ಸಿಹಿಸುದ್ದಿ!..ಈ ದುಬಾರಿ ಬೆಲೆಯ ಫೋನ್ ಬಳಕೆ ಮಾಡುವವರು ಇಲ್ಲಿ ಗಮನಿಸಿ!
ಪ್ರಮುಖ ಮೊಬೈಲ್‌ಗಳ ಪೈಕಿ ಒಂದಾಗಿ ಗುರುತಿಸಿಕೊಂಡಿರುವ ಹಾನರ್ (HONOR) ಭಾರತದಲ್ಲಿನ ತನ್ನ ಹಾನರ್ ಮ್ಯಾಜಿಕ್ 6 ಪ್ರೊ (HONOR Magic 6 Pro) ಬಳಕೆದಾರರಿಗೆ ಈಗ ಭರ್ಜರಿ ಖುಷಿ ಸುದ್ದಿ ನೀಡಿದೆ. ಸಂಸ್ಥೆಯು ಇತ್ತೀಚಿನ ನವೆಂಬರ್ 2024 OTA ಅಪ್‌ಡೇಟ್ ಮೂಲಕ ಸಾಕಷ್ಟು ಅಪ್‌ಗ್ರೇಡ್ ಸೌಲಭ್ಯಗಳನ್ನು ಒದಗಿಸಲಿದೆ. ಈ ಅಪ್‌ಡೇಟ್ ಹಾನರ್ ಮ್ಯಾಜಿಕ್ 6 ಪ್ರೊ ಫೋನ್ ಜಿಯೋ 5G (Jio 5G) ಕನೆಕ್ಟಿವಿಟಿ ಪಡೆಯಲಿದೆ.
ಹೌದು, ಹಾನರ್ ಮೊಬೈಲ್ ಸಂಸ್ಥೆಯ ಕೆಲವು ಫೋನ್‌ಗಳ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅವುಗಳಲ್ಲಿ ಹಾನರ್ ಮ್ಯಾಜಿಕ್ 6 ಪ್ರೊ (HONOR Magic 6 Pro) ದೈತ್ಯ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದ್ದು, ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದೀಗ ಈ ಫೋನ್ ನೂತನ ನವೆಂಬರ್ 2024 OTA ಅಪ್‌ಡೇಟ್‌ನಲ್ಲಿ ತಡೆರಹಿತ ಸಂಪರ್ಕಕ್ಕಾಗಿ Jio 5G ಸಫೋರ್ಟ್ ಪಡೆಯಲಿದೆ.

ನೂತನ ಅಪ್‌ಡೇಟ್
ಹಾನರ್ ಮ್ಯಾಜಿಕ್ 6 ಪ್ರೊ (HONOR Magic 6 Pro) ಫೋನಿಗಾಗಿ 8.0.0.210 (C185E3R2P2) ಆವೃತ್ತಿ ಸಂಖ್ಯೆಯೊಂದಿಗೆ ನವೆಂಬರ್ 2024 OTA (ಓವರ್ ದಿ ಏರ್) ಅಪ್‌ಡೇಟ್ ಅನ್ನು ಹೊರತಂದಿದೆ. ಈ ಫ್ಲ್ಯಾಗ್‌ಶಿಪ್ ಮೊಬೈಲ್ ಈಗ ವೇಗವಾದ ಡೌನ್‌ಲೋಡ್‌ಗಳು, ಸುಗಮ ಸ್ಟ್ರೀಮಿಂಗ್ ಹಾಗೂ ಒಟ್ಟಾರೆ ಅತ್ಯುತ್ತಮ ಕಾರ್ಯಕ್ಷಮತೆಗಾಗಿ Jio True 5G ಸಪೋರ್ಟ್ ಅನ್ನು ಬೆಂಬಲಿಸುತ್ತದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ ಈಗ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು AI ಎರೇಸರ್ ಅನ್ನು ಆಯ್ಕೆ ಅನ್ನು ಸಪೋರ್ಟ್ ಮಾಡುತ್ತದೆ. ವಿವಿಧ ಭಾಷೆಗಳಲ್ಲಿ ಉತ್ತಮ ಸಂವಹನವನ್ನು ಸುಲಭಗೊಳಿಸಲು ಫೇಸ್ ಟು ಫೇಸ್ ಅನುವಾದವನ್ನು ಸಪೋರ್ಟ್ ಮಾಡುತ್ತದೆ. ಸ್ಕ್ರೀನ್ ರೆಕಾರ್ಡ್ ಮಾಡುವಾಗ ಬಳಕೆದಾರರು ಮೂರು ವಿಭಿನ್ನ ಗುಣಮಟ್ಟದ ಮಟ್ಟಗಳ ನಡುವೆ ಆಯ್ಕೆ ಕಾಣಬಹುದು.
ಹಾನರ್ ಮ್ಯಾಜಿಕ್ 6 ಪ್ರೊ ಫೀಚರ್ಸ್
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ 6.8 ಇಂಚಿನ LTPO OLED ಡಿಸ್‌ಪ್ಲೇ ಪಡೆದಿದ್ದು, 120Hz ರಿಫ್ರೆಶ್ ರೇಟ್ ಹಾಗೂ ಡಾಲ್ಬಿ ವಿಷನ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 2800 x 1280 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 5000 nits ಬ್ರೈಟ್ನೆಸ್ ಸೌಲಭ್ಯ ಇದ್ದು, 4320Hz PWM ಡಿಮ್ಮಿಂಗ್ ಆಯ್ಕೆ ಪಡೆದಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಇದು 12GB + 512GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಫೋನ್ ಹಾನರ್ ಫಾಲ್ಕನ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 180MP OIS ಪೆರಿಸ್ಕೋಪ್ ಟೆಲಿಫೋಟೋ ಆಗಿದೆ. ಹಾಗೆಯೇ 50MP OIS ಮುಖ್ಯ ಹಾಗೂ 50MP ಅಲ್ಟ್ರಾ-ವೈಡ್ ಕ್ಯಾಮೆರಾ ಆಯ್ಕೆಗಳು ಇವೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್ ಸೌಲಭ್ಯದಲ್ಲಿ ಇದೆ. 2.5x ಆಪ್ಟಿಕಲ್ ಜೂಮ್, AI ಮೋಷನ್ ಸೆನ್ಸಿಂಗ್ ಕ್ಯಾಪ್ಚರ್ ಸೌಲಭ್ಯಗಳು ಸಹ ಇವೆ.
ಹಾನರ್ ಮ್ಯಾಜಿಕ್ 6 ಪ್ರೊ ಫೋನ್ 5600mAh ಸಾಮರ್ಥ್ಯದ ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 66W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಕೂಡಾ ಪಡೆದುಕೊಂಡಿದೆ. ಅಲ್ಲದೇ 3D ಫೇಸ್ ರೇಕ್‌ಗ್ನೈಸ್, AI ಗೌಪ್ಯತೆ ಕರೆ ಹಾಗೂ ಫಿಂಗರ್ಪ್ರಿಂಟ್ ಸೆನ್ಸರ್ ಸಪೋರ್ಟ್ ಸಹ ಪಡೆದಿದೆ.


Click it and Unblock the Notifications








