ಮೊಬೈಲ್ ಡೇಟಾ ಖಾಲಿ ಆಗಿದ್ರೆ, ಈ ಅಗ್ಗದ ಪ್ಲ್ಯಾನ್ ಖಂಡಿತಾ ಉಪಯುಕ್ತ!
ದೇಶದ ಟೆಲಿಕಾಂ ಪೂರೈಕೆದಾರ ಸಂಸ್ಥೆಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳು ದೈನಂದಿನ ಅಧಿಕ ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಆಯ್ಕೆ ನೀಡಿವೆ. ಅದಾಗ್ಯೂ, ಕೆಲವೊಮ್ಮೆ ಮೂಲ ಪ್ಲ್ಯಾನಿನ ವ್ಯಾಲಿಡಿಟಿ ಇದ್ದರೂ, ಡೇಟಾ ಖಾಲಿ ಆಗಿರುತ್ತದೆ. ಅಂತಹ ವೇಳೆ ಕೆಲವು ಅಗ್ಗದ ಪ್ಲ್ಯಾನ್‌ಗಳು ಗ್ರಾಹಕರಿಗೆ ನೆರವಾಗುತ್ತವೆ.
ಹೌದು, ಜಿಯೋ, ಏರ್‌ಟೆಲ್ ಹಾಗೂ ವಿ ಈ ಮೂರು ಟೆಲಿಕಾಂಗಳು ಅಧಿಕ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಅನುಕೂಲಕ್ಕಾಗಿ ಡೇಟಾ ವೋಚರ್ ರೀಚಾರ್ಜ್ ಪ್ಯಾಕ್‌ಗಳನ್ನು ನೀಡಿವೆ. ಕನಿಷ್ಠ 1GB ಡೇಟಾ ವೋಚರ್‌ನಿಂದ 12GB ಡೇಟಾಗೂ ಹೆಚ್ಚಿನ ಡೇಟಾ ವೋಚರ್ ಪ್ಲ್ಯಾನ್ ಆಯ್ಕೆ ಲಭ್ಯ ಮಾಡಿವೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್‌ಗಳು ಭಿನ್ನ ಪ್ರೈಸ್‌ಟ್ಯಾಗ್ ಪಡೆದಿವೆ. ಆದರೆ ಸುಮಾರು 100ರೂ. ಒಳಗೆ ಲಭ್ಯವಿರುವ ಕೆಲವು ಡೇಟಾ ವೋಚರ್‌ಗಳು ಆಕರ್ಷಕ ಎನಿಸಿವೆ. ಹಾಗಾದರೆ ಅಂತಹ ಕೆಲವು ಅಗ್ಗದ ವೋಚರ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 4G ಡೇಟಾ ವೋಚರ್ಸ್ ಲಿಸ್ಟ್ : ಜಿಯೋ ಸಂಸ್ಥೆಯು ಹೆಚ್ಚುವರಿ ಡೇಟಾ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡೇಟಾ ಬಳಕೆಗಾಗಿ ಕೆಲವು 4G ಡೇಟಾ ವೋಚರ್ಸ್ ಆಯ್ಕೆಗಳ ಲಿಸ್ಟ್ ಹೊಂದಿದೆ. 100ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಡೇಟಾ ವೋಚರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. ಜಿಯೋ 15ರೂ. ಡೇಟಾ ವೋಚರ್‌ನಲ್ಲಿ ಗ್ರಾಹಕರಿಗೆ 1GB ಡೇಟಾ ಸೌಲಭ್ಯ ಲಭ್ಯ.

ಹಾಗೆಯೇ ಜಿಯೋ 25ರೂ. ಡೇಟಾ ವೋಚರ್‌ನಲ್ಲಿ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಅದೇ ರೀತಿ ಜಿಯೋ 61ರೂ. ಡೇಟಾ ವೋಚರ್ ಪ್ಯಾಕ್‌ನಲ್ಲಿ ಗ್ರಾಹಕರಿಗೆ 6GB ಡೇಟಾ ಪ್ರಯೋಜನ ಸಿಗಲಿದೆ. ಇನ್ನು ಈ ರೀಚಾರ್ಜ್ ಯೋಜನೆಗಳಲ್ಲಿ ಯಾವುದೇ ಹೆಚ್ಚಿವರಿ ಸೌಲಭ್ಯ ಸಿಗುವುದಿಲ್ಲ.

