Home
ಸುದ್ದಿಜಾಲ

ನಿಮಗೆ ಇನ್ನೂ ಜಿಯೋ ವೆಲ್‌ಕಮ್‌ ಆಫರ್‌ ಸಿಕ್ಕಿಲ್ಲವೇ?..ಕೂಡಲೇ ಹೀಗೆ ಮಾಡಿ!

ಜಿಯೋ ಟೆಲಿಕಾಂನ ಟ್ರೂ 5G ಸೇವೆಯು ಈಗಾಗಲೇ ಬೆಂಗಳೂರು, ದೆಹಲಿ, ಪುಣೆ, ಗುರುಗ್ರಾಮ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮತ್ತು ಗುಜರಾತ್‌ನ ಎಲ್ಲಾ 33 ಜಿಲ್ಲಾ ಕೇಂದ್ರ ಗಳಲ್ಲಿ ಲಭ್ಯವಿದೆ. ಜಿಯೋ ಟ್ರೂ 5G ಸೇವೆ ಲಭ್ಯವಿರುವ ಈ ಎಲ್ಲಾ ನಗರಗಳಲ್ಲಿ, ಬಳಕೆದಾರರು ಆಹ್ವಾನಿತ ಆಧಾರದ ಮೇಲೆ 5G ಸೇವೆ ಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಜಿಯೋ ಹೇಳಿದೆ. ಆದರೆ ನಿಮಗಿನ್ನೂ ಜಿಯೋ 5G ವೆಲ್‌ಕಮ್‌ ಆಫರ್‌ ಆಹ್ವಾನ ಇನ್ನು ಲಭ್ಯವಾಗಿಲ್ಲವೇ?

ವೆಲ್‌ಕಮ್

ಹೊಸ ಐದನೇ ತಲೆಮಾರಿನ ನೆಟ್‌ವರ್ಕ್ ಸಂಪರ್ಕದೊಂದಿಗೆ ಬಳಕೆದಾರರನ್ನು ಸಂಪರ್ಕಿಸಲು ಟೆಲಿಕಾಂ ಆಪರೇಟರ್ ವೆಲ್‌ಕಮ್ ಆಫರ್‌ ನೊಂದಿಗೆ ಜಿಯೋ 5G ಆಹ್ವಾನವನ್ನು ಕಳುಹಿಸುತ್ತದೆ. ಜಿಯೋ 5G ವೆಲ್‌ಕಮ್‌ ಕೊಡುಗೆಯನ್ನು ಸ್ವೀಕರಿಸುವ ಬಳಕೆದಾರರು ಕನಿಷ್ಟ 500 Mbps ಸರಾಸರಿ ಡೌನ್‌ಲೋಡ್ ವೇಗದೊಂದಿಗೆ ವೇಗದ ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ಜಿಯೋ 5G ವೆಲ್‌ಕಮ್‌ ಆಫರ್‌

ಜಿಯೋ 5G ವೆಲ್‌ಕಮ್‌ ಆಫರ್‌

ಅಕ್ಟೋಬರ್‌ನಲ್ಲಿ 5G ಬಿಡುಗಡೆಯ ವೇಳೆ, ಜಿಯೋ 5G ಆರಂಭದಲ್ಲಿ ಬೀಟಾ ಮೋಡ್‌ನಲ್ಲಿ ಲಭ್ಯವಿರುತ್ತದೆ. ಜಿಯೋ 5G ವೆಲ್‌ಕಮ್ ಆಫರ್ ಹೊಂದಿರುವ ಬಳಕೆದಾರರು ಮಾತ್ರ ವೇಗದ ನೆಟ್‌ವರ್ಕ್‌ನೊಂದಿಗೆ ಕನೆಕ್ಟ್‌ ಮಾಡಲು ಸಾಧ್ಯವಾಗುತ್ತದೆ ಎಂದು ಘೋಷಿಸಿದರು. ಜಿಯೋ 5G ಗಾಗಿ ಇತ್ತೀಚಿನ ಸಿಸ್ಟಮ್ ಬೆಂಬಲದೊಂದಿಗೆ 5G ಸ್ಮಾರ್ಟ್‌ಫೋನ್ ಹೊಂದಿರುವ ಬಳಕೆದಾರರು ಜಿಯೋ ವೆಲ್‌ಕಮ್ ಆಫರ್ ಅನ್ನು ಸ್ವೀಕರಿಸುತ್ತಾರೆ.

