Home
ಸುದ್ದಿಜಾಲ

Airtel vs Jio: ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ನಷ್ಟ! ಜಿಯೋಗೆ ಖುಷಿಯೋ ಖುಷಿ.. ಯಾಕೆ ಗೊತ್ತಾ?

ಟೆಲಿಕಾಂ (Telecom) ವಲಯದಲ್ಲಿ ಅಗ್ರಸ್ಥಾನದಲ್ಲಿ ಇರುವ ಜಿಯೋ ಹಾಗೂ ಏರ್‌ಟೆಲ್‌ (Jio and Airtel) ಆಗಾಗ್ಗೆ ಭಿನ್ನ ಪ್ಲ್ಯಾನ್‌ಗಳ ಮೂಲಕ ಸದ್ದು ಮಾಡುತ್ತಿದ್ದವು. ಈ ಮೂಲಕ ತಮ್ಮದೇ ಆದ ಹೊಸ ಹೊಸ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದವು. ಆದರೆ ಈಗ ಹೊಸ ವರದಿಯೊಂದು ಬಂದಿದ್ದು, ಏರ್‌ಟೆಲ್‌ ಭಾರೀ ಪ್ರಮಾಣದ ಗ್ರಾಹಕರನ್ನು ಕಳೆದುಕೊಂಡಿದೆ.

ಹೌದು, ಟ್ರಾಯ್ (TRAI) ಪ್ರಕಾರ ಅಕ್ಟೋಬರ್‌ ನಲ್ಲಿ ಏರ್‌ಟೆಲ್‌ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ. ಅಂದರೆ, ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಮಾರುಕಟ್ಟೆ ಪಾಲು ಶೇಕಡಾ 32.85 ರಷ್ಟಿದ್ದರೆ ಜಿಯೋ ಷೇರುಗಳು ಶೇಕಡಾ 39.30 ಕ್ಕೆ ಏರಿಕೆ ಆಗಿವೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ತನ್ನ ಗ್ರಾಹಕರನ್ನು ಏರ್‌ಟೆಲ್‌ ಕಳೆದುಕೊಂಡಿದೆ. ಹಾಗಿದ್ರೆ, ಏರ್‌ಟೆಲ್‌ ಕಳೆದುಕೊಂಡ ಗ್ರಾಹಕರು ಎಷ್ಟು?, ಜಿಯೋ ಪಡೆದ ಗ್ರಾಹಕರು? ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ನಷ್ಟ! ಜಿಯೋಗೆ ಖುಷಿಯೋ ಖುಷಿ.. ಯಾಕೆ ಗೊತ್ತಾ?

ಭಾರೀ ಪ್ರಮಾಣದ ಸದಸ್ಯರನ್ನು ಕಳೆದುಕೊಂಡ ಏರ್‌ಟೆಲ್‌: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (Telecom Regulatory Authority of India) ಈ ಬಗ್ಗೆ ಮಾಹಿತಿ ನೀಡಿದ್ದು, ಏರ್‌ಟೆಲ್ ಅಕ್ಟೋಬರ್ 2023 ರಲ್ಲಿ ಅದರ ದುಬಾರಿ ಮೊಬೈಲ್ ಸೇವೆಗಳಿಂದ ಸುಮಾರು 1.2 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ಉಲ್ಲೇಖ ಮಾಡಿದೆ.

ಅಕ್ಟೋಬರ್‌ನಲ್ಲಿ ಜಿಯೋ ತನ್ನ ನೆಟ್‌ವರ್ಕ್‌ಗೆ 31.59 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿದೆ ಎಂದು ಟ್ರಾಯ್‌ ಇದೇ ವೇಳೆ ಮಾಹಿತಿ ನೀಡಿದ್ದು, ಇದರೊಂದಿಗೆ ಜಿಯೋ ಚಂದಾದಾರರ ಸಂಖ್ಯೆ ಅಕ್ಟೋಬರ್ ವೇಳೆಗೆ 45.23 ಕೋಟಿ ತಲುಪಿದೆ ಎಂದು ಉಲ್ಲೇಖಿಸಿದೆ. ಜೊತೆಗೆ ಸೆಪ್ಟೆಂಬರ್‌ನಲ್ಲಿ 44.92 ಕೋಟಿ ಆಗಿತ್ತು ಎನ್ನುವ ಮಾಹಿತಿಯನ್ನೂ ಈ ವೇಳೆ ಉಲ್ಲೇಖ ಮಾಡಲಾಗಿದೆ.

ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ನಷ್ಟ! ಜಿಯೋಗೆ ಖುಷಿಯೋ ಖುಷಿ.. ಯಾಕೆ ಗೊತ್ತಾ?

ಈ ನಡುವೆ ಏರ್‌ಟೆಲ್ ತನ್ನ ಒಟ್ಟು ಚಂದಾದಾರರ ಮೂಲವನ್ನು ಅಕ್ಟೋಬರ್‌ನಲ್ಲಿ 3.52 ಲಕ್ಷ ಹೊಸ ಚಂದಾದಾರರೊಂದಿಗೆ 37.81 ಕೋಟಿಗೆ ಹೆಚ್ಚಿಸಿಕೊಂಡಿದೆ. ಆದರೆ 20.44 ಲಕ್ಷ ಬಳಕೆದಾರರು ವೊಡಾಫೋನ್ ಐಡಿಯಾದಿಂದ (Vodafone Idea) ಇತರ ನೆಟ್‌ವರ್ಕ್‌ಗಳಿಗೆ ತೆರಳಿದ್ದಾರೆ ಎಂದು ಇದೇ ವೇಳೆ ಟ್ರಾಯ್‌ ಮಾಹಿತಿ ನೀಡಿದೆ. ಇದರೊಂದಿಗೆ ವಿ ಚಂದಾದಾರರ ಸಂಖ್ಯೆ 22.54 ಕೋಟಿಗೆ ಇಳಿಕೆ ಆಗಿದೆ.

