Home
ಸುದ್ದಿಜಾಲ

ಅಗ್ಗದ ಬೆಲೆಗೆ ಲಭ್ಯವಿರುವ ಜಿಯೋ 4G ಡೇಟಾ ವೋಚರ್‌ಗಳ ಮಾಹಿತಿ!

ಜಿಯೋ ಟೆಲಿಕಾಂ ಕಡಿಮೆ ಬೆಲೆಯಲ್ಲಿ ಹಲವು ಡೇಟಾ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಹಾಗೆಯೇ ತನ್ನ ಚಂದಾದಾರರಿಗೆ ಅನುಕೂಲಕರ ವರ್ಕ್‌ ಫ್ರಮ್‌ ಹೋಮ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅದರೊಂದಿಗೆ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗಾಗಿ ಅಗ್ಗದ ಬೆಲೆಯಲ್ಲಿ ಕೆಲವು ಡೇಟಾ ವೋಚರ್‌ ಪ್ಯಾಕ್‌ಗಳನ್ನು ಸಹ ಜಿಯೋ ಹೊಂದಿದೆ.

ಡೇಟಾ ಪ್ಲ್ಯಾನ್‌ಗಳ

ಡೇಟಾ ಪ್ಲ್ಯಾನ್‌ಗಳ

ಹೌದು, ಜಿಯೋ ಟೆಲಿಕಾಂ ಆರಂಭಿಕ 11ರೂ. ಬೆಲೆಯಿಂದ ಡೇಟಾ ವೋಚರ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಆದರೆ ಕೆಲವೊಮ್ಮೆ ವ್ಯಾಲಿಡಿಟಿ ಅವಧಿಗೆ ಮುನ್ನವೇ ಡೇಟಾ ಸೌಲಭ್ಯ ಮುಗಿದು ಹೋಗಿರುತ್ತದೆ. ಆಗ ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ನೆರವಾಗಲಿವೆ. ಹಾಗೂ ಈ ಪ್ಲ್ಯಾನ್‌ಗಳು ಗ್ರಾಹಕರ ಎಕ್ಸಿಸ್ಟಿಂಗ್ ಪ್ಲ್ಯಾನ್ ವ್ಯಾಲಿಡಿಟಿಯನ್ನೇ ಒದಗಿಸುತ್ತದೆ. ಹಾಗಾದರೇ ಜಿಯೋ ಡೇಟಾ ವೋಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಜಿಯೋ 4G ಡಾಟಾ ವೋಚರ್ಸ್‌

ಜಿಯೋ 4G ಡಾಟಾ ವೋಚರ್ಸ್‌

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

IUC ಟಾಪ್‌-ಅಪ್‌ ಪ್ಲ್ಯಾನ್‌

IUC ಟಾಪ್‌-ಅಪ್‌ ಪ್ಲ್ಯಾನ್‌

ಇನ್ನು ಜಿಯೋ ಕೆಲವು ಆಕರ್ಷಕ IUC ಟಾಪ್‌-ಅಪ್‌ ಪ್ಲ್ಯಾನ್‌ಗಳು ಸದ್ಯ ಚಾಲ್ತಿ ಇವೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

Best Mobiles in India

English summary
Jio 4G Data Voucher All Plans Details. starting from Rs. 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+