Home
ಸುದ್ದಿಜಾಲ

ಜಿಯೋ ಏರ್‌ಫೈಬರ್ vs ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್: ಯಾವುದು ಬೆಸ್ಟ್‌?

ಜನಪ್ರಿಯ ರಿಲಯನ್ಸ್ ಜಿಯೋ ಸಂಸ್ಥೆಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಭಾರತದಲ್ಲಿ ಜಿಯೋ ಏರ್‌ಫೈಬರ್ (Jio AirFiber) ಅನ್ನು ಬಿಡುಗಡೆ ಮಾಡಿದೆ. ಆರಂಭಿಕ ಹಂತವಾಗಿ ದೇಶದ ಎಂಟು ಮೆಟ್ರೋ ನಗರಗಳಲ್ಲಿ ಚಾಲನೆ ನೀಡಿದೆ. ಜಿಯೋ ಏರ್‌ಫೈಬರ್ ಉತ್ತಮವೇ? ಅಥವಾ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಯೋಗ್ಯವೇ?

ಹೌದು, ಜಿಯೋ ಸಂಸ್ಥೆಯ ನೂತನ ಏರ್‌ಫೈಬರ್ ಸೇವೆಯು ವೇಗದ ಇಂಟರ್ನೆಟ್‌ ಸೌಲಭ್ಯ ಪಡೆದಿದ್ದು, ಇದು ವೈರ್‌ಲೆಸ್‌ ಸಂಪರ್ಕ ನೀಡುತ್ತದೆ. ಅದೇ ರೀತಿ ಏರ್‌ಟೆಲ್ ಎಕ್ಸ್‌ಟ್ರೀಮ್ ಏರ್‌ಫೈಬರ್ FWA (ಸ್ಥಿರ ವೈರ್‌ಲೆಸ್ ಆಕ್ಸೆಸ್) ಸಂವಹನ ವ್ಯವಸ್ಥೆಯಾಗಿದ್ದು ಅದು ಸರಳ ಪ್ಲಗ್ ಮತ್ತು ಪ್ಲೇ ಡಿವೈಸ್‌ನೊಂದಿಗೆ 5G ಇಂಟರ್ನೆಟ್ ಸೇವೆಗಳನ್ನು ನೀಡುತ್ತದೆ.

ಜಿಯೋ ಏರ್‌ಫೈಬರ್ vs ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್: ಯಾವುದು ಬೆಸ್ಟ್‌?

ಕೇಬಲ್‌ ಅಗತ್ಯ ಇಲ್ಲದ ಜಿಯೋ ಏರ್‌ಫೈಬರ್ ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಈ ಸೇವೆಗಳ ನಡುವಿನ ಭಿನ್ನತೆಗಳು ಏನು? ಇವುಗಳ ಬೆಲೆ ಎಷ್ಟು? ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಏರ್‌ಫೈಬರ್ vs ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ : ಬೆಲೆ ಮಾಹಿತಿ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಭಾರತದಲ್ಲಿ 7,733ರೂ. ಬೆಲೆಯಲ್ಲಿ ಲಭ್ಯವಿದೆ. ಈ ಬೆಲೆಯು 6 ತಿಂಗಳ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ (Xstream AirFiber) ಮತ್ತು ರೀಫಂಡೆಬಲ್‌ 2,500 ರೂ. ಆಗಿದೆ. ಇನ್ನು ಈ ಸೇವೆಯು ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಲಭ್ಯವಿದೆ. ಜಿಯೋ ಏರ್‌ಫೈಬರ್ ಸೇವೆಯು 30mpbs ಪ್ಲ್ಯಾನ್‌ ದರವು 599ರೂ ಆಗಿದೆ. ಜಿಯೋ ಏರ್‌ ಫೈಬರ್‌ 100mpbs ಪ್ಲ್ಯಾನ್‌ ಬೆಲೆಯು 899ರೂ ಆಗಿದೆ.

