Home
ಸುದ್ದಿಜಾಲ

ಜಿಯೋಏರ್ ಫೈಬರ್ ಈಗ ಕರ್ನಾಟಕದ ಈ ಎಲ್ಲ ನಗರಗಳಲ್ಲಿ ಲಭ್ಯ!

ಜನಪ್ರಿಯ ರಿಲಯನ್ಸ್‌ ಜಿಯೋ ಏರ್ ಫೈಬರ್ ಈಗ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಇನ್ನೂರಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಮಟ್ಟಣಗಳಲ್ಲಿ ಲಭ್ಯ. ಅದಲ್ಲದೇ ಇನ್ನೂ ಖುಷಿಯ ವಿಚಾರ ಏನೆಂದರೆ, ಈ ನಗರಗಳು ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ನೂರಾರು ಹಳ್ಳಿಗಳಲ್ಲೂ ಜಿಯೋ ಏರ್ ಫೈಬರ್ ಅನುಕೂಲಗಳು ಲಭ್ಯ ಇವೆ.

ಜಿಯೋದ ಆಪ್ಟಿಕಲ್ ಫೈಬರ್ ಮೂಲಸೌಕರ್ಯವು ಭಾರತದಾದ್ಯಂತ 1.5 ಮಿಲಿಯನ್, ಅಂದರೆ ಹದಿನೈದು ಲಕ್ಷ ಕಿಲೋಮೀಟರ್‌ಗಳಷ್ಟು ವ್ಯಾಪಿಸಿದೆ. ಜಿಯೋದ ವ್ಯಾಪಕವಾದ ಆಪ್ಟಿಕಲ್-ಫೈಬರ್ ಅಳವಡಿಕೆಯಿಂದಾಗಿ ಜಿಯೋ ಈಗ 200 ಮಿಲಿಯನ್ (ಇಪ್ಪತ್ತು ಕೋಟಿ) ಸ್ಥಳಗಳಿಗೆ ಹತ್ತಿರದಲ್ಲಿ ಇದೆ. ಆದರೂ ಭೌತಿಕವಾಗಿ ಕೊನೆಯ ಸ್ಥಳದ ತನಕ ಸಂಪರ್ಕವನ್ನು ಒದಗಿಸುವುದಕ್ಕೆ ಸಾಮಾನ್ಯವಾಗಿ ನಮ್ಮ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ಜಿಯೋಏರ್ ಫೈಬರ್ ಈಗ ಕರ್ನಾಟಕದ ಈ ಎಲ್ಲ ನಗರಗಳಲ್ಲಿ ಲಭ್ಯ!

ಈ ಕಾರಣದಿಂದಾಗಿ ಹತ್ತಾರು ಲಕ್ಷ ಸಂಭಾವ್ಯ ಗ್ರಾಹಕರು ಹೋಮ್ ಬ್ರಾಡ್‌ಬ್ಯಾಂಡ್ ವಂಚಿತರಾಗುತ್ತಾರೆ. ಏಕೆಂದರೆ ಅವರಿರುವ ಸ್ಥಳಕ್ಕೆ ಆಪ್ಟಿಕಲ್ ಫೈಬರ್ ಅನ್ನು ವಿಸ್ತರಿಸುವುದಕ್ಕೆ ಅದರದೇ ಆದ ರೀತಿಯಲ್ಲಿ ಸಂಕೀರ್ಣತೆ ಮತ್ತು ವಿಳಂಬ ಎದುರಾಗುತ್ತಿದೆ.

ಜಿಯೋ ಏರ್ ಫೈಬರ್ ಅತ್ಯುತ್ತಮ ದರ್ಜೆಯ ಮೌಲ್ಯವನ್ನು ಗ್ರಾಹಕರಿಗೆ ಒದಗಿಸುತ್ತದೆ ಮತ್ತು ಪ್ರತಿಪಾದನೆ ಮತ್ತು ಜಿಯೋಫೈಬರ್ ನಂತೆಯೇ ಪ್ಲಾನ್ ಗಳನ್ನು ಒದಗಿಸುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ.

1. ಡಿಜಿಟಲ್ ಎಂಟರ್ ಟೇನ್ ಮೆಂಟ್

* ಎಲ್ಲ ಪ್ರಮುಖ 550+ ಡಿಜಿಟಲ್ ಟಿವಿ ಚಾನೆಲ್‌ಗಳು: ನಿಮ್ಮ ಮೆಚ್ಚಿನ ಎಲ್ಲ ಟಿವಿ ಚಾನೆಲ್‌ಗಳು ಹೈ-ಡೆಫಿನಿಷನ್‌ನಲ್ಲಿ ಲಭ್ಯ.
* ಕ್ಯಾಚ್-ಅಪ್ ಟಿವಿ: ಬಳಕೆದಾರರು ಈಗ ಅವರು ಬಯಸಿದಷ್ಟು ಹಿಂದಿನ ತನಕ ಕಾರ್ಯಕ್ರಮಗಳನ್ನು ಹೆಕ್ಕಿ, ನೋಡಬಹುದು.
* ಅತ್ಯಂತ ಜನಪ್ರಿಯ 16+ ಒಟಿಟಿ ಆಪ್ಸ್‌: ಜಿಯೋಏರ್ ಫೈಬರ್ ಬಳಕೆದಾರರು ಪ್ರಮುಖ ಒಟಿಟಿ ಅಪ್ಲಿಕೇಷನ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು. ಬಳಕೆದಾರರು ಈ ಚಂದಾದಾರಿಕೆಯನ್ನು ಬಳಸಿಕೊಳ್ಳಬಹುದು ಮತ್ತು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಂತಹ ಅವರ ಆಯ್ಕೆಯ ಯಾವುದೇ ಸಾಧನಗಳಳು ಎಲ್ಲದರಲ್ಲೂ ಅಪ್ಲಿಕೇಷನ್‌ಗಳನ್ನು ಬಳಸಬಹುದು.

