ಅಮೆಜಾನ್ ಮಾಲಿಕ ನೀಡಿದ್ದು ವಿಶ್ವದಲ್ಲೇ ಅತೀ ದುಬಾರಿ ಮೊತ್ತದ ಡಿವೋರ್ಸ್!
ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಸಂಸ್ಥೆಯ ಮಾಲಿಕ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಜೆಫ್ ಬೆಜೊಸ್ ಆಸ್ತಿ ಒಂದೇ ದಿನಕ್ಕೆ ₹2.4 ಲಕ್ಷ ಕೋಟಿಯಷ್ಟು ಕರಗಿದೆ. ಹಾಗಂತ ಅಮೆಜಾನ್‌ಗೆ ಇಷ್ಟು ನಷ್ಟವಾಗಿದೆ ಎಂದುಕೊಳ್ಳಬೇಡಿ. ಏಕೆಂದರೆ, ಮೂರು ತಿಂಗಳ ಹಿಂದೆಯೇ ಜೆಫ್ ಹಾಗೂ ಮ್ಯಾಕೆನ್ಸಿ ದಂಪತಿಯ ವಿಚ್ಛೇದನ ಒಪ್ಪಂದ ಇಂದು ಫೈನಲ್ ಆಗಿದ್ದು, ವಿಶ್ವದಲ್ಲೇ ಈವರೆಗಿನ ಅತೀ ಹೆಚ್ಚಿನ ಜೀವನಾಂಶ ಮೊತ್ತವನ್ನು ಜೆಫ್ ಬೇಸೋಸ್ ಅವರು ತಮ್ಮ ಮಾಜಿ ಧರ್ಮಪತ್ನಿಗೆ ನೀಡಿದ್ದಾರೆ.
ಹೌದು, 1993ರಲ್ಲಿ ಮದುವೆಯಾಗಿದ್ದ ಜೆಫ್ ಹಾಗೂ ಮ್ಯಾಕೆನ್ಸಿ ಅವರು 25 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಇವರಿಬ್ಬರೂ ಬೇರ್ಪಡುತ್ತಿರುವ ಬಗ್ಗೆ ಘೋಷಿಸಿದ ಮೂರು ತಿಂಗಳಲ್ಲೇ ವಿಚ್ಛೇದನ ಒಪ್ಪಂದ ಫೈನಲ್ ಆಗಿದೆ. ಅಮೇಜಾನ್ನ ಶೇ.75 ರಷ್ಟು ಷೇರು ಹಾಗೂ ವೋಟಿಂಗ್ ಪವರ್ ಜೆಫ್ ಬಳಿಯೇ ಉಳಿಯಲಿದೆ ಎಂದು ಮ್ಯಾಕೆನ್ಸಿ ತಿಳಿಸಿದ್ದು, ಜೀವನಾಂಶ ನೀಡಿದ ಬಳಿಕವೂ ಜೆಫ್ ಬೆಜೊಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿಯಲಿದ್ದಾರೆ.

