ಜಪಾನ್ ದೇಶದ ಈ ತಂತ್ರಜ್ಞಾನಕ್ಕೆ ನೀವು ಖಂಡಿತ ಬೆರಗಾಗುತ್ತೀರಿ!

|

ತಂತ್ರಜ್ಞಾನ ವಲಯದಲ್ಲಿ ಗಟ್ಟಿ ಸ್ಥಾನ ಹೊಂದಿರುವ ಜಪಾನ್ ದೇಶ, ಈಗ ಇಡೀ ವಿಶ್ವವೇ ಅಚ್ಚರಿಪಡುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಫೋನಿನಲ್ಲಿ ಅಥವಾ ಟಿವಿಯಲ್ಲಿ ನೋಡುವ ತರಹೇವಾರಿ ಆಹಾರಗಳ ರುಚಿಯನ್ನು ಒಮ್ಮೆ ಮಾಡಬೇಕು ಎನಿಸಿರುತ್ತದೆ. ಆದರೆ ಅದು ಹೇಗೆ ಅಸಾಧ್ಯ ಎಂದು ನೀವು ಯೋಚಿಸಿರುತ್ತಿರಿ ಅಲ್ಲವೇ?..ಆದರೆ ನಿಮ್ಮ ಯೋಚನೆಯನ್ನೇ ತಲೆಕೆಳಗೆ ಮಾಡುವ ತಂತ್ರಜ್ಞಾನವನ್ನು ಜಪಾನ್ ರೂಪಿಸಿದೆ.

ಜಪಾನ್ ದೇಶದ ಈ ತಂತ್ರಜ್ಞಾನಕ್ಕೆ ನೀವು ಖಂಡಿತ ಬೆರಗಾಗುತ್ತೀರಿ!

ಹೌದು, ಜಪಾನ್ ದೇಶದ ಮೆಯಿಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹೋಮಿ ಮಿಯಾಶಿತಾ ಆಹಾರದ ರುಚಿ ನೋಡಬಹುದಾದ ಟಿವಿ ಯನ್ನು ವಿನ್ಯಾಸಗೊಳಿಸಿದ್ದಾರೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ. ಜಪಾನ್ ದೇಶದ ಈ ಟಿವಿ ಸಾಧನವು ವೀಕ್ಷಕರಿಗೆ ತರಹೇವಾರಿ ಖಾದ್ಯಗಳನ್ನು ತೋರಿಸುತ್ತದೆ. ಹಾಗೆಯೇ ಅದರೊಂದಿಗೆ ಆ ಆಹಾರಗಳ ರುಚಿಯನ್ನು ಪರೀಕ್ಷಿಸಲು ವೀಕ್ಷಕರಿಗೆ ಅವಕಾಶ ಮಾಡಿಕೊಡುತ್ತದೆ. ವೀಕ್ಷಕರು ಟಿವಿ ಸಾಧನದ ಸ್ಕ್ರೀನ್‌ ನೆಕ್ಕುವ ಮೂಲಕ ಆಹಾರದ ರುಚಿ ನೋಡಬಹುದಾಗಿದೆ ಎಂದು ಹೇಳಲಾಗಿದೆ.

ಜಪಾನ್ ದೇಶದ ಈ ತಂತ್ರಜ್ಞಾನಕ್ಕೆ ನೀವು ಖಂಡಿತ ಬೆರಗಾಗುತ್ತೀರಿ!

ಈ ವಿಶೇಷ ಟಿವಿಯನ್ನು ಕಂಡುಹಿಡಿದ ಪ್ರಾಧ್ಯಾಪಕರಾದ ಹೋಮಿ ಮಿಯಾಶಿತಾ ಇದಕ್ಕೆ ಟೆಸ್ಟ್ ದಿ ಟಿವಿ (Taste The TV) ಎಂದು ಕರೆದಿದ್ದಾರೆ. ಈ ಟಿವಿಯನ್ನು ನೋಡುವ ಜನರು 10 ರೀತಿಯ ಆಹಾರ ಪದಾರ್ಥಗಳ ರುಚಿಗಳನ್ನು ಅನುಭವಿಸಬಹುದು ಎಂದು ಪ್ರಾಧ್ಯಾಪಕರು ಹೇಳಿದ್ದಾರೆ. ಟಿವಿ ಸ್ಕ್ರೀನ್‌ನಲ್ಲಿ ಕಾಣಿಸುವ ಆಹಾರ ಪದಾರ್ಥವನ್ನು ನೋಡುತ್ತಿದ್ದರೆ, ಸ್ಕ್ರೀನ್‌ ನೆಕ್ಕುವ ಮೂಲಕ ಆ ಆಹಾರ ಪದಾರ್ಥದ ಮೂಲ ರುಚಿಯನ್ನು ವೀಕ್ಷಕರು ಅನುಭವಿಸಬಹುದು ಎಂದು ಅವರು ತಿಳಿಸಿದ್ದಾರೆ.

