Home
ಸುದ್ದಿಜಾಲ

Jio Airfiber: ಜಿಯೋ ಬಳಕೆದಾರರಿಗೆ ಖುಷಿಯೋ ಖುಷಿ... ಇವೆಲ್ಲವೂ ಉಚಿತ.. ಉಚಿತ

ಜಿಯೋ (Jio) ಈಗಾಗಲೇ ಸಾಕಷ್ಟು ವಿಭಾಗಗಳಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. ಈ ನಡುವೆ ಹೊಸ ಹೊಸ ಸೇವೆಗಳನ್ನೂ ಸಹ ಪರಿಚಯಿಸುವಲ್ಲಿ ಇತರೆ ಟೆಲಿಕಾಂಗಳಿಗಿಂತ ಮುಂದೆ ಇದ್ದು, ಈ ಸಾಲಿನಲ್ಲಿ ಈಗ ಜಿಯೋ ಏರ್‌ ಫೈಬರ್‌ (Jio Airfiber) ಬಹಳ ಸದ್ದು ಮಾಡುತ್ತಿದೆ. ಇದರ ನಡುವೆ ಈಗ ತನ್ನೆಲ್ಲಾ ಬಳಕೆದಾರರಿಗೆ ವಿಶೇಷ ಪ್ಲ್ಯಾನ್‌ಗಳ ಜೊತೆಗೆ ಉಚಿತ ಪ್ರಯೋಜನಗಳನ್ನು ಘೋಷಣೆ ಮಾಡಿದೆ.

ಹೌದು, ರಿಲಯನ್ಸ್ ಜಿಯೋ ಏರ್‌ಫೈಬರ್ ಪ್ಲ್ಯಾನ್‌ಗಳನ್ನು (Jio AirFiber Plan) ಕಾಂಪ್ಲಿಮೆಂಟರಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳೊಂದಿಗೆ ಪರಿಚಯಿಸಿದೆ. ಪ್ರತ್ಯೇಕ ಚಂದಾದಾರಿಕೆಗಳ ಅಗತ್ಯವಿಲ್ಲದೇ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಓಟಿಟಿ ಪ್ರಯೋಜನಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಪ್ಲ್ಯಾನ್‌ಗಳಲ್ಲಿ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ ಬನ್ನಿ.

Jio Airfiber: ಜಿಯೋ ಬಳಕೆದಾರರಿಗೆ ಖುಷಿಯೋ ಖುಷಿ... ಇವೆಲ್ಲವೂ ಉಚಿತ.. ಉಚಿತ

ಜಿಯೋ ಏರ್‌ಫೈಬರ್: ಸಾಮಾನ್ಯವಾಗಿ ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಇತರ ಹಲವು ಸ್ಟ್ರೀಮಿಂಗ್ ಸೇವೆಗಳೊಂದಿಗೆ ಪ್ಲ್ಯಾನ್‌ ಪರಿಚಯಿಸುವುದು ಕಂಪೆನಿಗಳು ಕಷ್ಟದ ವಿಷಯ. ಇದೆಲ್ಲವನ್ನೂ ನೀಡಬೇಕು ಅಂದರೆ ಆ ಪ್ಲ್ಯಾನ್‌ ಬೆಲೆ ದುಬಾರಿ ಆಗಿರಲೇ ಬೇಕು. ಆದರೆ, ಜಿಯೋ ಬಳಕೆದಾರರು ಕಡಿಮೆ ಬೆಲೆಯಲ್ಲಿಯೇ ನೆಚ್ಚಿನ ಕಾರ್ಯಕ್ರಮಗಳನ್ನು ಮನಬಂದಂತೆ ಆನಂದಿಸಬಹುದಾಗಿದೆ.

ಯಾಕೆಂದರೆ ಜಿಯೋ ಹೊಸದಾಗಿ ಪ್ರಾರಂಭಿಸಲಾದ ಏರ್‌ಫೈಬರ್ ಸಂಪರ್ಕ ಪ್ಯಾಕೇಜ್‌ಗಳ ಭಾಗವಾಗಿ ಇತರ ಓಟಿಟಿ (OTT) ಯೋಜನೆಗಳೊಂದಿಗೆ ಕಾಂಪ್ಲಿಮೆಂಟರಿ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತಿದೆ. ಈ ಕ್ರಮವು ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ನೀಡುವುವ ಮೂಲಕ ಬಳಕೆದಾರರಿಗೆ ಹಣ ಉಳಿಸುವ ಕೆಲಸ ಮಾಡಲಿದೆ.

ಏನಿದು ಜಿಯೋ ಏರ್‌ಫೈಬರ್? : ರಿಲಯನ್ಸ್ ಜಿಯೋದ ವೈರ್‌ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ವೇಗದ ಇಂಟರ್ನೆಟ್ ಸಂಪರ್ಕವನ್ನು ನೀಡಲು 5G ತಂತ್ರಜ್ಞಾನದ ಶಕ್ತಿಯನ್ನು ಇದು ಬಳಸಿಕೊಳ್ಳುತ್ತದೆ. ಸಾಂಪ್ರದಾಯಿಕ ಫೈಬರ್-ಆಪ್ಟಿಕ್ ಸಂಪರ್ಕಗಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡಲಿದ್ದು, 1 Gbps ವರೆಗೆ ವೇಗ ಹೊಂದಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಪ್ಲ್ಯಾನ್‌ಗಳಲ್ಲಿ ಏನೆಲ್ಲಾ ಸೌಲಭ್ಯ ಇವೆ ನೋಡೋಣ.