ಈ ಬಗ್ಗೆ ಮ್ಯಾಕೆನ್ಸಿ ಟ್ವೀಟ್ ಮಾಡಿದ್ದು, ಅಮೆಜಾನ್ನ ಶೇ.75 ರಷ್ಟು ಷೇರು ಹಾಗೂ ವೋಟಿಂಗ್ ಪವರ್ ಜೆಫ್ ಬಳಿಯೇ ಉಳಿಯಲಿದೆ ಎಂದು ತಿಳಿಸಿದ್ದಾರೆ. ಹಾಗಾಗಿ, ಜೆಫ್ ಬೆಜೊಸ್ ಹಾಗೂ ಪತ್ನಿ ಮ್ಯಾಕೆನ್ಸಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ ಬಳಿಕ ಅಮೆಜಾನ್ನ ಗತಿ ಏನು ಅನ್ನೋ ಚಿಂತೆಯಲ್ಲಿದ್ದ ಷೇರುದಾರರ ಆತಂಕ ದೂರವಾಗಿದೆ. ಇನ್ನು ವಿಶ್ವದಾದ್ಯಂತ ಕುತೋಹಲಕ್ಕೆ ಕಾರಣವಾಗಿದ್ದ ಜೆಫ್ ಹಾಗೂ ಮ್ಯಾಕೆನ್ಸಿ ದಂಪತಿ ಆಸ್ತಿಯನ್ನ ಹೇಗೆ ಹಂಚಿಕೊಳ್ಳಲಿದ್ದಾರೆ ಮತ್ತು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದು ಸಹ ಫೈನಲ್ ಆಗಿದೆ.
ಅಮೆಜಾನ್ ಸಂಸ್ಥೆಯ ಒಟ್ಟಾರೆ ಮೌಲ್ಯ 900 ಬಿಲಿಯನ್ ಡಾಲರ್(ಅಂದಾಜು ₹62 ಲಕ್ಷ ಕೋಟಿ) ಆಗಿದ್ದು, ಮ್ಯಾಕೆನ್ಸಿಗೆ ಜೆಫ್ ಶೇ. 4ರಷ್ಟು ಅಮೆಜಾನ್ ಷೇರನ್ನ ಜೀವನಾಂಶವಾಗಿ ನೀಡ್ತಿದ್ದಾರೆ. ಇದರ ಮೊತ್ತ 36 ಬಿಲಿಯನ್ ಡಾಲರ್ ಆಗಲಿದೆ. (ಅಂದಾಜು ₹2.4 ಲಕ್ಷ ಕೋಟಿ). ₹2.4 ಲಕ್ಷ ಕೋಟಿ ಕರಗಿನ ಜೆಫ್ರ ಸದ್ಯದ ಆಸ್ತಿ 114 ಬಿಲಿಯನ್ ಡಾಲರ್ ಎನ್ನಲಾಗಿದ್ದು, (ಅಂದಾಜು ₹7 ಲಕ್ಷ ಕೋಟಿ).ಶೇ. 75ರಷ್ಟು ಸ್ಟಾಕ್ ಹೊಂದುವ ಮೂಲಕ ಅಮೆಜಾನ್ನ ನಿಯಂತ್ರಣವನ್ನು ಕೂಡ ಜೆಫ್ ಅವರೇ ಹಿಡಿದಿಟ್ಟುಕೊಂಡಿದ್ದಾರೆ.

ಮತ್ತೊಂದು ಕುತೋಹಲದ ಸಂಗತಿ ಎಂದರೆ, ಸದ್ಯದ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ರ್ಯಾಕಿಂಗ್ ಪ್ರಕಾರ ಜಗತ್ತಿನ ಶ್ರೀಮಂತ ಮಹಿಳೆಯರ ಲಿಸ್ಟ್ನಲ್ಲಿ ಮ್ಯಾಕೆನ್ಸಿ ಒಂದೇ ದಿನದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲೇ ಅತೀ ದುಬಾರಿ ಮೊತ್ತದ ಡಿವೋರ್ಸ್ ಇದಾಗಿದ್ದರೆ, 2014ರಲ್ಲಿ ಅಮೆರಿಕಾದ ತೈಲ ಉದ್ಯಮಿ ಹಾರೋಲ್ಡ್ ಹ್ಯಾಮ್ ತನ್ನ ವಿಚ್ಛೇದಿತ ಪತ್ನಿ ಸೂ ಆ್ಯನ್ ಅರ್ನಾಲ್ಗೆ 972 ಮಿಲಿಯನ್ ಡಾಲರ್( ಅಂದಾಜು ₹6 ಸಾವಿರ ಕೋಟಿ) ಹಣವನ್ನ ಜೀವನಾಂಶವಾಗಿ ನೀಡಿರುವುದು ಇಲ್ಲಿಯವರೆಗಿನ ದಾಖಲೆಯಾಗಿತ್ತು.
ಓದಿರಿ: 'ಹಾನರ್ 9ಎನ್' ಭಾರೀ ಬೆಲೆ ಇಳಿಕೆಗೆ ಹೆದರಿದ ಶಿಯೋಮಿ!..ಇದು ಬೆಸ್ಟ್ ಡೀಲ್!!


Click it and Unblock the Notifications