ಜಿಯೋ 4G ಡೇಟಾ ವೋಚರ್: ಅಗ್ಗದ ಬೆಲೆಗೆ ಹೆಚ್ಚುವರಿ ಡೇಟಾ ಕೊಡುಗೆ!
ಅಗ್ಗದ ಡೇಟಾ ಪ್ರೀಪೇಯ್ಡ್ ಪ್ಲ್ಯಾನ್‌ಗಳಿಂದ ಸದ್ದು ಮಾಡಿದ್ದ ಜನಪ್ರಿಯ ಜಿಯೋ ಟೆಲಿಕಾಂ ಇತ್ತೀಚಿಗೆ ಪ್ರೀಪೇಯ್ಡ್ ಪ್ಲ್ಯಾನ್‌ಗಳ ದರ ಏರಿಕೆ ಮಾಡಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ಅಗ್ಗದ ಆರಂಭಿಕ ಬೆಲೆಯಲ್ಲಿ ಡೇಟಾ/ರೀಚಾರ್ಜ್ ವೋಚರ್‌ಗಳನ್ನು ಬಿಡುಗಡೆ ಮಾಡಿದೆ. ಆರಂಭಿಕ 11ರೂ. ಯಿಂದ ಜಿಯೋ 4G ಡೇಟಾ ವೋಚರ್‌ಗಳು ಲಭ್ಯವಿದ್ದು, ರೀಚಾರ್ಜ್ ಮೊತ್ತಕ್ಕೆ ಅನುಗುಣವಾಗಿ ಡೇಟಾ ಪ್ರಯೋಜನವನ್ನು ನೀಡುತ್ತದೆ.

ಡೇಟಾ ಪ್ಲ್ಯಾನ್‌ಗಳ ದರ ಏರಿಕೆ ನಂತರ ಜಿಯೋ ಟೆಲಿಕಾಂ ಈ ರೀಚಾರ್ಜ್ ವೋಚರ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಆದರೆ ಕೆಲವೊಮ್ಮೆ ವ್ಯಾಲಿಡಿಟಿ ಅವಧಿಗೆ ಮುನ್ನವೇ ಡೇಟಾ ಸೌಲಭ್ಯ ಮುಗಿದು ಹೋಗಿರುತ್ತದೆ. ಆಗ ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ನೆರವಾಗಲಿವೆ. ಹಾಗೂ ಈ ಪ್ಲ್ಯಾನ್‌ಗಳು ಗ್ರಾಹಕರ ಎಕ್ಸಿಸ್ಟಿಂಗ್ ಪ್ಲ್ಯಾನ್ ವ್ಯಾಲಿಡಿಟಿಯನ್ನೇ ಒದಗಿಸುತ್ತದೆ. ಹಾಗಾದರೇ ಜಿಯೋ ಡೇಟಾ ವೋಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಜಿಯೋ 4G ಡಾಟಾ ವೋಚರ್ಸ್ ಆಯ್ಕೆಗಳು
ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

ವ್ಯಾಲಿಡಿಟಿ ಧಮಾಕಾ
ಜಿಯೋ 4G ಡೇಟಾ ವೋಚರ್ ರೀಚಾರ್ಜ್‌ನ ಮೇಲೆ ಮೂಲ ಪ್ಲ್ಯಾನ್ ವ್ಯಾಲಿಡಿಟಿ ಸಿಗಲಿದೆ. ಉದಾಹರಣೆಗೆ 555ರೂ. ಆಲ್-ಇನ್-ಒನ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಿರಿ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಲಭ್ಯ ಹಾಗೂ 84 ದಿನಗಳ ವ್ಯಾಲಿಡಿಟಿ ಸಿಗಲಿದೆ. ಹಾಗೆಯೇ ಜಿಯೋ 4G ಡೇಟಾದ 101ರೂ. ರೀಚಾರ್ಜ್ ಮಾಡಿಸಿದರೇ ಹೆಚ್ಚುವರಿಯಾಗಿ 6GB ಡೇಟಾ ಸೇರಿಕೊಳ್ಳಲಿದೆ. ವ್ಯಾಲಿಡಿಟಿಯು 84 ದಿನಗಳ ಅವಧಿಗೆ ಇರಲಿದೆ. ಇದು ಇತರೆ 4G ಡೇಟಾ ಪ್ಲ್ಯಾನ್‌ಗಳಿಗೂ ಅನ್ವಯವಾಗುತ್ತದೆ.

IUC ಟಾಪ್-ಅಪ್ ಪ್ಲ್ಯಾನ್
ಇನ್ನು ಜಿಯೋ ಕೆಲವು ಆಕರ್ಷಕ IUC ಟಾಪ್-ಅಪ್ ಪ್ಲ್ಯಾನ್‌ಗಳು ಸದ್ಯ ಚಾಲ್ತಿ ಇವೆ. ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್-ಅಪ್ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್-ಅಪ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್-ಅಪ್ ರೀಚಾರ್ಜ್ ಆಯ್ಕೆಗಳಿವೆ.

IUC ಟಾಪ್-ಅಪ್ ಡಾಟಾ ಪ್ರಯೋಜನಗಳು
ಅಗ್ಗದ ಬೆಲೆಗೆ ಈ IUC ಟಾಪ್-ಅಪ್ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್-ಅಪ್ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.


Click it and Unblock the Notifications








