5ಜಿ ಬಂದರೆ ಜಿಯೋ, ಏರ್‌ಟೆಲ್ ಕಂಪೆನಿಗಳೆಲ್ಲವೂ ಅಂತ್ಯ ಕಾಣುತ್ತವಂತೆ!

100ಜಿಬಿ 4k ಗುಣಮಟ್ಟದ ಚಲನಚಿತ್ರವನ್ನು ಕೇವಲ 4ನಿಮಿಷದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಈ 5G ತಂತ್ರಜ್ಞಾನದ ಅಭಿವೃದ್ದಿ ವೇಗಕ್ಕೆ ಇನ್ನೇನು ಕೆಲವೇ ತಿಂಗಳುಗಳಲ್ಲಿ 5G ಬಳಕೆಗೆ ಸೂಚನೆ ಇದೆ.

|

ಇಂಟರ್‌ನೆಟ್ ಪ್ರಪಂಚ 3ಜಿ, 4ಜಿಗಳನ್ನು ಮೀರಿಸಿ ಇದೀಗ 5ಜಿ ಹಂತ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ. ಈ ವರ್ಷದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಯಾಮ್ಸಂಗ್ ಪ್ರಸ್ತುತಪಡಿಸಿದ 5ಜಿ ಹೋಂ ರೌಟರ್‌ಗಳ ವೇಗ ಸೆಕೆಂಡ್‌ಗೆ 4 ಗಿಗಾಬೈಟ್ಸ್ ನಷ್ಟು ದಾಖಲಾದ ನಂತರ, ಈ ತಂತ್ರಜ್ಞಾನದ ಬಗ್ಗೆ ಪ್ರಂಪಚವೇ ಮೂಕವಿಸ್ಮಿತವಾಗಿದನ್ನು ಈಗಾಗಲೇ ನೀವು ನೋಡಿರಬಹುದು.

100ಜಿಬಿ 4k ಗುಣಮಟ್ಟದ ಚಲನಚಿತ್ರವನ್ನು ಕೇವಲ 4ನಿಮಿಷದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ಈ 5G ತಂತ್ರಜ್ಞಾನದ ಅಭಿವೃದ್ದಿ ವೇಗಕ್ಕೆ ಇನ್ನೇನು ಕೆಲವೇ ತಿಂಗಳುಗಳಲ್ಲಿ 5G ಬಳಕೆಗೆ ಸೂಚನೆ ಇದೆ. ಜೊತೆಯಲ್ಲಿಯೇ 4ಜಿ ಎಲ್‌ಟಿಇ ತಂತ್ರಜ್ಞಾನದ ಮಂದಿನ ಹಂತ ಟೆಲಿಕಾಂ ಕಂಪೆನಿಗಳಿಗೆ ಭಾರೀ ಹೊಡೆತ ನಿಡುತ್ತದೆ ಎನ್ನುವ ಸುದ್ದಿ ಕೂಡ ಹೊರಬಿದ್ದಿದೆ.

5ಜಿ ಬಂದರೆ ಜಿಯೋ, ಏರ್‌ಟೆಲ್ ಕಂಪೆನಿಗಳೆಲ್ಲವೂ ಅಂತ್ಯ ಕಾಣುತ್ತವಂತೆ!

ಹೌದು, 5ಜಿ ತಂತ್ರಜ್ಞಾನವು ಎರಡು ರೀತಿಯಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ. ಪ್ರಾಥಮಿಕ, ಮಧ್ಯ ಬ್ಯಾಂಡ್ 6 ಗಿಗಾ ಹರ್ಟ್ಸ್‌ಗಿಂತ ಕಡಿಮೆ ತರಾಂಗಂತರ ಹಾಗೂ ಹೈ ಬ್ಯಾಂಡ್ 6 ಗಿಗಾಹರ್ಟ್ಸ್‌ಗಿಂತ ಹೆಚ್ಚಿನ ತರಾಂಗತರ ಮೂಲಕ ಮತ್ತು ಮಿಲಿ ಮೀಟರ್ ವೇವ್ ಬ್ಯಾಂಡ್‌ಗಳ ಮೂಲಕ 5G ಸೇವೆ ಪಡೆಯಬಹುದು ಎಂದು ತಂತ್ರಜ್ಞರು ಹೇಳುತ್ತಿದ್ದಾರೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಈ 5ಜಿ ಮಿಲಿಮೀಟರ್ ತರಂಗಗಳಿಗೆ ತಂತಿಯ ಸಹಾಯದಿಂದ ಸಂಪರ್ಕ ಕಲ್ಪಿಸುವ ಅಗತ್ಯ ಇರುವುದಿಲ್ಲ. ಹಾಗಾಗಿ, ನಮ್ಮ ಮೊಬೈಲ್ ಫೋನ್‌ಗಳಿಗೆ ಸಿಗುವ ನೆಟ್‌ವರ್ಕ್ ರೀತಿಯಲ್ಲೇ ಇವು ಕೂಡ ಗಾಳಿಯ ಮೂಲಕವೇ ಸೇವೆ ಒದಗಿಸುತ್ತವೆಯಂತೆ. ಸೆಲ್‌ಫೋನ್ ಟವರ್‌ಗಳ ಮೂಲಕ ತರಂಗಗಳನ್ನು ಗ್ರಹಿಸಿ ಮನೆಯಲ್ಲಿನ 5ಜಿ ರೌಟರ್‌ಗೆ ಸಂಪರ್ಕ ಕಲ್ಪಿಸುತ್ತದೆ.

5ಜಿ ಬಂದರೆ ಜಿಯೋ, ಏರ್‌ಟೆಲ್ ಕಂಪೆನಿಗಳೆಲ್ಲವೂ ಅಂತ್ಯ ಕಾಣುತ್ತವಂತೆ!

ಉದಾಹರಣೆಗೆ ಮನೆಯ ಹೊರಗಡೆ ಆಂಟೆನಾ ಅಳವಡಿಸಿದರೆ, ಸೆಲ್‌ಫೋನ್ ಟವರ್‌ಗಳ ಮೂಲಕ ವೈ-ಫೈ ಸಹಾಯದಿಂದ ಕೆಲಸ ಮಾಡುವ ಎಲ್ಲ ಪರಿಕರಗಳು ಅಂತರ್ಜಾಲದ ಸಂಪರ್ಕ ಪಡೆದುಕೊಳ್ಳುತ್ತವೆ. ಹಾಗಾಗಿ, ಇಂದು ಭಾರೀ ಬಂಡವಾಳ ಹೂಡಿ ಟೆಲಿಕಾಂ ಸ್ಪೆಕ್ಟ್ರಂಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಜಿಯೋ, ಏರ್‌ಟೆಲ್ ಸೇರಿ ಎಲ್ಲಾ ಟೆಲಿಕಾಂಗಳಿಗೆ ಹೊಡೆತಬೀಳುತ್ತದೆ. ಟೆಲಿಕಾಂ ಮತ್ತಷ್ಟು ಬದಲಾಗುತ್ತದೆ ಎಂಬುದು ತಂತ್ರಜ್ಞರ ಆಂಬೋಣ.!!

ಓದಿರಿ: ಎಲ್ಲರಿಗೂ ಭಯಹುಟ್ಟಿಸುತ್ತಿರುವ 'ಸಿಮ್ ಸ್ವಾಪ್' ಹಗರಣದ ಬಗ್ಗೆ ನಿಮಗೆಷ್ಟು ಗೊತ್ತು?

Best Mobiles in India

English summary
5G is going to be a huge technological shifts that will drive fundamental changes in our communications infrastructure. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X