Home
ಸುದ್ದಿಜಾಲ

JCB phones: ಜೆಸಿಬಿ ಟಫ್‌ಫೋನ್, ಟಫ್‌ಫೋನ್ ಮ್ಯಾಕ್ಸ್ ಲಾಂಚ್‌; ಇವುಗಳಿಗೆ ಚಂಡಮಾರುತ ಲೆಕ್ಕಕ್ಕಿಲ್ಲ!

ಸ್ಮಾರ್ಟ್‌ಫೋನ್‌ಗಳು ಒಂದಕ್ಕೊಂದು ಭಿನ್ನತೆಯಿಂದ ಕೂಡಿದ್ದು, ಬಳಕೆದಾರರಿಗೆ ಅನುಕೂಲ ಆಗುವ ಹಾಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಾ ಬರುತ್ತಿವೆ. ಅದರಲ್ಲೂ ಪ್ರಮುಖ ಕಂಪೆನಿಗಳು ಈ ಫೋನ್‌ಗಳಲ್ಲಿ ಅಚ್ಚರಿ ಪಡುವ ಫೀಚರ್ಸ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ. ಈ ನಡುವೆ ಮಾರುಕಟ್ಟೆಯಲ್ಲಿ ಈ ಹೊಸ ಫೋನ್ ಸುನಾಮಿ ಸೃಷ್ಟಿಸಲಿದೆ.

ಹೌದು, ನಾವು ಈ ಫೋನ್‌ ಬಗ್ಗೆ ಹೇಳುವ ಮುನ್ನ ಒಮ್ಮೆ ನೀವು ಜೆಸಿಬಿ (JCB) ಯಂತ್ರದ ಕೆಲಸವನ್ನು ಈ ನೆನಪಿಸಿಕೊಂಡರೆ ಉತ್ತಮ. ಇದು ಎಂತಹುದೇ ಕಠಿಣ ಪ್ರದೇಶವಿರಲಿ,ಗುಡ್ಡ ಗಾಡು ಇರಲಿ ಎಲ್ಲಿಬೇಕಾದರೂ ಕೆಲಸ ಮಾಡುತ್ತದೆ. ಅದೇ ರೀತಿ ಈಗ ಜೆಸಿಬಿ ಕಂಪೆನಿಯು ಜೆಸಿಬಿ ಟಫ್‌ಫೋನ್ ಮತ್ತು ಜೆಸಿಬಿ ಟಫ್‌ಫೋನ್ ಮ್ಯಾಕ್ಸ್ ಅನ್ನು ಪರಿಚಯಿಸಿದ್ದು, ಈ ಫೋನ್‌ಗಳು ಮಳೆ, ಶಾಖ, ಚಳಿ, ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಿಗೆ ಸೆಡ್ಡು ಹೊಡೆಯಲಿದೆ. ಹಾಗಿದ್ರೆ, ಬನ್ನಿ ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ.

JCB ಟಫ್‌ಫೋನ್,ಟಫ್‌ಫೋನ್ ಮ್ಯಾಕ್ಸ್ ಲಾಂಚ್‌;ಇವುಗಳಿಗೆ ಚಂಡಮಾರುತ ಲೆಕ್ಕಕ್ಕಿಲ್ಲ

ಜಿಸಿಬಿ ಟಫ್‌ಫೋನ್ ಫೀಚರ್ಸ್‌: ಈ ಜೆಸಿಬಿ ಫೋನ್ 5.7 ಇಂಚಿನ ಹೆಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದುಕೊಂಡಿದೆ. ಇದರೊಂದಿಗೆ ಒದಗಿಸಲಾಗಿದೆ. ಮೀಡಿಯಾಟೆಕ್‌ ಹಿಲಿಯೋ P22 ಪ್ರೊಸೆಸರ್‌ ಬಲ ಹೊಂದಿದ್ದು, ಈ ಫೋನ್‌ ಅನ್ನು ಆಂಡ್ರಾಯ್ಡ್‌ 13 ಓಎಸ್‌ ರನ್‌ ಮಾಡಲಿದೆ. ಹಾಗೆಯೇ 6GB RAM + 128GB ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದೆ.

