Home
ಸುದ್ದಿಜಾಲ

ಜಿಯೋ ಏರ್ ಫೈಬರ್‌ನ ಸೂಪರ್‌ ಸ್ಪೀಡ್‌ ರಹಸ್ಯ ಅದರ 5G ತಂತ್ರಜ್ಞಾನ: ಓಪನ್ ಸಿಗ್ನಲ್

ಪ್ರಮುಖ ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಸಂಸ್ಥೆ ಓಪನ್‌ಸಿಗ್ನಲ್ ವರದಿಯೊಂದನ್ನು ನೀಡಿದ್ದು, ಜಿಯೋದ ಸ್ವತಂತ್ರ 5G ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಜಿಯೋದ ಸ್ಥಿರ ವೈರ್‌ಲೆಸ್ ಸೇವೆಯ ಗ್ರಾಹಕರು, ಅಂದರೆ ಜಿಯೋ ಏರ್ ಫೈಬರ್ ಗ್ರಾಹಕರು ತಿಂಗಳಿಗೆ ಸರಾಸರಿ 400 GB ಡೇಟಾವನ್ನು ಬಳಸುತ್ತಾರೆ ಎಂದು ಓಪನ್ ಸಿಗ್ನಲ್ ವರದಿಯಲ್ಲಿ ತಿಳಿಸಿದೆ. ಈ ಡೇಟಾ ಬಳಕೆ ಪ್ರಮಾಣ ಮೊಬೈಲ್ ಗ್ರಾಹಕರಿಗಿಂತ ಅಧಿಕ.

ಹಾಗೆಯೇ ಇದರ ಹೊರತಾಗಿಯೂ ಜಿಯೋ ಏರ್ ಫೈಬರ್‌ನ ಸ್ಪೀಡ್‌ ಮತ್ತು ಗುಣಮಟ್ಟದ ಸ್ಕೋರ್ 5G ಮೊಬೈಲ್ ನೆಟ್‌ವರ್ಕ್‌ನಂತೆಯೇ ಉಳಿದಿದೆ. ಜಿಯೋದ 5G ನೆಟ್‌ವರ್ಕ್‌ನ ವೇಗವು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ತಿಳಿಸಲಾಗಿದೆ. ಭಾರತದ 'ಸ್ಥಿರ ವೈರ್‌ಲೆಸ್ ಸೇವೆಗಳಲ್ಲಿ' ರಿಲಯನ್ಸ್ ಜಿಯೋ ಮಾತ್ರ ಸದ್ಯಕ್ಕೆ ಸ್ವತಂತ್ರ 5G ನೆಟ್‌ವರ್ಕ್ ಅನ್ನು ಬಳಸುತ್ತಿದೆ.

