Home
ಸುದ್ದಿಜಾಲ

ಜಿಯೋ, ವಿ ಮತ್ತು ಏರ್‌ಟೆಲ್‌ ಟೆಲಿಕಾಂ 149ರೂ. ಪ್ಲ್ಯಾನ್‌: ನಿಮ್ಮ ಆಯ್ಕೆ ಯಾವುದು?

ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಪ್ರೀಪೇಯ್ಡ್‌ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳು ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 149ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಟೆಲಿಕಾಂ

ಹೌದು, ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಸಂಸ್ಥೆಗಳು 149ರೂ. ಬೆಲೆಯ ಪ್ರೀಪೇಯ್ಡ್‌ ಪ್ಲ್ಯಾನ್‌ ಆಯ್ಕೆ ಹೊಂದಿವೆ. ಈ ಮೂರು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್‌ ಯೋಜನೆಯಲ್ಲಿ ಅಧಿಕ ದೈನಂದಿನ ಡೇಟಾ, ಅಧಿಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯಗಳು ಸಿಗಲಿವೆ. ಆದರೂ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ, ಏರ್‌ಟೆಲ್‌ ಮತ್ತು ವೊಡಾಫೋನ್ (ವಿ ಟೆಲಿಕಾಂ) 149ರೂ. ಪ್ಲ್ಯಾನಿನಲ್ಲಿ ಯಾವುದು ಯೋಗ್ಯ? ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಭಾರ್ತಿ ಏರ್‌ಟೆಲ್ 149ರೂ. ಪ್ರೀಪೇಯ್ಡ್‌ ಯೋಜನೆ

ಭಾರ್ತಿ ಏರ್‌ಟೆಲ್ 149ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ನ 149ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ದೀರ್ಘಾವಧಿಯ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಒಟ್ಟಾರೇ 2GB ಡೇಟಾ ಹಾಗೂ ಒಟ್ಟಾರೇ 300 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ. ಫ್ರೀ ಹೆಲೋ ಟ್ಯೂನ್ಸ್‌, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯವಾಗಲಿವೆ.

ರಿಲಾಯನ್ಸ್‌ ಜಿಯೋ 149ರೂ. ಪ್ರೀಪೇಯ್ಡ್‌ ಯೋಜನೆ

ರಿಲಾಯನ್ಸ್‌ ಜಿಯೋ 149ರೂ. ಪ್ರೀಪೇಯ್ಡ್‌ ಯೋಜನೆ

ರಿಲಾಯನ್ಸ್‌ ಜಿಯೋ 149ರೂ. ಯೋಜನೆಯಲ್ಲಿ ಚಂದಾದಾರರಿಗೆ ಪ್ರತಿದಿನ 1 ಜಿಬಿ ಲಭ್ಯವಾಗುತ್ತದೆ. ಜಿಯೋದಿಂದ ಜಿಯೋ ಹೊರಹೋಗುವ ಕರೆಗಳು ಉಚಿತವಾಗಿರುತ್ತದೆ ಹಾಗೂ ಜಿಯೋದಿಂದ ಇತರೆ ನೆಟವರ್ಕ್‌ಗಳ ಕರೆಗಳಿಗೆ ಸಹ ಸಂಪೂರ್ಣ ಅನಿಯಮಿತ ಆಗಿವೆ. ಈ ಯೋಜನೆಯು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಅಲ್ಲದೆ, ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತದೆ.

ವಿ ಟೆಲಿಕಾಂ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ 300 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1GB ಡೇಟಾ ಸಹ ಲಭ್ಯ ಆಗಲಿದೆ.

Best Mobiles in India

English summary
Jio, Airtel And Vi Rs. 149 Plan: Which One Better To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+