ಜಿಯೋ ಏರ್‌ಫೈಬರ್ vs ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ : ಲಭ್ಯತೆ
ಜಿಯೋ ಏರ್‌ಫೈಬರ್ ಸೇವೆಯು ಹೊಸದಾಗಿ ಲಾಂಚ್ ಆಗಿದ್ದು, ಇದು ಆರಂಭಿಕ ಹಂತವಾಗಿ ಎಂಟು ಮೆಟ್ರೋ ನಗರಗಳಲ್ಲಿ ಲಭ್ಯ. ಅವುಗಳು ಕ್ರಮವಾಗಿ ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಹಾಗೂ ಪುಣೆ. ಇನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ದೆಹಲಿ ಮತ್ತು ಮುಂಬೈ ಲಭ್ಯ.

ಜಿಯೋ ಏರ್‌ಫೈಬರ್ vs ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ : ಪ್ಲ್ಯಾನ್ ಮಾಹಿತಿ
ಜಿಯೋ ಏರ್‌ ಫೈಬರ್‌ 30mpbs ಪ್ಲ್ಯಾನ್‌ ಬೆಲೆಯು 599ರೂ ಆಗಿದೆ. ಈ ಯೋಜನೆಯು 550+ ಡಿಜಿಟಲ್ ಕನೆಕ್ಷನ್‌ ಪಡೆದಿದ್ದು, ಇದರ ಜೊತೆಗೆ 14 ಆಪ್ಸ್‌ ಸೇವೆ ಪಡೆದಿದೆ. ಹಾಗೆಯೇ ಜಿಯೋ ಏರ್‌ ಫೈಬರ್‌ 100mpbs ಪ್ಲ್ಯಾನ್‌ ದರವು 899ರೂ ಆಗಿದೆ. ಈ ಪ್ಲ್ಯಾನ್ 550+ ಡಿಜಿಟಲ್ ಕನೆಕ್ಷನ್‌ ಒಳಗೊಂಡಿದ್ದು, ಹಾಗೆಯೇ 14 ಆಪ್ಸ್‌ ಸೇವೆ ಒಳಗೊಂಡಿದೆ.

ಇನ್ನು ಜಿಯೋ ಏರ್‌ಫೈಬರ್ 1199ರೂ. ಯೋಜನೆಯು 550+ ಡಿಜಿಟಲ್ ಕನೆಕ್ಷನ್‌ ಪಡೆದುಕೊಂಡಿದ್ದು, ಇದರೊಂದಿಗೆ 14 ಆಪ್ಸ್‌ ಸೇವೆ ಜೊತೆಗೆ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್‌, ಜಿಯೋ ಸಿನಿಮಾ ಪ್ರಿಮೀಯಂ ಸೇವೆ ಒಳಗೊಂಡಿದೆ. ಇನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ 100Mbps ವೇಗದ ಯೋಜನೆಯು 799ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ.

ನೂತನ ಜಿಯೋ ಏರ್‌ಫೈಬರ್ ಸೇವೆಯನ್ನು ಗ್ರಾಹಕರು ಹತ್ತಿರದ ಜಿಯೋ ಸ್ಟೋರ್‌ ಅಥವಾ ಅಧಿಕೃತ ಜಿಯೋ ವೆಬ್‌ಸೈಟ್‌ ಮೂಲಕವು ಖರೀದಿಸ ಬಹುದಾಗಿದೆ. ಹಾಗೆಯೇ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಅನ್ನು ಏರ್‌ಟೆಲ್‌ ಸ್ಟೋರ್‌ ಮೂಲಕ ಖರೀದಿ ಮಾಡಬಹುದಾಗಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಡಿವೈಸ್‌ ಪ್ಲಗ್ ಆಂಡ್‌ ಪ್ಲೇ ಮಾದರಿಯಲ್ಲಿ ಇದ್ದು, ಎಕ್ಸ್‌ಟ್ರಿಮ್‌ ಏರ್‌ಫೈವರ್‌ ಆಪ್‌ ಮೂಲಕ ಸುಲಭವಾಗಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Jio AirFiber vs Airtel Xstream Fiber: plans, price and comparison.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+