2. ಬ್ರಾಡ್ ಬ್ಯಾಂಡ್
* ಒಳಾಂಗಣ ವೈಫೈ ಸೇವೆ: ಜಿಯೋದ ವಿಶ್ವಾಸಾರ್ಹ ವೈಫೈ ಸಂಪರ್ಕ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರ ಸ್ಥಳದ ಪ್ರತಿ ಮೂಲೆಯಲ್ಲಿಯೂ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಅನುಭವ ದೊರೆಯುತ್ತದೆ.

3. ಸ್ಮಾರ್ಟ್ ಹೋಮ್ ಸೇವೆ:
* ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಕ್ಲೌಡ್ ಪಿಸಿ
* ಭದ್ರತೆ ಮತ್ತು ಕಣ್ಗಾವಲು ಸಲ್ಯೂಷನ್ಸ್
* ಹೆಲ್ತ್ ಕೇರ್
* ಶಿಕ್ಷಣ
* ಸ್ಮಾರ್ಟ್ ಹೋಮ್ ಐಒಟಿ
* ಗೇಮಿಂಗ್
* ಹೋಮ್ ನೆಟ್ ವರ್ಕಿಂಗ್

4. ಹೆಚ್ಚುವರಿ ವೆಚ್ಚವಿಲ್ಲದೆ ಗೃಹ ಸಾಧನಗಳು:
* ನಿಮ್ಮ ಮನೆ ಅಥವಾ ವ್ಯಾಪಾರದ ಸ್ಥಳದಲ್ಲಿ ಯಾವಾಗಲೂ ಉತ್ತಮ ಕವರೇಜ್‌ಗಾಗಿ ವೈಫೈ ರೂಟರ್
* 4K ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್
* ವಾಯಿಸ್‌ ನೆರವಿನಿಂದ ಕಾರ್ಯ ನಿರ್ವಹಿಸುವ ರಿಮೋಟ್

ಜಿಯೋ ಏರ್‌ಫೈಬರ್ ಕನೆಕ್ಷನ್‌ಗಳು ಹೆಚ್ಚಾಗುವುದರಿಂದ ಭಾರತೀಯರು ಮನರಂಜನೆಗಾಗಿ ಬಳಕೆ ಮಾಡುವ ಅಭ್ಯಾಸದಲ್ಲಿ ಭಾರೀ ಬದಲಾವಣೆ ಆಗುತ್ತದೆ. ಹವಾಮಾನ ಪರಿಸ್ಥಿತಿಗಳು ಮತ್ತು ತಾಂತ್ರಿಕ ದೋಷಗಳಿಂದ ಉಂಟಾಗುವ ಸೇವಾ ಅಡೆತಡೆಗಳು ಉಂಟಾಗುವ ಡಿಟಿಎಚ್ ಸೇವೆಗಳಿಗಿಂತ ಭಿನ್ನವಾಗಿ, ಜಿಯೋ ಏರ್ ಫೈಬರ್ ಸಂಪರ್ಕಗಳು ದೃಢವಾದ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸುತ್ತವೆ.

ಜಿಯೋ ಕನೆಕ್ಷನ್‌ಗಳು ಅಡೆತಡೆಯಿಲ್ಲದ ಸೇವೆಯನ್ನು ಖಾತ್ರಿ ಪಡಿಸುತ್ತದೆ, ಉತ್ತಮ ಕಾರ್ಯಕ್ಷಮತೆಯನ್ನು ಸಹ ಒದಗಿಸುತ್ತವೆ. ಆದ್ದರಿಂದ ಇದು ಗ್ರಾಹಕರಿಗೆ ಆಕರ್ಷಕ ಆಯ್ಕೆಯಾಗಿದೆ. ಒಟಿಟಿ ಅಪ್ಲಿಕೇಷನ್‌ಗಳು ಮತ್ತು ಜಿಯೋ ಸಿನಿಮಾ ಮತ್ತು ಜಿಯೋಟಿವಿಯಂಥ ಪ್ಲಾಟ್‌ಫಾರ್ಮ್‌ಗಳ ಹೆಚ್ಚಳವು ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

ಈ ಪ್ಲಾಟ್‌ಫಾರ್ಮ್‌ಗಳು ಜಿಯೋ ಏರ್‌ಫೈಬರ್ ಕನೆಕ್ಷನ್‌ಗಳ ಮೂಲಕ ಕೂಡ ದೊರೆಯುತ್ತವೆ. ಕ್ರೀಡೆಗಳ ನೇರಪ್ರಸಾರ, ಇತ್ತೀಚಿನ ಚಲನಚಿತ್ರಗಳು, ವೆಬ್ ಸರಣಿಗಳು ಮತ್ತು ಜನಪ್ರಿಯ ಟಿವಿ ಕಾರ್ಯಕ್ರಮಗಳು ಸೇರಿದಂತೆ ಭಾರತೀಯ ವೀಕ್ಷಕರ ವಿವಿಧ ಅಭಿರುಚಿಗಳಿಗೆ ತಕ್ಕಂತೆ ಅತ್ಯುತ್ತಮ ಗುಣಮಟ್ಟದ HD ಕಂಟೆಂಟ್ ಗಳನ್ನು ಪೂರೈಸುತ್ತವೆ.

Best Mobiles in India

English summary
Jio Airfiber now available in all district headquarters and more towns across Karnataka. more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+