ಜಪಾನ್‌ನಲ್ಲಿ ಮೂಲ ಮಾದರಿ ಲಿಕಬಲ್ ಟಿವಿಯನ್ನು (Prototype Lickable TV) ತಯಾರಿಸಲಾಗಿದೆ. ಇದು ಆಹಾರದ ರುಚಿಯನ್ನು ನಕಲು ಮಾಡುತ್ತದೆ ಎನ್ನಲಾಗಿದೆ. ಈ ಟಿವಿ ಸಾಧನವನ್ನು ಮೆಯಿಜಿ ವಿಶ್ವವಿದ್ಯಾಲಯದಲ್ಲಿ (Meiji University) ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲಿನ ವಿದ್ಯಾರ್ಥಿಗಳು ಈ ಸಾಧನ ವನ್ನು ಪರೀಕ್ಷಿಸಿದ್ದಾರೆ. ಹಾಗೆಯೇ ಟಿವಿ ಸ್ಕ್ರೀನ್‌ನ ಮೇಲೆ ಹೈಜೀನಿಕ್ ಫಿಲ್ಮ್ ಅನ್ನು ಅಳವಡಿಸಲಾಗಿದೆ. ಹೀಗಾಗಿ ಆಹಾರದ ರುಚಿ ನೋಡಲು ಸ್ಕ್ರೀನ್ ನೆಕ್ಕುವುದರಿಂದ ಯಾವುದೇ ಸೋಂಕಿನ ಅಪಾಯವಿಲ್ಲ ಎಂದು ಹೇಳಲಾಗಿದೆ.

ಜಪಾನ್ ದೇಶದ ಈ ತಂತ್ರಜ್ಞಾನಕ್ಕೆ ನೀವು ಖಂಡಿತ ಬೆರಗಾಗುತ್ತೀರಿ!

ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹೋಮಿ ಮಿಯಾಶಿತಾ ಮಾತನಾಡಿ, 'ಸಾಂಕ್ರಾಮಿಕ ರೋಗಗಳ ಯುಗದಲ್ಲಿ ಜನರು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಂವಹನ ನಡೆಸುವ ವಿಧಾನವನ್ನು ಇಂತಹ ತಂತ್ರಜ್ಞಾನವು ಸುಧಾರಿಸುತ್ತದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಸದ್ಯ ಮನೆಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ಅನೇಕ ಜನರಿಗೆ ಪ್ರಪಂಚದ ರುಚಿಕರವಾದ ತಿನಿಸುಗಳ ರುಚಿಯನ್ನು ತಲುಪಿಸುವುದು ಈ ಸಾಧನದ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಟಿವಿ ಪರೀಕ್ಷೆಯ ಸಮಯದಲ್ಲಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಚಾಕೊಲೇಟ್ ಅನ್ನು ರುಚಿ ನೋಡಬೇಕೆಂದು ಕೇಳಿದ್ದಾರೆ. ಅದರ ನಂತರ ಸ್ಕ್ರೀನ್‌ನ ಮೇಲೆ ಚಾಕೊಲೇಟ್‌ ಚಿತ್ರವನ್ನು ತೋರಿಸಲಾಯಿತು ಮತ್ತು ಆ ಹುಡುಗಿಗೆ ಅದನ್ನು ನೆಕ್ಕಲು ಕೇಳಲಾಯಿತು. ನೆಕ್ಕಿದ ಬಳಿಕ ಚಾಕೊಲೇಟ್ ರುಚಿ ತುಂಬಾ ಚೆನ್ನಾಗಿದೆ, ಮಿಲ್ಕ್ ಚಾಕೊಲೇಟ್ ನಂತಿದೆ ಎಂದು ಆ ಹುಡಗಿ ಹೇಳಿದ್ದಾಳೆ. ಇನ್ನು ಮೆಯಿಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹೋಮಿ ಮಿಯಾಶಿತಾ ಅವರು 30 ಜನರ ತಂಡವನ್ನು ಹೊಂದಿದ್ದು, ಅವರೆಲ್ಲರ ಕೊಡುಗೆಯಿಂದ ಈ ಟಿವಿಯನ್ನು ಸಿದ್ಧಪಡಿಸಿದ್ದಾರೆ.

Best Mobiles in India

English summary
Japanese Professor Develops Lickable TV Screen Simulating Flavour Of Food.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X