ಭಾರತದಲ್ಲಿ ಜೆಬಿಎಲ್‌ನಿಂದ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಜೆಬಿಎಲ್‌ ಕಂಪೆನಿ ಗುಣಮಟ್ಟದ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಬ್ಲೂಟೂತ್‌ ಸ್ಪೀಕರ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಜೆಬಿಎಲ್ (JBL) ಇದೀಗ ಹೊಸದಾಗಿ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಅದುವೇ ಜೆಬಿಎಲ್‌ ಫ್ಲಿಪ್‌ 6 ಸ್ಪೀಕರ್. ಈ ಸ್ಪೀಕರ್ ಸಿಂಗಲ್‌ ಚಾರ್ಜ್‌ನಲ್ಲಿ ಸುಮಾರು 12 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒದಗಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಭಾರತದಲ್ಲಿ ಜೆಬಿಎಲ್‌ನಿಂದ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಬಿಡುಗಡೆ!

ಹೌದು, ಜೆಬಿಎಲ್‌ ಕಂಪನಿಯು ಭಾರತದಲ್ಲಿ ನೂತನವಾಗಿ 'ಜೆಬಿಎಲ್‌ ಫ್ಲಿಪ್‌ 6' ಹೆಸರಿನ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. ಈ ಸಾಧನವು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ಎಂದು ರೇಟ್ ಮಾಡಲಾಗಿದ್ದು, ಬ್ಲೂಟೂತ್ v5.1 ಸೌಲಭ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡೂ ಸಾಧನಗಳಿಗೆ ಲಭ್ಯವಿರುವ (My JBL) ಮೈ ಜೆಬಿಎಲ್‌ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸ್ಪೀಕರ್‌ನ ಆಡಿಯೋ ಅನ್ನು ವೈಯಕ್ತೀಕರಿಸಬಹುದು.

ಭಾರತದಲ್ಲಿ ಜೆಬಿಎಲ್‌ನಿಂದ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಬಿಡುಗಡೆ!

ಜೆಬಿಎಲ್‌ ಫ್ಲಿಪ್ 6 ಹಿಂದಿನ ಜೆಬಿಎಲ್‌ ಫ್ಲಿಪ್ 5 ನಂತೆಯೇ ಅದೇ ಕೊಳವೆಯ ವಿನ್ಯಾಸವನ್ನು ಹೊಂದಿದೆ. ಇದು ಪೋರ್ಟಬಲ್ ಸ್ಪೀಕರ್ ರೇಸ್‌ಟ್ರಾಕ್ ಆಕಾರದ ಆಡಿಯೋ ಡ್ರೈವರ್, ಟ್ವೀಟರ್ ಮತ್ತು ಡ್ಯುಯಲ್ ಬಾಸ್ ರೇಡಿಯೇಟರ್‌ಗಳೊಂದಿಗೆ ಟು ವೇ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ. ಇದು ವೂಫರ್‌ಗೆ 30W - 20W ಮತ್ತು ಟ್ವೀಟರ್‌ಗೆ 10W ಪವರ್ ಔಟ್‌ಪುಟ್ ಅನ್ನು ನೀಡುತ್ತದೆ. ಹಾಗೆಯೇ ಈ ಸ್ಪೀಕರ್ 63Hz - 20kHz ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ಒಳಗೊಂಡಿದೆ. ಟ್ಯೂಬ್ಯುಲರ್ ಸ್ಪೀಕರ್ ಪಾರ್ಟಿಬೂಸ್ಟ್‌ನೊಂದಿಗೆ ಬರುತ್ತದೆ. ಹಾಗೆಯೇ ಪಾರ್ಟಿಬೂಸ್ಟ್ ಹೊಂದಾಣಿಕೆಯ ಸ್ಪೀಕರ್‌ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಜೆಬಿಎಲ್‌ನಿಂದ ವಾಟರ್‌ಫ್ರೂಫ್‌ ಬ್ಲೂಟೂತ್ ಸ್ಪೀಕರ್ ಬಿಡುಗಡೆ!