ಜಿಯೋ ಏರ್ ಫೈಬರ್‌ನ ಸೂಪರ್‌ ಸ್ಪೀಡ್‌ ರಹಸ್ಯ ಅದರ 5G ತಂತ್ರಜ್ಞಾನ: ಓಪನ್ ಸಿಗ್ನಲ್

ಓಪನ್ ಸಿಗ್ನಲ್ ಪ್ರಕಾರ, ಸ್ವತಂತ್ರ 5G ಜೊತೆಗೆ ನೆಟ್‌ವರ್ಕ್ ಸ್ಲೈಸಿಂಗ್ ತಂತ್ರಜ್ಞಾನವು ಜಿಯೋ ಏರ್ ಫೈಬರ್ ಡೇಟಾ ಬಳಕೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನದ ಪ್ರಯೋಜನಗಳನ್ನು ಪರಿಗಣಿಸಿ, ಏರ್‌ಟೆಲ್ 5G ನೆಟ್‌ವರ್ಕ್‌ನಲ್ಲಿ ಸ್ಥಿರ ವೈರ್‌ಲೆಸ್ ಸೇವೆಯನ್ನು ತರಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ರಾಡ್‌ಬ್ಯಾಂಡ್ ಕವರೇಜ್ ಕಡಿಮೆ ಇರುವ ಪ್ರದೇಶಗಳಲ್ಲಿ ನೆಟ್‌ವರ್ಕ್ ಕವರೇಜ್ ತರಲು ರಿಲಯನ್ಸ್ ಜಿಯೋ ಕಳೆದ ವರ್ಷವೇ ಜಿಯೋ ಏರ್ ಫೈಬರ್ ಸೇವೆ ಅನ್ನು ಪ್ರಾರಂಭಿಸಿತ್ತು. ಜಿಯೋ ಏರ್ ಫೈಬರ್‌ಗೆ ಹೆಚ್ಚಿನ ಬೇಡಿಕೆಯು ಟಯರ್ -2 ನಗರಗಳಿಂದ ಬರುತ್ತಿದೆ. ಗ್ರಾಹಕರನ್ನು ಸೆಳೆಯುವುದಕ್ಕಾಗಿ ಜಿಯೋ 599ರೂ. ರಿಂದ ಪ್ರಾರಂಭವಾಗುವ ಕೈಗೆಟುಕುವ ಅನೇಕ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಸೇವೆಯೊಂದಿಗೆ 10 ಕೋಟಿ ಸ್ಥಳಗಳನ್ನು ಸಂಪರ್ಕಿಸುವುದು ಜಿಯೋ ಸಂಸ್ಥೆಯ ಗುರಿಯಾಗಿದೆ. ಕಂಪನಿಯು ಸ್ಟ್ರೀಮಿಂಗ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಇದರಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್ ಪ್ಯಾಕೇಜ್‌ಗಳೊಂದಿಗೆ 15 ಸ್ಟ್ರೀಮಿಂಗ್ ಅಪ್ಲಿಕೇಷನ್‌ಗಳು ಕೂಡಾ ಸೇರಿವೆ. ಇನ್ನುಳಿದಂತೆ ಜಿಯೋದ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋದ 1099ರೂ. ರೀಚಾರ್ಜ್‌ ಯೋಜನೆ
ಜಿಯೋ ಟೆಲಿಕಾಂನ 1099 ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದ್ದು, ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌ ಓಟಿಟಿ ಚಂದಾದಾರಿಕೆ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರ ಜೊತೆಗೆ ಜಿಯೋ ಆಪ್ಸ್‌ ಸಹ ಲಭ್ಯ.

ಜಿಯೋದ 1198ರೂ. ರೀಚಾರ್ಜ್‌ ಯೋಜನೆ
ಜಿಯೋ ಟೆಲಿಕಾಂನ 1198ರೂ. ರೀಚಾರ್ಜ್‌ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಅನ್ನು ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಸೌಲಭ್ಯ ಸಿಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಇದರೊಂದಿಗೆ ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ 14 ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಸಹ ಲಭ್ಯವಾಗಲಿದೆ. ಹಾಗೆಯೇ ಹೆಚ್ಚುವರಿಯಾಗಿ 18GB ಡೇಟಾ ಪ್ರಯೋಜನ ಕೂಡಾ ಗ್ರಾಹಕರಿಗೆ ದೊರೆಯುತ್ತದೆ. ಅಮೆಜಾನ್‌ ವಿಡಿಯೋ ಪ್ರೈಮ್‌, ಡಿಸ್ನಿ+ ಹಾಟ್‌ಸ್ಟಾರ್‌, ಸೋನಿ ಲೈವ್‌, ಜೀ5, ಸನ್‌ ಸೆನ್ಸ್ಟ್‌, ಫ್ಯಾನ್‌ ಕೋಡ್‌, ಎಪಿಕ್‌ ಆನ್‌ ಸೇರಿದಂತೆ ಇನ್ನು ಕೆಲವು ಜನಪ್ರಿಯ ಓಟಿಟಿ ಆಪ್‌ ಲಭ್ಯ.

Best Mobiles in India

English summary
Jio Air Fiber's Super speed is its standalone 5G technology: Open Signal. Check Plans benefits and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+