Jio, Airtel ನ ಅತ್ಯುತ್ತಮ ಅನಿಯಮಿತ ಡೇಟಾ ಪ್ಲ್ಯಾನ್‌ಗಳಿವು! ಇಲ್ಲಿದೆ ಲಿಸ್ಟ್
ಏರ್‌ಟೆಲ್ ಹಾಗೂ ಜಿಯೋ ಭಾರೀ ಪೈಪೋಟಿಯಲ್ಲಿ ಜನರಿಗೆ ಅತ್ಯುತ್ತಮ ಸೇವೆ ನೀಡುವ ಟೆಲಿಕಾಂ ಸಂಸ್ಥೆಗಳು ಎಂದರೆ ತಪ್ಪಾಗಲಾರದು. ಇವೆರಡೂ ಪ್ರತಿಸ್ಪರ್ಧಿಯಾಗಿದ್ದು ಜನಪ್ರಿಯ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಈ ನಡುವೆ ನಿತ್ಯ 3GB 5G ಡೇಟಾ, ಅನಿಯಮಿತ ಕರೆ ಮತ್ತು ಇತರ ಪ್ರಯೋಜನ ನೀಡುವ ಪ್ಲ್ಯಾನ್‌ಗಳು ಹೆಚ್ಚು ಮೆಚ್ಚುಗೆ ಆಗುತ್ತಿವೆ.
ಹೌದು, ಏರ್‌ಟೆಲ್ ಮತ್ತು ಜಿಯೋ (Airtel and Jio) ವಿವಿಧ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅದರಲ್ಲಿ 3GB ದೈನಂದಿನ ಡೇಟಾದೊಂದಿಗೆ ಉತ್ತಮ ಮನರಂಜನೆ ಸೇವೆ ಪಡೆದುಕೊಳ್ಳಬಹುದಾಗಿದೆ. ಇಂಟರ್ನೆಟ್ ಮಾತ್ರವಲ್ಲದೆ ಹಲವಾರು ವಿವಿಧ ಪ್ರಯೋಜನಗಳನ್ನು ಈ ಪ್ಲ್ಯಾನ್‌ನಲ್ಲಿ ಪಡೆದುಕೊಳ್ಳಬಹುದು. ಹಾಗಿದ್ರೆ, ಯಾವೆಲ್ಲಾ ಪ್ಲ್ಯಾನ್‌ನಲ್ಲಿ ನಿತ್ಯ 3GB 5G ಡೇಟಾ ಲಭ್ಯ ಇದೆ ಎಂದು ತಿಳಿಯೋಣ ಬನ್ನಿ.

ಏರ್‌ಟೆಲ್ 399ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಪ್ರತಿದಿನ 3GB ಹೈ-ಸ್ಪೀಡ್ ಇಂಟರ್ನೆಟ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ, 100 ದೈನಂದಿನ ಎಸ್‌ಎಮ್‌ಎಸ್ ಸೌಲಭ್ಯ ಇದ್ದು, ಹೆಚ್ಚುವರಿಯಾಗಿ ಏರ್‌ಟೆಲ್ ಎಕ್ಸ್ಸ್ಟ್ರೀಮ್ ಅಪ್ಲಿಕೇಶನ್, ಅಫೋಲೊ 24|7 ಸೇವೆ ಸೇರಿದಂತೆ ಇನ್ನೂ ಅನೇಕ ಸೇವೆ ಪಡೆದುಕೊಳ್ಳಬಹುದು. ಈ ಪ್ಲ್ಯಾನ್ 28 ದಿನಗಳ ಮಾನ್ಯತೆ ಹೊಂದಿದೆ.
ಏರ್‌ಟೆಲ್ 499 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲೂ ನಿತ್ಯವೂ 3GB ದೈನಂದಿನ ಡೇಟಾ, ಅನಿಯಮಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಲಭ್ಯವಾಗಲಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಬಳಕೆದಾರರು ಮೊಬೈಲ್‌ಗೆ 3 ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದಿಷ್ಟು ಮಾತ್ರವಲ್ಲದೆ ಇದರಲ್ಲೂ ಏರ್‌ಟೆಲ್ ಎಕ್ಸ್ಸ್ಟ್ರೀಮ್ ಸೇವೆ, ಅಫೋಲೊ 24|7 ಸೇವೆ ಸಹ ಲಭ್ಯ. ಇದು ಸಹ 28 ದಿನಗಳ ಮಾನ್ಯತೆ ಹೊಂದಿದೆ.
ಏರ್‌ಟೆಲ್ 699 ರೂ.ಗಳ ಪ್ಲ್ಯಾನ್: ಈ ವಿಶೇಷ ಪ್ಲ್ಯಾನ್‌ಅನ್ನು ಬಹುಪಾಲು ಜನರು ಬಳಕೆ ಮಾಡುತ್ತಾರೆ. ಇದರಲ್ಲೂ ನಿತ್ಯ 3GB ಡೇಟಾ ಸಿಗಲಿದ್ದು, ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಕರೆ ಮತ್ತು ಉಚಿತ ಎಸ್‌ಎಮ್‌ಎಸ್ ಆಯ್ಕೆಯೊಂದಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಲಭ್ಯ ಇರಲಿದೆ. ಈ ಪ್ಲ್ಯಾನ್ ಮೇಲೆ ತಿಳಿಸಿದ ಪ್ಲ್ಯಾನ್‌ಗಳಿಗಿಂತ ಹೆಚ್ಚಿನ ಮಾನ್ಯತೆ ದಿನಗಳನ್ನು ಹೊಂದಿದೆ. ಅಂದರೆ 56 ದಿನಗಳ ದೀರ್ಘಾವಧಿಯ ಮಾನ್ಯತೆ ಸಿಗುತ್ತದೆ.

