Home
ಸುದ್ದಿಜಾಲ

ಸದ್ಯದಲ್ಲೇ Jio, Vi ಮತ್ತು Airtel ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ!

ಜನಪ್ರಿಯ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ ಟೆಲಿಕಾಂ) ತಮ್ಮ ಚಂದಾದಾರರಿಗೆ ಹಲವು ಅತ್ಯುತ್ತಮ ಡೇಟಾ ಯೋಜನೆಗಳನ್ನು ಪರಿಚಯಿಸಿ ಗಮನ ಸೆಳೆದಿವೆ. ಆದರೆ ಈ ಮೂರು ಟೆಲಿಕಾಂನ ಚಂದಾದಾರರು ಸದ್ಯದಲ್ಲೇ ಶಾಕ್ ಆಗೋದು ಗ್ಯಾರಂಟಿ. ಏಕೆಂದರೇ ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂಗಳು ದೇಶದಲ್ಲಿ ಆಯ್ದ ತಮ್ಮ ಕೆಲವು ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಿವೆ.

ಅಮೆಜಾನ್

ಹೌದು, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು (ವಿ) ವೊಡಾಫೋನ್ ಐಡಿಯಾ ಟೆಲಿಕಾಂಗಳು ಕೆಲವು ಯೋಜನೆಗಳ ಬೆಲೆಯಲ್ಲಿ ಏರಿಕೆ ಮಾಡಲಿವೆ. ಪ್ರಮುಖ ಓಟಿಟಿ ತಾಣ ಎನಿಸಿಕೊಂಡಿರುವ ಅಮೆಜಾನ್, ತನ್ನ ಅಮೆಜಾನ್ ಪ್ರೈಮ್‌ ಚಂದಾದಾರಿಕೆ ಶುಲ್ಕದಲ್ಲಿ ಹೆಚ್ಚಳ ಮಾಡಲಿದೆ. ಈ ನಿಟ್ಟಿನಲ್ಲಿ ಟೆಲಿಕಾಂಗಳು ತಮ್ಮ ಅಮೆಜಾನ್ ಪ್ರೈಮ್‌ (Amazon Prime) ಪ್ರಯೋಜನದ ಒಳಗೊಂಡ ಪ್ರೀಪೇಯ್ಡ್‌ ಯೋಜನೆಗಳ ಬೆಲೆಯಲ್ಲಿ ಏರಿಕೆ ಮಾಡಲಿವೆ ಎನ್ನಲಾಗಿದೆ.

ಅಮೆಜಾನ್ ಪ್ರೈಮ್ ದುಬಾರಿ!

ಅಮೆಜಾನ್ ಪ್ರೈಮ್ ದುಬಾರಿ!

ಅಮೆಜಾನ್ ಸಂಸ್ಥೆಯು ಅಮೆಜಾನ್ ಪ್ರೈಮ್ ಸದಸ್ಯ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸುವುದಾಗಿ ತಿಳಿಸಿದೆ. ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಶುಲ್ಕದಲ್ಲಿ 500ರೂ. ಏರಿಕೆ ಮಾಡಲಿದೆ ಎನ್ನಲಾಗಿದೆ. ಹೀಗಾಗಿ ಅಮೆಜಾನ್ ಪ್ರೈಮ್ ಸದಸ್ಯರು ಪ್ರಸ್ತುತ ಬೆಲೆ ಗಿಂತ 50% ಹೆಚ್ಚು ದುಬಾರಿ ನೀಡಬೇಕಾಗುತ್ತದೆ ಎಂದು ಅಮೆಜಾನ್ ಹೇಳಿದೆ. ಈ ಬಗ್ಗೆ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನ ವೆಬ್‌ಪುಟದಲ್ಲಿ ಕಂಪನಿಯು ಹೊಸ ಬೆಲೆ ಮಾದರಿಯನ್ನು ನವೀಕರಿಸಿದೆ.

