Home
ಸುದ್ದಿಜಾಲ

ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ ಜಿಯೋ ಡೇಟಾ ವೋಚರ್‌ಗಳು!

ಜಿಯೋ ಟೆಲಿಕಾಂ ಕಡಿಮೆ ಬೆಲೆಯಲ್ಲಿ ಹಲವು ಡೇಟಾ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಹಾಗೆಯೇ ಅಧಿಕ ಡೇಟಾ ಬಯಸುವ ತನ್ನ ಚಂದಾದಾರರಿಗೆ ಅನುಕೂಲಕರ ವರ್ಕ್‌ ಫ್ರಮ್‌ ಹೋಮ್‌ ಪ್ಲ್ಯಾನ್‌ಗಳನ್ನು ಹಾಗೂ 4G ಡೇಟಾ ವೋಚರ್‌ ಪ್ಯಾಕ್‌ಗಳನ್ನು ಪರಿಚಯಿಸಿದೆ. ಈ ಡೇಟಾ ವೋಚರ್‌ ಪ್ಯಾಕ್‌ಗಳು ಗ್ರಾಹಕರ ಹೆಚ್ಚುವರಿ ಡೇಟಾ ಅವಶ್ಯಕತೆ ಪೂರೈಸಲಿವೆ.

ಗ್ರಾಹಕರಿಗೆ

ಹೌದು, ಜಿಯೋ ಟೆಲಿಕಾಂ ಆರಂಭಿಕ 11ರೂ. ಬೆಲೆಯಿಂದ ಡೇಟಾ ವೋಚರ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಆದರೆ ಕೆಲವೊಮ್ಮೆ ವ್ಯಾಲಿಡಿಟಿ ಅವಧಿಗೆ ಮುನ್ನವೇ ಡೇಟಾ ಸೌಲಭ್ಯ ಮುಗಿದು ಹೋಗಿರುತ್ತದೆ. ಹಾಗೆಯೇ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಈ ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ನೆರವಾಗಲಿವೆ. ಹಾಗಾದರೇ ಜಿಯೋ ಡೇಟಾ ವೋಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಜಿಯೋ 4G ಡಾಟಾ ವೋಚರ್ಸ್‌

ಜಿಯೋ 4G ಡಾಟಾ ವೋಚರ್ಸ್‌

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 1GB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 2GB ಡಾಟಾ, 51ರೂ. ನಲ್ಲಿ 6GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 12GB ಡಾಟಾ ಸಿಗಲಿದೆ.

ಜಿಯೋ IUC ಟಾಪ್‌-ಅಪ್‌ ಪ್ಲ್ಯಾನ್‌

ಜಿಯೋ IUC ಟಾಪ್‌-ಅಪ್‌ ಪ್ಲ್ಯಾನ್‌

ಇನ್ನು ಜಿಯೋ ಕೆಲವು ಆಕರ್ಷಕ IUC ಟಾಪ್‌-ಅಪ್‌ ಪ್ಲ್ಯಾನ್‌ಗಳು ಸದ್ಯ ಚಾಲ್ತಿ ಇವೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

ಜಿಯೋ IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಜಿಯೋ IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಈ ಯೋಜನೆಗಳು ಟಾಕ್‌ಟೈಮ್‌ ಸೌಲಭ್ಯಗಳನ್ನು ಒದಗಿಸುತ್ತವೆ.

Best Mobiles in India

English summary
Jio 4G Data Prepaid Plan List And Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+