500ರೂ. ಒಳಗೆ ಲಭ್ಯವಿರುವ ಬೆಸ್ಟ್ 2GB ಡೇಟಾ ಪ್ಲ್ಯಾನ್‌ಗಳ ಲಿಸ್ಟ್!
ದೇಶದಲ್ಲಿ ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿವೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಪ್ರತಿದಿನ ಡೇಟಾ ಸೌಲಭ್ಯವನ್ನು ಪಡೆದಿದ್ದು, ಜೊತೆಗೆ ವಾಯಿಸ್ ಕರೆ ಹಾಗೂ ವ್ಯಾಲಿಡಿಟಿ ಪ್ರಯೋಜನವನ್ನು ಹೊಂದಿವೆ. ಗ್ರಾಹಕರು ಸಹ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯದ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡುತ್ತಾರೆ.

ಹೌದು, ಪ್ರತಿದಿನ ಡೇಟಾ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ ಯೋಜನೆಗಳಿಗೆ ಬೇಡಿಕೆ ಹೆಚ್ಚು, ಈ ನಿಟ್ಟಿನಲ್ಲಿ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳು ಪ್ರತಿದಿನ 1GB, 1.5GB ಮತ್ತು 2GB ಪ್ರಯೋಜನಗಳ ಪ್ಲ್ಯಾನ್‌ಗಳನ್ನು ಹೊಂದಿವೆ. ಅವುಗಳಲ್ಲಿ ಬಹುತೇಕ ಚಂದಾದಾರರು ಪ್ರತಿದಿನ 1.5GB ಬಯಸಿದರೇ, ಇನ್ನು ಕೆಲವು ಚಂದಾದಾರರಿಗೆ ಪ್ರತಿದಿನ 2GB ಡೇಟಾ ಅಗತ್ಯವಾಗಿದೆ. 500ರೂ. ಒಳಗೂ ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು 2GB ಡೇಟಾ ಯೋಜನೆಗಳ ಆಯ್ಕೆ ನೀಡಿವೆ. ಅವುಗಳು ಡೇಟಾ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದಿವೆ. ಆ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ ಟೆಲಿಕಾಂ 249ರೂ ಪ್ರಿಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂ 249ರೂ ಪ್ರಿಪೇಯ್ಡ್ ಪ್ಲಾನ್ 23 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಸಮಯದಲ್ಲಿ ಪ್ರತಿನಿತ್ಯ 2GBಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಜಿಯೋ ಟು ಜಿಯೋ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನವನ್ನು ಸಹ ನೀಡಲಿದೆ. ಹಾಗೆಯೇ ಪ್ರತಿದಿನ 100ಎಸ್‌ಎಮ್‌ಎಸ್ ಸೇವೆ ಕೂಡ ಲಭ್ಯವಿದೆ.

ಜಿಯೋ 299ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಸಂದರ್ಭದಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ನಂತಹ ಸೇವೆಗಳು ಸಹ ಲಭ್ಯ.

ಜಿಯೋ 499ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ 499ರೂ. ಪ್ರಿಪೇಯ್ಡ್ ಪ್ಲಾನ್ ದೈನದಿನ 2GB ಡೇಟಾ ಮತ್ತು ಡೈಲಿ 100 SMS ಪ್ರಯೋಜನ ನೀಡಲಿದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, Jio ಪ್ರೈಮ್ ಸದಸ್ಯತ್ವದೊಂದಿಗೆ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್ ನಿಮಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದೆ. ಇದು ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಹಾಗೆಯೇ ಜಿಯೋ ಸಿನಿಮಾ ಮತ್ತು ಜಿಯೋಟಿವಿ ಅಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಏರ್‌ಟೆಲ್ 359ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 359ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ದೈನಂದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.

ಏರ್‌ಟೆಲ್ 499ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ 499ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಒಳಗೊಂಡಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಮತ್ತು ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹೊಂದಿದೆ. ಇದರೊಂದಿಗೆ ಪ್ರತಿದಿನ 2GB ಡೇಟಾವನ್ನು ಪಡೆದಿದೆ. ಇದರೊಂದಿಗೆ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂ 359ರೂ. ಪ್ರಿಪೇಯ್ಡ್ ಪ್ಲಾನ್
ವಿ ಟೆಲಿಕಾಂ 359ರೂ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿನಿತ್ಯ 2GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಹಾಗೂ ಡೈಲಿ 100 ಎಸ್‌ಎಂಎಸ್ ಪ್ರಯೋಜನ ಕೂಡ ಲಭ್ಯವಿದೆ. ಇದಲ್ಲದೆ ವಿ ಮೂವಿಸ್, ಲೈವ್‌ಟಿವಿ ಯಂತಹ ಪ್ರಯೋಜನಗಳನ್ನು ನೀಡಲಿದೆ.


Click it and Unblock the Notifications