ಅಮೆಜಾನ್

ಅಮೆಜಾನ್ ಪ್ರೈಮ್ ಚಂದಾದಾರರು ಸದ್ಯ ಇರುವ ಶುಲ್ಕಕ್ಕಿಂತ ಶೇ 50% ಹೆಚ್ಚು ದುಬಾರಿ ಆಗಲಿದೆ ಎಂದು ಅಮೆಜಾನ್ ದೃಢಪಡಿಸಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನ ವೆಬ್‌ಪುಟದಲ್ಲಿ ಕಂಪನಿಯು ಹೊಸ ಬೆಲೆ ಮಾದರಿಯನ್ನು ನವೀಕರಿಸಿದೆ. ಹೊಸ ಬೆಲೆಯು 'very soon' (ಅತೀ ಶೀಘ್ರದಲ್ಲೇ) ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ ಆದರೆ ನಿಖರವಾದ ದಿನಾಂಕವನ್ನು ನೀಡಿಲ್ಲ.

ಅಮೆಜಾನ್

ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಶುಲ್ಕದಲ್ಲಿ 500ರೂ ಬೆಲೆ ಏರಿಕೆ ಎನ್ನಲಾಗಿದೆ. ದರ ಏರಿಕೆಯ ನಂತರ ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಶುಲ್ಕ 1,499ರೂ. ಆಗಲಿದೆ ಎನ್ನಲಾಗಿದೆ. ಕೇವಲ ವಾರ್ಷಿಕ ಯೋಜನೆ ಅಷ್ಟೇ ಅಲ್ಲದೇ ತ್ರೈಮಾಸಿಕ ಮತ್ತು ತಿಂಗಳ ಯೋಜನೆಗಳು ಕೂಡ ಬೆಲೆ ಏರಿಕೆಯನ್ನು ಕಾಣಲಿವೆ. ತಿಂಗಳ ಅವಧಿಯ ಯೋಜನೆಯು 129ರೂ ರಿಂದ 179ರೂ ಕ್ಕೆ ಮತ್ತು ತ್ರೈಮಾಸಿಕ ಯೋಜನೆಯು 329ರೂ ರಿಂದ 459ರೂ ಕ್ಕೆ ಏರಿಕೆ ಕಾಣಲಿವೆ.

ಜಿಯೋ, ವಿ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಬೆಸ್ಟ್‌ ಪ್ಲ್ಯಾನ್‌ಗಳ:

ಜಿಯೋ, ವಿ ಮತ್ತು ಏರ್‌ಟೆಲ್‌ ಟೆಲಿಕಾಂಗಳ ಬೆಸ್ಟ್‌ ಪ್ಲ್ಯಾನ್‌ಗಳ:

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್
ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಒಟ್ಟು ಈ ಯೋಜನೆಯಲ್ಲಿ ಗ್ರಾಹಕರಿಗೆ 168GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜಿಯೋ ಟಿವಿ, ಜಿಯೋ ಸೆಕ್ಯುರಿಟಿ, ಜಿಯೋ ನ್ಯೂಸ್, ಜಿಯೋ ಸಿನಿಮಾ ಆಪ್‌ಗಳ ಸೌಲಭ್ಯ ಸಿಗಲಿದೆ.

ವಿ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಏರ್‌ಟೆಲ್‌ನ 698ರೂ. ಪ್ಲ್ಯಾನ್

ಏರ್‌ಟೆಲ್‌ನ 698ರೂ. ಪ್ಲ್ಯಾನ್

ಏರ್‌ಟೆಲ್‌ನ 698ರೂ ಪ್ರೀಪೇಯ್ಡ್ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್ ಸೌಲಭ್ಯಗಳು ಸಿಗುತ್ತವೆ.

Best Mobiles in India

English summary
Jio, Airtel And Vi Telecoms May Increase Price of Select Plans. All of these plans will have one thing in common - the over-the-top (OTT) benefit of Amazon Prime Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+