ನೆಟ್‌ವರ್ಕ್

ಜಿಯೋ 5G ನೆಟ್‌ವರ್ಕ್ ಪ್ರದೇಶದಲ್ಲಿ 1 Gbps ವೇಗದಲ್ಲಿ ಅನಿಯಮಿತ 5G ಡೇಟಾವನ್ನು ಒಳಗೊಂಡಿರುತ್ತದೆ. ಅಂದಹಾಗೆ ಬಳಕೆದಾರರು 5G ಗಾಗಿ ಯಾವುದೇ ಹೊಸ ಸಿಮ್ ಅನ್ನು ಖರೀದಿಸಬೇಕಾಗಿಲ್ಲ ಎಂದು ಜಿಯೋ ಈಗಾಗಲೇ ತಿಳಿಸಿದೆ. ಬದಲಾಗಿ ಅವರ ಅಸ್ತಿತ್ವದಲ್ಲಿರುವ 4G ಸಿಮ್ ಐದನೇ-ಜನ್ ನೆಟ್‌ವರ್ಕ್ ಅನ್ನು ಬೆಂಬಲಿಸುತ್ತದೆ. ಆದಾಗ್ಯೂ, 5G ಬಳಸಲು, ಬಳಕೆದಾರರು 239 ರೂ ಅಥವಾ ಅದಕ್ಕಿಂತ ಹೆಚ್ಚಿನ ಸಕ್ರಿಯ ಯೋಜನೆಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ನಿಮ್ಮ ಫೋನಿನಲ್ಲಿ ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

ನಿಮ್ಮ ಫೋನಿನಲ್ಲಿ ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 'ಸೆಟ್ಟಿಂಗ್ಸ್' ಆಪ್ ತೆರೆಯಿರಿ.
- 'ಮೊಬೈಲ್ ನೆಟ್‌ವರ್ಕ್‌' ಗೆ ಆಯ್ಕೆಗೆ ಹೋಗಿ.
- ಈಗ ಜಿಯೋ ಸಿಮ್ ಆಯ್ಕೆ ಮಾಡಿ.
- ಈಗ 'ಆದ್ಯತೆಯ ನೆಟ್‌ವರ್ಕ್ ಪ್ರಕಾರ' ಆಯ್ಕೆಯನ್ನು ಟ್ಯಾಪ್ ಮಾಡಿ.
- ಬಳಿಕ, 5G ನೆಟ್‌ವರ್ಕ್‌ ಪ್ರಕಾರವನ್ನು ಆಯ್ಕೆ ಮಾಡಿ.

ಜಿಯೋ ಟ್ರೂ 5G ಸೇವೆ ಪಡೆದ ಭಾರತದ ನಗರಗಳ ಲಿಸ್ಟ್‌ ಇಲ್ಲಿದೆ

ಜಿಯೋ ಟ್ರೂ 5G ಸೇವೆ ಪಡೆದ ಭಾರತದ ನಗರಗಳ ಲಿಸ್ಟ್‌ ಇಲ್ಲಿದೆ

* ದೆಹಲಿ
* ಬೆಂಗಳೂರು
* ಮುಂಬೈ
* ವಾರಣಾಸಿ
* ಕೋಲ್ಕತ್ತಾ
* ಹೈದರಾಬಾದ್
* ಚೆನ್ನೈ

ಘಾಜಿಯಾಬಾದ್

* ನಾಥದ್ವಾರ
* ಪುಣೆ
* ಗುರುಗ್ರಾಮ
* ನೋಯ್ಡಾ
* ಘಾಜಿಯಾಬಾದ್
* ಫರಿದಾಬಾದ್
* ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ.

ಪ್ಯಾನ್‌ ಇಂಡಿಯಾ ಕವರೇಜ್‌

ಪ್ಯಾನ್‌ ಇಂಡಿಯಾ ಕವರೇಜ್‌

ಇತ್ತೀಚಿಗೆ ನಡೆದ ರಿಲಯನ್ಸ್ ಜಿಯೋ ಟೆಲಿಕಾಂನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಜಿಯೋ, 2022 ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಅನ್ನು ನಿಯೋಜಿಸುವುದಾಗಿ ಘೋಷಿಸಿತು. ಇದಲ್ಲದೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಟ್ರೂ 5G (Jio True 5G) ಸೇವೆಯನ್ನು ಪ್ಯಾನ್‌ ಇಂಡಿಯಾ ಕವರೇಜ್ ಮಾಡುವ ಗುರಿಯನ್ನು ಒಳಗೊಂಡಿದೆ.

Best Mobiles in India

English summary
Jio users who are living in these cities can use 5G with up to 1Gbps download speed on select smartphones after getting the Jio Welcome Offer portal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+