ಈ ಮೂಲಕ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಜಿಯೋ ಎಂದಿನಂತೆ ಮೊದಲ ಸ್ಥಾನದಲ್ಲಿ ಇದ್ದರೆ, ಏರ್‌ಟೆಲ್ ಎರಡನೇ ಮತ್ತು ವಿ ಮೂರನೇ ಸ್ಥಾನ ಪಡೆದಿದೆ. ಒಂದು ವರ್ಷದ ಹಿಂದೆ ಮೂಲ ಪ್ರಿಪೇಯ್ಡ್ ದರಗಳಲ್ಲಿ ತೀವ್ರ ಹೆಚ್ಚಳ ಆದ ಹಿನ್ನೆಲೆ ಈ ಕೆಟ್ಟ ಬೆಳವಣಿಗೆ ಏರ್‌ಟೆಲ್‌ಗೆ ಎದುರಾಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಒಟ್ಟು ಗ್ರಾಹಕರ ಸೇರ್ಪಡೆಗಳ ಸ್ಕೋರ್‌ನಲ್ಲಿ ಜಿಯೋದ ಲಾಭಗಳು ಅಕ್ಟೋಬರ್ 2023 ರಲ್ಲಿ ಏರ್‌ಟೆಲ್‌ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಇನ್ನು ಕಳೆದ ಅಕ್ಟೋಬರ್‌ನಲ್ಲಿ ಲ್ಯಾಂಡ್‌ಲೈನ್ (Landline) ವಿಭಾಗದಲ್ಲಿ ಜಿಯೋ ತನ್ನ ಮಾರುಕಟ್ಟೆ ನಾಯಕತ್ವವನ್ನು ಕ್ರೋಢೀಕರಿಸಿದೆ. ಇದು 210,000 ವೈರ್‌ಲೈನ್ ಬಳಕೆದಾರರನ್ನು ಪಡೆಯುವ ಮೂಲಕ ಒಟ್ಟು ಲ್ಯಾಂಡ್‌ಲೈನ್ ಬಳಕೆದಾರರ ಸಂಖ್ಯೆಯನ್ನು 10.67 ಮಿಲಿಯನ್‌ಗೆ ಏರಿಕೆ ಮಾಡಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಏರ್‌ಟೆಲ್ 140,000 ಬಳಕೆದಾರರನ್ನು ಪಡೆದಿದೆ. ಈ ಮೂಲಕ ಇದು ಒಟ್ಟು ವೈರ್‌ಲೈನ್ ಬಳಕೆದಾರರ ಸಂಖ್ಯೆಯನ್ನು ಸರಿಸುಮಾರು 8.07 ಮಿಲಿಯನ್‌ಗೆ ಏರಿಕೆ ಮಾಡಿಕೊಂಡಿದೆ.

ಏರ್‌ಟೆಲ್‌, ವಿ ಟೆಲಿಕಾಂಗೆ ಭಾರೀ ನಷ್ಟ! ಜಿಯೋಗೆ ಖುಷಿಯೋ ಖುಷಿ.. ಯಾಕೆ ಗೊತ್ತಾ?

ಇದರೊಂದಿಗೆ ಈ ವಿಭಾಗದಲ್ಲಿ ಮೂರನೇ ಶ್ರೇಯಾಂಕದ ಸರ್ಕಾರಿ ಸ್ವಾಮ್ಯದ ಬಿಸ್‌ಎನ್‌ಎಲ್ 40,926 ವೈರ್‌ಲೈನ್ ಬಳಕೆದಾರರನ್ನು ಕಳೆದುಕೊಂಡಿದೆ. ಪರಿಣಾಮ ಲ್ಯಾಂಡ್‌ಲೈನ್ ಬಳಕೆದಾರರ ಸಂಖ್ಯೆ 6.2 ಮಿಲಿಯನ್‌ಗೆ ಇಳಿಕೆಯಾಗಿದೆ ಎಂದು ಟ್ರಾಯ್ ತನ್ನ ಡೇಟಾದಲ್ಲಿ ಉಲ್ಲೇಖ ಮಾಡಿದೆ. ಒಟ್ಟಾರೆಯಾಗಿದೆ ಟೆಲಿಕಾಂ ಸಂಸ್ಥೆಗಳಲ್ಲಿ ಜಿಯೋ ಅಗ್ರಸ್ಥಾನವನ್ನು ಎಂದಿನಂತೆ ಕಾಪಾಡಿಕೊಂಡು ಮುಂದೆ ಸಾಗುತ್ತಿದೆ.

Best Mobiles in India

English summary
According to TRAI, Airtel suffered huge losses in October. That is, Airtel's market share in October was 32.85 percent while Jio's share rose to 39.30 percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+