Home
ಸುದ್ದಿಜಾಲ

ವ್ಯಾಲಿಡಿಟಿ ಮುಗಿದ್ರೂ ಮೇ 3ರ ವರೆಗೂ ನಿಮ್ಮ ಫೋನ್ ಬಂದ್ ಆಗಲ್ಲ!

ಕೊರೊನಾ ವೈರಸ್‌ ಸಾಂಕ್ರಾಮಿಕವನ್ನು ನಿಯಂತ್ರಿಸುವವುದಕ್ಕಾಗಿ ಏಪ್ರಿಲ್ 14ರ ವರೆಗೂ ಸರ್ಕಾರ ಲಾಕ್‌ಡೌನ್ ವಿಧಿಸಿತ್ತು. ಈ ಅವಧಿಯಲ್ಲಿ ಬಳಕೆದಾರರಿಗೆ ಅನುಕೂಲವಾಗಲೆಂದು ಟೆಲಿಕಾಂ ಸಂಸ್ಥೆಗಳು ಡೇಟಾ, ವ್ಯಾಲಿಡಿಟಿ ಮತ್ತು ರೀಚಾರ್ಜ್ ಸೌಲಭ್ಯಗಳನ್ನು ಪರಿಚಯಿಸಿದ್ದವು. ಆದ್ರೆ ಇದೀಗ ಸರ್ಕಾರ ಇದೇ ಮೇ 3ರ ವರೆಗೂ ಲಾಕ್‌ಡೌನ್ ವಿಸ್ತರಿಸಿದ ಬಳಿಕ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಚಂದಾದಾರಿಗೆ ವ್ಯಾಲಿಡಿಟಿ ಕೊಡುಗೆ ಘೋಷಿಸಿವೆ.

ಹೌದು, ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳು ಲಾಕ್‌ಡೌನ್ ಮುಗಿಯುವವರೆಗೂ ಅಂದರೇ ಮೇ 3, 2020ರ ವರೆಗೂ ಪ್ರೀಪೇಯ್ಡ್‌ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವುದಾಗಿ ಘೋಷಿಸಿವೆ. ಹೀಗಾಗಿ ಜಿಯೋ, ಏರ್‌ಟೆಲ್ ಅಥವಾ ವೊಡಾಫೋನ್ ಚಂದಾದಾರರು ತಮ್ಮ ವ್ಯಾಲಿಡಿಟಿ ಮುಗಿದರೂ ಸಹ ಒಳ ಬರುವ ಕರೆಗಳು ಯಾವುದೇ ಕಾರಣಕ್ಕೂ ಬಂದ್ ಆಗುವುದಿಲ್ಲ.

ಪ್ರೀಪೇಯ್ಡ್‌ ವ್ಯಾಲಿಡಿಟಿ

ಈ ಸಂದರ್ಭದಲ್ಲಿ ಅನೇಕರು ಆನ್‌ಲೈನ್ ಮೂಲಕವೇ ತಮ್ಮ ಫೋನ್ ನಂಬರ್ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದ್ರೆ ಇನ್ನೂ ಅನೇಕರಿಗೆ ರೀಚಾರ್ಜ್ ಮಾಡಿಕೊಳ್ಳಲು ಅನಾನುಕೂಲದ ಸ್ಥಿತಿ ಇರುವುದರಿಂದ ತಮ್ಮ ಚಂದಾದಾರರಿಗೆ ನೆರವಾಗಲು ಟೆಲಿಕಾಂ ಸಂಸ್ಥೆಗಳು ಪ್ರೀಪೇಯ್ಡ್‌ ವ್ಯಾಲಿಡಿಟಿ ವಿಸ್ತರಿಸಿವೆ. ಹೀಗಾಗಿ ಲಾಕ್‌ಡೌನ್ ಅವಧಿಯಲ್ಲಿ ನಿಮ್ಮ ಫೋನ್ ನಂಬರ್ ವ್ಯಾಲಿಡಿಟಿ ಮುಗಿದರೂ, ನೀವು ರೀಚಾರ್ಜ್ ಮಾಡಿಕೊಳ್ಳದಿದ್ದರೂ ಮೇ 3ರ ವರೆಗೂ ವ್ಯಾಲಿಡಿಟಿ ಮುಂದುವರೆಯುತ್ತದೆ.

ಫೋನ್ ಬಳಕೆ

ಫೀಚರ್ ಫೋನ್ ಬಳಕೆ ಮಾಡುವ ಸುಮಾರು 90 ಮಿಲಿಯನ್ ವೊಡಾಪೋನ್ ಪ್ರಿಪೇಯ್ಡ್ ಚಂದಾದಾರರಿಗೆ ವ್ಯಾಲಿಡಿಟಿ ವಿಸ್ತರಣೆಯ ಸೌಲಭ್ಯ ಸಹಾಯಕವಾಗಲಿದೆ ಎಂದು ವೊಡಾಫೋನ್ ಹೇಳಿದೆ. ಹಾಗೆಯೇ ಲಾಕ್‌ಡೌನ್‌ ನಿಂದಾಗಿ ಸುಮಾರು 30 ಮಿಲಿಯನ್ ಏರ್‌ಟೆಲ್‌ ಚಂದಾದಾರರಿಗೆ ಅವರ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಅನಾನುಕೂಲ ಆಗಿದೆ. ಅಂತಹ ಚಂದಾದಾರರಿಗೆ ಮೇ 3ರ ವರೆಗೂ ಒಳಬರುವ ಕರೆಗಳ ಸೌಲಭ್ಯ ಇರಲಿದೆ.

POS ಲೈಟ್‌ ರೀಚಾರ್ಜ್

ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗಷ್ಟೆ ಗ್ರಾಹಕರಿಗೆ ಅನುಕೂಲವಾಗಲೆಂದು ATM ಸೆಂಟರ್‌ ರೀಚಾರ್ಜ್ ಮಾಡುವ ಸೌಲಭ್ಯವನ್ನು ಪರಿಚಯಿಸಿವೆ. ಹಾಗೆಯೇ ಜಿಯೋ ಸಂಸ್ಥೆಯು ಇತ್ತೀಚಿಗೆ POS ಲೈಟ್‌ ರೀಚಾರ್ಜ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಈ ಆಪ್ ಮೂಲಕ ಬಳಕೆದಾರರು ಇತರೆ ಜಿಯೋ ಚಂದಾದಾರರ ಮೊಬೈಲ್‌ ರೀಚಾರ್ಜ್ ಮಾಡುವ ಆಯ್ಕೆ ನೀಡಿದೆ. ರೀಚಾರ್ಜ್‌ಗೆ ಪ್ರತಿಯಾಗಿ ಕ್ಯಾಶ್‌ಬ್ಯಾಕ್ ನೀಡುವ ಸೌಲಭ್ಯ ಪಡೆದಿದೆ.

Best Mobiles in India

English summary
Jio, airtel and Vodafone Idea will provide free incoming voice calling facility till May 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+