ಚಿಕ್ಕ ವಯಸ್ಸಿನ ಆಕರ್ಷಣೆಗೆ 7 ಟನ್ ತೂಕದ ಸಂಚಾರಿ ರೋಬಾಟ್ ತಯಾರಿಸಿದ ಇಂಜಿನಿಯರ್!!
ಇಂಗ್ಲೀಷ್ ಚಿತ್ರಗಳಲ್ಲಿ ನಾವು ನೊಡುವ ದೈತ್ಯ ರೋಬಾಟ್ಗಳಿಗೂ ಮತ್ತು ನಾವು ನಿಜ ಜೀವನದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ದೈತ್ಯ ರೋಬಾಟ್ಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.
ಇಂಗ್ಲೀಷ್ ಚಿತ್ರಗಳಲ್ಲಿ ನಾವು ನೊಡುವ ದೈತ್ಯ ರೋಬಾಟ್ಗಳಿಗೂ ಮತ್ತು ನಾವು ನಿಜ ಜೀವನದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವ ದೈತ್ಯ ರೋಬಾಟ್ಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ದೈತ್ಯ ರೋಬಾಟ್ ಚಿತ್ರಗಳಿಗಳನ್ನು ನೋಡಿದ ಎಲ್ಲರಿಗೂ ಇಂತಹ ಅನುಭವವಾಗಿರುತ್ತದೆ. ಇಂಗ್ಲೀಷ್‌ನ ಅವತಾರ್ ಸಿನಿಮಾ ನೋಡಿದವರಿಗೆ ಕ್ಷಣಮಾತ್ರದಲ್ಲಿ ಆ ರೋಬೊ ಚಿತ್ರಗಳು ಕಣ್ಣುಮುಂದೆ ಬಂದು ನಿಲ್ಲುತ್ತವೆ ಅಲ್ಲವೇ.?

ಇಂತಹುದೇ ರೋಬಾಟ್‌ಗಳ ಬಗ್ಗೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಆಕರ್ಷಣೆಗೆ ಒಳಗಾದ ಜಪಾನ್ನ ಒಬ್ಬ ಇಂಜಿನಿಯರ್ಗೆ ಕಾಮಿಕ್ ಬುಕ್ಗಳಲ್ಲಿ ಬರುತ್ತಿದ್ದ ರೋಬಾಟ್ಗಳನ್ನು ನಿಜರೂಪದಲ್ಲಿ ರೂಪಿಸಿದ್ದಾನೆ. ತಾವು ಓದಿದ ಇಂಜಿನಿಯರಿಂಗ್ನ ಜ್ಞಾನ ಬಳಸಿಕೊಂಡು ದೈತ್ಯಕಾರದ ರೋಬಾಟ್ಗಳನ್ನು ತಯಾರಿಸಿದ್ದಾನೆ. ದೈತ್ಯ ಎಂದರೆ ಅತ ನಿರ್ವಿುಸಿದ ರೋಬಾಟ್ನ ಎತ್ತರ ಬರೋಬ್ಬರಿ 8.5 ಮೀ.(28 ಅಡಿ) ಇದ್ದು 7 ಟನ್ ತೂಕವನ್ನು ಹೊಂದಿದೆ. !

ಮಸಾಕಿ ನಗುಮೊಗೆ ಎಂಬ ಜಪಾನಿ ಯುವಕನಿಗೆ 'ಮೊಬೈಲ್ ಸೂಟ್ ಗುಂಡಾಮ್ ಹೆಸರಿನ ಅನಿಮೇಷನ್ ಸರಣಿ ತುಂಬ ಪ್ರಿಯವಾಗಿತ್ತು. ಅದರಲ್ಲಿನ ಬೃಹತ್ ರೋಬಾಟ್ಗಳು ಅವರನ್ನು ಆಕರ್ಷಿಸುತ್ತಿದ್ದವು. ತಾವು ಕೂಡ ಇಂಥ ರೋಬಾಟ್ಗಳನ್ನು ತಯಾರಿಸಿ ಅದರೊಳಗೆ ಕೂತು ಚಾಲನೆ ಮಾಡಬೇಕು ಎಂಬ ಪ್ರಬಲ ಇಚ್ಛೆ ಅವರನ್ನು ಯಾವಾಗಲೂ ಕಾಡುತ್ತಿತ್ತಂತೆ. ಅದನ್ನು ಅವರು ಇದೀಗ ನನಸು ಮಾಡಿಕೊಂಡಿದ್ದಾರೆ.

ಬೃಹತ್ ರೋಬಾಟ್ಗಳನ್ನು ತಯಾರಿಸುವ ಇಚ್ಚೆಯಿಂದಾಗಿ ಮಸಾಕಿ ಅವರು, ಸಕಾಕಿಬರಾ ಕಿಕಾಯಿ ಎಂಬ ಕೃಷಿ ಸಾಧನಗಳನ್ನು ತಯಾರಿಸುವ ಕಂಪನಿಯನ್ನು ಕೇಳಿಕೊಂಡಿದ್ದಾರೆ. ಸಕಾಕಿಬರಾ ಕಿಕಾಯಿ ಕಂಪೆನಿ ಕೂಡ ಮಸಾಕಿ ಕನಸಿಗೆ ಬೆಂಬಲವಾಗಿ ನಿಂತು ಮೊನೊನೊಫು ಎಂಬ ದೈತ್ಯ ರೋಬಾಟ್ ತಯಾರಿಸಲು ಸಹಕಾರ ನೀಡಿದೆ. ಈಗ ತಯಾರಾಗಿರು ಈ ರೋಬಾಟ್ ಮೂಲಕ ಸಂಚರಿಸಲು ಪ್ರತಿ ಗಂಟೆಗೆ 61 ಸಾವಿರ ರೂ. ಬಾಡಿಗೆ ವಿಧಿಸುತ್ತಿದ್ದಾರೆ.
ಓದಿರಿ: 5ಜಿ ಬಂದರೆ ಜಿಯೋ, ಏರ್‌ಟೆಲ್ ಅಂತ್ಯ ಕಾಣುತ್ತಂವತೆ!!..ಏಕೆ ಗೊತ್ತಾ?


Click it and Unblock the Notifications