ಏರ್‌ಟೆಲ್ 4G ಡೇಟಾ ವೋಚರ್ಸ್ ಆಯ್ಕೆ : ಏರ್‌ಟೆಲ್ ಸಂಸ್ಥೆಯು ಹೆಚ್ಚುವರಿ ಡೇಟಾ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡೇಟಾ ಬಳಕೆಗಾಗಿ ಕೆಲವು 4G ಡೇಟಾ ವೋಚರ್ಸ್ ಆಯ್ಕೆಗಳ ಲಿಸ್ಟ್ ಹೊಂದಿದೆ. 100ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಡೇಟಾ ವೋಚರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. ಏರ್‌ಟೆಲ್ 19ರೂ. ಡೇಟಾ ವೋಚರ್‌ನಲ್ಲಿ ಗ್ರಾಹಕರಿಗೆ 1GB ಡೇಟಾ ಸೌಲಭ್ಯ ಲಭ್ಯ.
ಹಾಗೆಯೇ ಏರ್‌ಟೆಲ್ 58ರೂ. ಡೇಟಾ ವೋಚರ್‌ನಲ್ಲಿ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಅದೇ ರೀತಿ ಏರ್‌ಟೆಲ್ 65ರೂ. ಡೇಟಾ ವೋಚರ್ ಪ್ಯಾಕ್‌ನಲ್ಲಿ ಗ್ರಾಹಕರಿಗೆ 4GB ಡೇಟಾ ಪ್ರಯೋಜನ ಸಿಗಲಿದೆ. ಇನ್ನು ಏರ್‌ಟೆಲ್ 98ರೂ. ರೀಚಾರ್ಜ್ ಯೋಜನೆಯಲ್ಲಿ 5GB ಡೇಟಾ ಲಭ್ಯ. ಇನ್ನು ಈ ಯೋಜನೆಗಳಲ್ಲಿ ಯಾವುದೇ ಹೆಚ್ಚಿವರಿ ಸೌಲಭ್ಯ ಸಿಗುವುದಿಲ್ಲ.

ವಿ 4G ಡೇಟಾ ವೋಚರ್ಸ್ ಪಟ್ಟಿ : ವಿ ಸಂಸ್ಥೆಯು ಹೆಚ್ಚುವರಿ ಡೇಟಾ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡೇಟಾ ಬಳಕೆಗಾಗಿ ಕೆಲವು 4G ಡೇಟಾ ವೋಚರ್ಸ್ ಆಯ್ಕೆಗಳ ಲಿಸ್ಟ್ ಹೊಂದಿದೆ. 100ರೂ. ಒಳಗೆ ರೀಚಾರ್ಜ್ ಮಾಡಬಹುದಾದ ಡೇಟಾ ವೋಚರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. ವಿ 19ರೂ. ಡೇಟಾ ವೋಚರ್‌ನಲ್ಲಿ ಗ್ರಾಹಕರಿಗೆ 1GB ಡೇಟಾ ಪ್ರಯೋಜನ ದೊರೆಯುತ್ತದೆ.
ಹಾಗೆಯೇ ವಿ 29ರೂ. ಡೇಟಾ ವೋಚರ್‌ನಲ್ಲಿ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಅದೇ ರೀತಿ ವಿ 39ರೂ. ಡೇಟಾ ವೋಚರ್ ಪ್ಯಾಕ್‌ನಲ್ಲಿ ಗ್ರಾಹಕರಿಗೆ 3GB (7 ದಿನಗಳ ವ್ಯಾಲಿಡಿಟಿ) ಡೇಟಾ ಪ್ರಯೋಜನ ಸಿಗಲಿದೆ. ಇನ್ನು ವಿ 58ರೂ. (28 ದಿನಗಳ ವ್ಯಾಲಿಡಿಟಿ) ರೀಚಾರ್ಜ್ ಯೋಜನೆಯಲ್ಲಿ 5GB ಡೇಟಾ ಲಭ್ಯ. ವಿ ಟೆಲಿಕಾಂ 75ರೂ. ಡೇಟಾ ವೋಚರ್‌ನಲ್ಲಿ 6GB (7 ದಿನಗಳ ವ್ಯಾಲಿಡಿಟಿ)


Click it and Unblock the Notifications








