7,999ರೂ.ಗೆ ಬಿಡುಗಡೆ ಆಯ್ತು JBLನ ಟ್ರೂ-ವಾಯರ್‌ಲೆಸ್ ಇಯರ್‌ಬಡ್ಸ್‌!

|

ಪ್ರಸ್ತುತ ವಾಯರ್‌ಲೆಸ್‌ ಆಡಿಯೊ ಡಿವೈಸ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ವೈವಿಧ್ಯಮಯ ವಾಯರ್‌ಲೆಸ್ ಆಡಿಯೊ ಉಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅವುಗಳಲ್ಲಿ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿರುವುದು ವಾಯರ್‌ಲೆಸ್‌ ಇಯರ್‌ಬಡ್ಸ್‌ ಸಾಧನಗಳು. ಈಗಾಗಲೇ ಹಲವು ಕಂಪನಿಗಳು ಇಯರ್‌ಬಡ್ಸ್‌ಗಳನ್ನು ಪರಿಚಯಿಸಿದ್ದು, ಆ ಲಿಸ್ಟಿಗೆ ಈಗ ಜೆಬಿಎಲ್‌ ಹೊಸದೊಂದು ಇಯರ್‌ಬಡ್ಸ್‌ ಸೇರ್ಪಡೆ ಮಾಡಿದೆ.

ಜೆಬಿಎಲ್-JBL

ಹೌದು, ಜನಪ್ರಿಯ ಜೆಬಿಎಲ್-JBL ಆಡಿಯೊ ಉಪಕರಣದ ಸಂಸ್ಥೆಯು ಇದೀಗ ಹೊಸದಾಗಿ 'C100TWS' ಹೆಸರಿನ ಟ್ರೂ-ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಡಿವೈಸ್‌ ಸುಮಾರು 17 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಪ್ರಮುಖ ಅಟ್ರ್ಯಾಕ್ಷನ್ ಆಗಿದೆ. ಇನ್ನು ಈ ಇಯರ್‌ಬಡ್ಸ್‌ ಡಿವೈಸ್ ಆಡಿಯೊ ಸೌಂಡ್ ಮತ್ತು ಬೆಲೆಯಿಂದಲೂ ಗ್ರಾಹಕರನ್ನು ಸೆಳೆಯುವ ಲಕ್ಷಣಗಳನ್ನು ಹೊಂದಿದೆ.

C100TWS

HARMANನ ಜೆಬಿಎಲ್ ಆಡಿಯೊ ಸಂಸ್ಥೆಯ ಈ C100TWS ಟ್ರೂ-ವಾಯರ್‌ಲೆಸ್‌ ಇಯರ್‌ಬಡ್ಸ್‌ 5.88ಎಂಎಂ ಆಡಿಯೊ ಡ್ರೈವರ್ಸ್‌ಗಳನ್ನು ಪಡೆದಿದ್ದು, ಅತ್ಯುತ್ತಮ ಸೌಂಡ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಗುಣಮಟ್ಟದ ಸೌಂಡ್ ಮತ್ತು ಹೆಚ್ಚಿನ ವ್ಯಾಲ್ಯೂಮ್‌ನಲ್ಲಿಯೂ ಕೇಳಿಸಲು ಅವಕಾಶ ಮಾಡಿಕೊಡುತ್ತದೆ. ಹ್ಯಾಂಡ್ಸ್‌ ಫ್ರೀ ಸ್ಟೀರಿಯೊ ಕಾಲಿಂಗ್ ಸೌಲಭ್ಯವನ್ನು ಪಡೆದಿದೆ.

ಬ್ಯಾಟರಿ ಲೈಫ್‌

ಇನ್ನು ಈ ಇಯರ್‌ಬಡ್ಸ್‌ನ ಬ್ಯಾಟರಿ ಲೈಫ್‌ ಸಹ ವಿಶೇಷವಾಗಿದ್ದು, ಡಿವೈಸ್‌ ಅನ್ನು ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 17 ಗಂಟೆ ಬ್ಯಾಟರಿ ಬಾಳಿಕೆ ಬರೆಲಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಹಾಗೆಯೇ ಕೇವಲ 15 ನಿಮಿಷದ ಚಾರ್ಜ್ ಸುಮಾರು ಒಂದು ಗಂಟೆಯ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಡಿವೈಸ್‌ ಸಂಪೂರ್ಣ ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸಲಿದ್ದು, ಜಸ್ಟ ಒಂದು ಕ್ಲಿಕ್‌ನಿಂದ ಗೂಗಲ್ ಅಸಿಸ್ಟಂಟ್ ಹಾಗೂ ಸಿರಿ ಆಕ್ಟಿವ್ ಮಾಡುವ ಆಯ್ಕೆ ಇದೆ.

7,999ರೂ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿರುವ ಜೆಬಿಎಲ್‌ನ ವಾಯರ್‌ಲೆಸ್‌ ಇಯರ್‌ಬಡ್ಸ್‌ C100TWS ಡಿವೈಸ್ ಬೆಲೆಯು 7,999ರೂ.ಗಳು ಆಗಿದೆ. ಇನ್ನು ಈ ಡಿವೈಸ್ ಕಂಪನಿಯ ಅಧಿಕೃತ ವೆಬ್‌ತಾಣ ಮತ್ತು ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದೇ ಡಿಸೆಂಬರ್ 12 ರಿಂದ ಮುಂಗಡ ಆರ್ಡರ್‌ಗೆ ಮಾಡಬಹುದಾಗಿದೆ. ಆರಂಭಿಕ ಕೊಡುಗೆಗಳು ಸಹ ಲಭ್ಯವಾಗಲಿವೆ.

Most Read Articles
Best Mobiles in India

English summary
JBL C100TWS true wireless earbuds will be available on company’s online store and Flipkart for Rs 7,999 starting December 12. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X