ಉಳಿದಂತೆ 20 ಮೆಗಾಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯ ಈ ಫೋನ್‌ಗೆ ಇದ್ದು, ಈ ಮೂಲಕ ಅತ್ಯುತ್ತಮ ಫೋಟೋಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಜೊತೆಗೆ ಸೆಲ್ಫಿ ಉದ್ದೇಶಕ್ಕಾಗಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೀಚರ್ಸ್‌ನೊಂದಿಗೆ ಈ ಜೆಸಿಬಿ ಟಫ್‌ಫೋನ್ 4,050mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಅತ್ಯುತ್ತಮವಾದ ಬ್ಯಾಕಪ್‌ ನೀಡಲಿದೆ. ಆದರೆ ವೇಗದ ಚಾರ್ಜಿಂಗ್ ಹೊಂದಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಜೆಸಿಬಿ ಟಫ್‌ಫೋನ್ ಮ್ಯಾಕ್ಸ್ ಫೀಚರ್ಸ್‌: ಮತ್ತೊಂದು ಫೋನ್‌ ಆಗಿರುವ ಜೆಸಿಬಿ ಟಫ್‌ಫೋನ್ ಮ್ಯಾಕ್ಸ್ ವಿಷಯಕ್ಕೆ ಬರುವುದಾದರೆ ಇದು 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ (FHD+) ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಆಂಡ್ರಾಯ್ಡ್ 12 ಓಎಸ್‌ ಮೂಲಕ ರನ್‌ ಆಗುವ ಈ ಫೋನ್‌ 8GB RAM ಹಾಗೂ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಉಳಿದಂತೆ ಈ ಫೋನ್ ಟ್ರಿಪಲ್‌ ರಿಯಲ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ , 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಆಯ್ಕೆ ಇದರಲ್ಲಿದೆ. ಈ ಫೋನ್‌ನ ಮತ್ತೊಂದು ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದರೆ ಇದು 12,200 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಮೂಲಕ ಒಂದು ಬಾರಿ ಚಾರ್ಜ್‌ ಮಾಡಿದರೆ ಸ್ಟ್ಯಾಂಡ್‌ಬೈನಲ್ಲಿ 30 ದಿನಗಳ ಇರಲಿದೆ.

ಇನ್ನು ಈ ಫೋನ್‌ಗಳು ಮಳೆ, ಬಿಸಿಲು ಮತ್ತು ಚಳಿಯನ್ನು ಸುಲಭವಾಗಿ ತಡೆದುಕೊಳ್ಳುವಂತೆ ನಿರ್ಮಾಣ ಮಾಡಲಾಗಿದ್ದು, MIL-SPEC 810G ಗುಣಮಟ್ಟದ ಪ್ರಮಾಣೀಕರಣವನ್ನು ಹೊಂದಿವೆ. ಜೊತೆಗೆ ಫೋನ್‌ಗಳ ಹೊರಭಾಗವು ಪಾಲಿಕಾರ್ಬೊನೇಟ್ ಮತ್ತು ಲೋಹದಿಂದ ಮಾಡಲ್ಪಟ್ಟಿದ್ದು, ನೀರಿನಲ್ಲಿ ಮುಳುಗಿದರೂ, ಬಂಡೆಯ ಮೇಲೆ ಬೀಳಿಸಿದರೂ, ಎಸೆದರೂ ಸುರಕ್ಷಿತವಾಗಿರಲಿದೆ.

JCB ಟಫ್‌ಫೋನ್,ಟಫ್‌ಫೋನ್ ಮ್ಯಾಕ್ಸ್ ಲಾಂಚ್‌;ಇವುಗಳಿಗೆ ಚಂಡಮಾರುತ ಲೆಕ್ಕಕ್ಕಿಲ್ಲ

ಜಿಸಿಬಿ ಟಫ್‌ಫೋನ್‌ಗಳ ಬೆಲೆ ಹಾಗೂ ಲಭ್ಯತೆ: ಈ ಜಿಸಿಬಿ ಟಫ್‌ಫೋನ್‌ ಮ್ಯಾಕ್ಸ್‌ಗೆ 600 ಯುರೋ ನಿಗದಿ ಪಡಿಸಲಾಗಿದೆ. ಅಂದರೆ ಭಾರತದಲ್ಲಿ ಇದರ ಬೆಲೆ 62,530ರೂ.ಗಳಾಗುತ್ತದೆ. ಹಾಗೆಯೇ ಜಿಸಿಬಿ ಟಫ್‌ಫೋನ್‌ಗೆ 300 ಯುರೋಗಳಾಗಿದ್ದು, ಭಾರತದಲ್ಲಿ ಇದು 31,265ರೂ.ಗಳ ಬೆಲೆಯಲ್ಲಿ ಲಭ್ಯ ಇರಲಿದೆ. ಈ ಫೋನ್‌ಗಳು ಜುಲೈನಲ್ಲಿ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದ್ದು, ಶೀಘ್ರದಲ್ಲೇ ಭಾರತದಲ್ಲೂ ಲಾಂಚ್‌ ಆಗುವ ನಿರೀಕ್ಷೆ ಇದೆ.

Best Mobiles in India

English summary
JCB Company has introduced JCB Toughphone and JCB Toughphone Max. These phones will withstand natural calamities like rain, heat, cold, storm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+