ಜಿಯೋ 219 ರೂ.ಗಳ ಪ್ಲ್ಯಾನ್: ಕೆಲವು ವಿಷಯಗಳಲ್ಲಿ ಏರ್‌ಟೆಲ್‌ಗಿಂತ ಜಿಯೋದಲ್ಲಿ ಹೆಚ್ಚಿನ ಪ್ರಯೋಜನ ಸಿಗಲಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ನಿತ್ಯವೂ 3GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗಲಿದ್ದು, ಹೆಚ್ಚುವರಿಯಾಗಿ, ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಇನ್ನಿತರೆ ಜಿಯೋ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್ 14 ದಿನಗಳ ಮಾನ್ಯತೆ ಹೊಂದಿದೆ.
ಜಿಯೋ 399ರೂ.ಗಳ ಪ್ಲ್ಯಾನ್: ಜಿಯೋದ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.ಅಂದರೆ ನಿತ್ಯವೂ 3GB ಡೇಟಾ ಹಾಗೂ ಅನಿಯಮಿತ ಕರೆ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಇದ್ದು, ಇದರೊಂದಿಗೆ ಜಿಯೋದ ಇತರೆ ಮನರಂಜನಾ ಸೇವೆಗಳಿಗೆ ಉಚಿತ ಪ್ರವೇಶ ಪಡೆದುಕೊಳ್ಳಬಹುದು. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಜಿಯೋ 999 ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್ ದೊಡ್ಡ ಮೊತ್ತ ಹೊಂದಿದ್ದರೂ ಸಹ ಅದೇ ರೀತಿಯ ಪ್ರಯೋಜನಗಳು ಇದರಿಂದ ಸಿಗಲಿವೆ. ಅಂದರೆ 3GB ದೈನಂದಿನ ಡೇಟಾದೊಂದಿಗೆ ಅನಿಯಮಿತ ಕರೆ, 100 ದೈನಂದಿನ ಎಸ್‌ಎಮ್‌ಎಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶದ ಪ್ರಯೋಜನ ಈ ಪ್ಲ್ಯಾನ್‌ನಲ್ಲಿ ಲಭ್ಯ ಇರಲಿದೆ. ಎಲ್ಲದಕ್ಕೂ ಮಿಗಿಲಾಗಿ ಈ ಪ್ಲ್ಯಾನ್ ಬರೋಬ್ಬರಿ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಂದರೆ ಹತ್ತಿರತ್ತಿರ ಮೂರು ತಿಂಗಳ ಸೇವೆ ಪಡೆಯಬಹುದು.

ಸದ್ಯಕ್ಕೆ ಭಾರತದಲ್ಲಿ 5G ಸೇವೆ ನೀಡುತ್ತಿರುವ ಎರಡು ಮೊಬೈಲ್ ಆಪರೇಟರ್‌ಗಳು ಎಂದರೆ ಏರ್‌ಟೆಲ್ ಮತ್ತು ಜಿಯೋ ಮಾತ್ರ. ಉಳಿದಂತೆ ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್ ಬಳಕೆದಾರರು ಈ ಸೇವೆ ಪಡೆಯಬೇಕು ಎಂದರೆ ಇನ್ನೂ ಬಹುಕಾಲ ಕಾಯಬೇಕಿದೆ. ಉಳಿದಂತೆ ಈ ಎರಡೂ ಟೆಲಿಕಾಂ ತಮ್ಮ 5G ಸೇವೆಗಳನ್ನು 3,000ಕ್ಕೂ ಹೆಚ್ಚು ನಗರಗಳಲ್ಲಿ ವಿಸ್ತರಣೆ ಮಾಡಿದ್ದು, ಡಿಸೆಂಬರ್ 2023ರ ವೇಳೆಗೆ ಗಮನಾರ್ಹ ಬದಲಾವಣೆ ಕಾಣಬಹುದಾಗಿದೆ.


Click it and Unblock the Notifications