ಜೆಬಿಎಲ್‌ ಫ್ಲಿಪ್ 6 ಪೋರ್ಟಬಲ್ ಸ್ಪೀಕರ್ 178 x 68 x 72mm ಸುತ್ತಳತೆ ಪಡೆದಿದ್ದು, 550ಗ್ರಾಂ ತೂಕ ಹೊಂದಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ ಒಂದೇ ಚಾರ್ಜ್‌ನಲ್ಲಿ 12 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಬಳಸಿ ಸಂಪೂರ್ಣವಾಗಿ ಚಾರ್ಜ್ ಮಾಡಲು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಜೆಬಿಎಲ್‌ ಹೇಳುತ್ತದೆ. ಜೆಬಿಎಲ್‌ ನಿಂದ ಹೊಸ ಆಡಿಯೋ ಆಫರಿಂಗ್ ಬ್ಲೂಟೂತ್ v5.1 ಅನ್ನು ಹೊಂದಿದ್ದು, ಏಕಕಾಲದಲ್ಲಿ ಎರಡು ಡಿವೈಸ್‌ಗಳೊಂದಿಗೆ ಸಂಪರ್ಕಿಸಬಹುದು.

ಭಾರತದಲ್ಲಿ ಜೆಬಿಎಲ್‌ ಫ್ಲಿಪ್ 6 ಬೆಲೆ 14,999 ರೂ. ಆಗಿದೆ. ಆದರೆ ಜೆಬಿಎಲ್‌ ಇಂಡಿಯಾದ ವೆಬ್‌ಸೈಟ್‌ನಲ್ಲಿ ಆರಂಭಿಕ ಕೊಡುಗೆಯಾಗಿ ಈ ಸ್ಪೀಕರ್ ಪ್ರಸ್ತುತ 11,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಜೆಬಿಎಲ್‌ ಫ್ಲಿಪ್ 6 ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ 11,999 ರೂ.ಗೆ ಖರೀದಿಸಬಹುದು. ಇನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಜೆಬಿಎಲ್‌ ಫ್ಲಿಪ್ 6 ಅನ್ನು ಒಂಬತ್ತು ಬಣ್ಣ ಆಯ್ಕೆಗಳಲ್ಲಿ ಪಟ್ಟಿ ಮಾಡಿದೆ. ಅವುಗಳು ಕ್ರಮವಾಗಿ ಕಪ್ಪು, ನೀಲಿ, ಹಸಿರು, ಬೂದು, ಗುಲಾಬಿ, ಸ್ಕ್ವಾಡ್, ಟೀಲ್, ಕೆಂಪು ಮತ್ತು ಬಿಳಿ ಆಗಿವೆ. ಆದರೆ ಅಮೆಜಾನ್‌ನಲ್ಲಿ ಕಪ್ಪು, ನೀಲಿ ಮತ್ತು ಸ್ಕ್ವಾಡ್ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಹಾಗೆಯೇ ಇತ್ತೀಚಿಗೆ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES 2022) ನಲ್ಲಿ ಜೆಬಿಎಲ್‌ ಸಂಸ್ಥೆಯು ಬ್ಲೂಟೂತ್ ಸ್ಪೀಕರ್ ಲೈನ್‌ಅಪ್ ಮತ್ತು ವಾಯರ್‌ಲೆಸ್ ಗೇಮಿಂಗ್ ಹೆಡ್‌ಸೆಟ್ ಸರಣಿಯನ್ನು ಬಿಡುಗಡೆ ಮಾಡಿತ್ತು. ಇವುಗಳನ್ನು ಜೆಬಿಎಲ್‌ ಪಲ್ಸ್ 5 ಮತ್ತು ಜೆಬಿಎಲ್‌ ಬೂಮ್‌ಬಾಕ್ಸ್ 3 ಆಗಿವೆ. ಈ ಸ್ಪೀಕರ್‌ಗಳು ಬ್ಲೂಟೂತ್ v5.3 ಕನೆಕ್ಟಿವಿಟಿ ನೀಡಲಿದ್ದು, ವಾಯರ್‌ಲೆಸ್ ಜೋಡಣೆಯನ್ನು ಹೊಂದಿವೆ.

Best Mobiles in India

English summary
JBL Flip 6 Bluetooth Speaker With IP67 Water-Resistant Build Launched in India: Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X