Jio Airfiber: ಜಿಯೋ ಬಳಕೆದಾರರಿಗೆ ಖುಷಿಯೋ ಖುಷಿ... ಇವೆಲ್ಲವೂ ಉಚಿತ.. ಉಚಿತ

ಜಿಯೋ ಏರ್‌ ಫೈಬರ್‌ 1199 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ 100 Mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದಾಗಿದ್ದು, 550+ ಡಿಜಿಟಲ್ ಚಾನೆಲ್‌ಗಳಿಗೆ ಉಚಿತ ಪ್ರವೇಶ ಮತ್ತು ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಜಿಯೋ ಸಿನಿಮಾ ಪ್ರೀಮಿಯಂ (Netflix, Prime Video, Disney+ Hotstar, Jio Cinema Premium)ಸೇರಿದಂತೆ ಇನ್ನೂ ಹೆಚ್ಚಿನ ಓಟಿಟಿ ಆಪ್‌ಗಳಿಗೆ ಈ ಮೂಲಕ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್‌ 1499 ರೂ.ಗಳ ಪ್ಲ್ಯಾನ್‌: ಆಯ್ದ ಸ್ಥಳಗಳಲ್ಲಿ ಮಾತ್ರ ಈ ವಿಶೇಷ ಪ್ಲ್ಯಾನ್‌ ಲಭ್ಯ ಇವೆ ಲಭ್ಯವಿದೆ, ಈ ಮ್ಯಾಕ್ಸ್ ಯೋಜನೆಯು 30 ದಿನಗಳ ಮಾನ್ಯತೆಗೆ 300 Mbps ಇಂಟರ್ನೆಟ್ ವೇಗವನ್ನು ನೀಡುತ್ತದೆ. 550+ ಡಿಜಿಟಲ್ ಚಾನೆಲ್‌ಗಳು ಮತ್ತು ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲೈವ್, ಜೀ5 ಮತ್ತು ಇತರ ಓಟಿಟಿ ಆಪ್‌ಗಳಿಗೆ ಈ ಮೂಲಕ ಎಂಟ್ರಿ ಸಿಗಲಿದೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್ 2499 ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ 30 ದಿನಗಳ ಮಾನ್ಯತೆ ಹೊಂದಿರಲಿದ್ದು, 500 Mbps ಇಂಟರ್ನೆಟ್ ವೇಗವನ್ನು ಇದರಲ್ಲಿ ಪಡೆಯಬಹುದಾಗಿದೆ. ಇದರೊಂದಿಗೆ 550+ ಡಿಜಿಟಲ್ ಚಾನೆಲ್‌ಗಳು ಮತ್ತು ಓಟಿಟಿ ಆಪ್‌ಗಳಿಗೆ ಪ್ರವೇಶ ಸಿಗಲಿದ್ದು, ಅದರಲ್ಲಿ ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲೈವ್, ಜೀ5 ಪ್ರಮುಖವಾಗಿವೆ.

ಜಿಯೋ ಏರ್‌ ಫೈಬರ್‌ ಮ್ಯಾಕ್ಸ್ 3999 ರೂ.ಗಳ ಪ್ಲ್ಯಾನ್‌ : ಇದೂ ಸಹ 30 ದಿನಗಳವರೆಗೆ ಮಾನ್ಯತೆ ಹೊಂದಿದ್ದು, ಹೆಚ್ಚಿನ ವೇಗದ 1 Gbps ಇಂಟರ್ನೆಟ್ ಅನ್ನು ಒದಗಿಸುವ ಈ ಪ್ಲ್ಯಾನ್‌ 550+ ಡಿಜಿಟಲ್ ಚಾನಲ್‌ಗಳು ಮತ್ತು ನೆಟ್‌ಫ್ಲಿಕ್ಸ್‌, ಪ್ರೈಮ್‌ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಸೋನಿ ಲೈವ್, ಜೀ5 ಮತ್ತು ಓಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

Jio Airfiber: ಜಿಯೋ ಬಳಕೆದಾರರಿಗೆ ಖುಷಿಯೋ ಖುಷಿ... ಇವೆಲ್ಲವೂ ಉಚಿತ.. ಉಚಿತ

ಯಾವೆಲ್ಲಾ ನಗರದಲ್ಲಿ ಜಿಯೋ ಏರ್‌ಫೈಬರ್ ಲಭ್ಯ ಇದೆ ?: ಸೆಪ್ಟೆಂಬರ್ 19, 2023 ರಂದು 8 ನಗರಗಳಲ್ಲಿ ಪ್ರಾರಂಭವಾದ ಬಳಿಕ ಈ ಸೇವೆಯು ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ದೆಹಲಿ ಮತ್ತು ಆಂಧ್ರಪ್ರದೇಶದಾದ್ಯಂತ 115 ಕ್ಕೂ ಹೆಚ್ಚು ನಗರಗಲ್ಲಿ ಲಭ್ಯ ಇದೆ. ಇದರೊಂದಿಗೆ ವಿಜಯವಾಡ, ತಿರುಪತಿ ಮತ್ತು ವಿಶಾಖಪಟ್ಟಣಂ ಸೇರಿದಂತೆ ಆಂಧ್ರಪ್ರದೇಶದ ಪ್ರಮುಖ ನಗರಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಮುಂಬೈ, ಪುಣೆ, ನಾಗ್ಪುರ, ನಾಂದೇಡ್ ಮತ್ತು ನಾಸಿಕ್‌ನಲ್ಲಿ ಸೇವೆ ಲಭ್ಯವಿದೆ.

Best Mobiles in India

English summary
Reliance has introduced Jio AirFiber Plans with complimentary Netflix and Amazon Prime subscriptions. High speed internet and OTT benefits can be availed through this without the need for separate subscriptions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+