರ್

ಐಫೋನ್‌ಗಳಲ್ಲಿ ಟಚ್ ಐಡಿ ಸೆನ್ಸಾರ್

1971 ರ ಡೈಮೆಂಡ್ಸ್ ಆರ್ ಫಾರೆವರ್ ಚಿತ್ರದಲ್ಲಿ ಫೇಕ್ ಫಿಂಗರ್ ಪ್ರಿಂಟ್ಸ್ ಬಳಸಲಾಗುತ್ತದೆ. ಇದೇ ತಂತ್ರಜ್ಞಾನವನ್ನು 2014 ರಲ್ಲಿ ಮೊಬೈಲ್‌ನಲ್ಲೂ ಅಭಿವೃದ್ಧಿಪಡಿಸಲಾಯಿತು. ಇತ್ತೀಚಿನ ಐಫೋನ್‌ಗಳಲ್ಲಿ ಟಚ್ ಐಡಿ ಸೆನ್ಸಾರ್ ಇದ್ದು ಈ ತಂತ್ರಜ್ಞಾನದ ಆಧುನಿಕ ಆವೃತ್ತಿ ಇದಾಗಿದೆ.

ಮೈಕ್ರೋಚಿಪ್‌ ಗನ್

ಮೈಕ್ರೋಚಿಪ್‌ ಗನ್

2012 ರ ಸ್ಕೈಫಾಲ್ ಚಿತ್ರದಲ್ಲಿ ಜೇಮ್ಸ್ ಬಾಂಡ್‌ಗೆ ಹಸ್ತಕ್ಕೆ ಕೋಡಿಂಗ್ ಇನ್‌ಸ್ಟಾಲ್ ಮಾಡಿದ್ದ ಗನ್ ಅನ್ನು ನೀಡಲಾಗಿತ್ತು. ಒಂದು ರೀತಿಯ ಭದ್ರತಾ ಕ್ರಮವನ್ನು ಗನ್‌ನಲ್ಲಿ ಅಳವಡಿಸಲಾಗಿತ್ತು. ಇದೀಗ ಜರ್ಮನಿಯ ಕಂಪೆನಿ ಆರ್ಮಾಟಿಕ್ಸ್ ಗನ್ ಅನ್ನು ರೂಪಿಸಿದ್ದು ಇದನ್ನು ಆಪರೇಟ್ ಮಾಡಲು ಬಳಕೆದಾರರು ರೇಡಿಯೊ - ನಿಯಂತ್ರಿತ ವಾಚ್ ಅನ್ನು ಧರಿಸಬೇಕಾಗುತ್ತದೆ. ಪಿನ್ ಕೋಡ್ ಮೂಲಕ ಸಂವಹನ ನಡೆಸಬಹುದಾದ ಮೈಕ್ರೋಚಿಪ್‌ಗಳನ್ನು ಈ ಗನ್ ಒಳಗೊಂಡಿದೆ,

ಸಮುದ್ರದೊಳಗೂ ಉಸಿರಾಡಿಕೊಂಡೇ ಇರಬಹುದು

ಸಮುದ್ರದೊಳಗೂ ಉಸಿರಾಡಿಕೊಂಡೇ ಇರಬಹುದು

ಥಂಡರ್‌ಬಾಲ್ ಚಿತ್ರದಲ್ಲಿ, ಜೇಮ್ಸ್ ಬಾಂಡ್ ನೀರಿನೊಳಗೆ ಉಸಿರಾಡಲು ಬಳಸಬಹುದಾದ ಬ್ರೀತರ್ ಅನ್ನು ಬಳಸಿದ್ದಾರೆ. ದಕ್ಷಿಣ ಕೊರಿಯಾದ ವಿನ್ಯಾಸಕಾರರು ಜೇಬನ್ ಯೋನ್ ಒಂದು ಗ್ಯಾಜೆಟ್ ಅನ್ನು ತಯಾರಿಸಿದ್ದು ಇದು ಬಳಕೆದಾರರನ್ನು ಮೀನಾಗಿ ಪರಿವರ್ತಿಸುತ್ತದೆ. ನೀರಿನಿಂದ ಆಮ್ಲಜನಕವನ್ನು ಬೇರ್ಪಡಿಸಿ ಇದು ದ್ರವವನ್ನು ಹೊರಬಿಡುತ್ತದೆ ಇದರಿಂದ ಬಳಕೆದಾರರು ಸಮುದ್ರದೊಳಗೂ ಉಸಿರಾಡಿಕೊಂಡೇ ಇರಬಹುದು.

ಡಿಜಿಟಲ್ ಕ್ಯಾಮೆರಾ

ಡಿಜಿಟಲ್ ಕ್ಯಾಮೆರಾ

1985 ರ ವ್ಯೂ ಟು ಎ ಕಿಲ್ ಚಿತ್ರದಲ್ಲಿ ಬಾಂಡ್ ಕ್ಯಾಮೆರಾ ರಿಂಗ್ ಅನ್ನು ಬಳಸುತ್ತಿದ್ದು ಚಿತ್ರದಲ್ಲಿ ಹೈಲೈಟ್ ಎಂದೆನಿಸಿದೆ. ಇಂದು ಡಿಜಿಟಲ್ ಕ್ಯಾಮೆರಾವನ್ನು ಉಂಗುರಕ್ಕೆ ಅಳವಡಿಸಲಾಗುತ್ತಿದೆ. ಇದು ಚಿತ್ರಗಳನ್ನು ತೆಗೆಯುತ್ತದೆ ನಂತರ ಇದನ್ನು ಟ್ಯಾಬ್ಲೆಟ್‌ಗೆ ಸಿಂಕ್ ಮಾಡಬಹುದಾಗಿದೆ.

ಐಫೋನ್ ಕೇಸ್ ಇನ್

ಐಫೋನ್ ಕೇಸ್ ಇನ್

ಟುಮಾರೊ ನೆವರ್ ಡೈಸ್ ಚಿತ್ರದಲ್ಲಿ ಜೇಮ್ಸ್ ಬಾಂಡ್ ಎರಿಕ್‌ಸನ್ ಮೊಬೈಲ್ ಫೋನ್ ಅನ್ನು ಬಾಂಡ್ ಬಳಸುತ್ತಿದ್ದು ಇದು ಬಿಲ್ಟ್ ಇನ್ ಸ್ಟನ್ ಗನ್ ಅನ್ನು ಹೊಂದಿರುತ್ತದೆ ಇದು ಕಾರ್ಡ್ ಸ್ಲಾಟ್ ಅನ್ನು ಮುರಿಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇಂದಿನ ತಂತ್ರಜ್ಞಾನ ಫೋನ್ ಕೇಸ್‌ನಿಂದಲೇ ಈ ಕಾರ್ಯವನ್ನು ನಡೆಸಬಲ್ಲುದು. ಯೆಲ್ಲೊ ಜಾಕೆಟ್ ಐಫೋನ್ ಕೇಸ್ ಅನ್ನು ತಯಾರಿಸಿದ್ದು ಇದು 650 ಕೆ ವೋಲ್ಟ್ ಇಲೆಕ್ಟ್ರೋಡ್ ಅನ್ನು ಹೊಂದಿದೆ.

ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್

ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್

ಕ್ವಾಂಟಮ್ ಆಫ್ ಸೊಲೇಸ್‌ ಚಿತ್ರದಲ್ಲಿ ಜೇಮ್ಸ್ ಬಾಂಡ್ ಮಲ್ಟಿ ಟಚ್ ಇಂಟರ್ಫೇಸ್ ಉಳ್ಳ ಟೇಬಲ್ ಅನ್ನು ಬಳಸಲಾಗುತ್ತದೆ. ಇದುವೇ ತಂತ್ರಜ್ಞಾನವನ್ನು 2008 ರಲ್ಲಿ ಮೈಕ್ರೋಸಾಫ್ಟ್ ಮತ್ತು ಸ್ಯಾಮ್‌ಸಂಗ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಮೈಕ್ರೊಸಾಫ್ಟ್ ಪಿಕ್ಸೆಲ್ ಸೆನ್ಸ್ ಎಂದು ಹೆಸರಿಡಲಾಗಿದೆ. ಇದು ಬೆರಳುಗಳು, ಕೈಗಳು ಮತ್ತು ಸ್ಕ್ರೀನ್ ಆಬ್ಜೆಕ್ಟ್‌ಗಳನ್ನು ಗುರುತಿಸಬಲ್ಲುದು.

Best Mobiles in India

English summary
In this article we are mentioning some gadget that are highlighted in James bond movie.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X