Home
ಸುದ್ದಿಜಾಲ

ಶಾಕಿಂಗ್‌... ಜಿಯೋ ಮತ್ತು ಏರ್‌ಟೆಲ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ದುಬಾರಿ!

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ತನ್ನ ಲೋಕಸಭಾ ಚುನಾವಣೆಗೆ (Lok Sabha Election 2024) ರೆಡಿಯಾಗುತ್ತಿದ್ದಂತೆ ಭಾರತೀಯ ಟೆಲಿಕಾಂ ಉದ್ಯಮವು ಗಮನಾರ್ಹ ಸುಂಕ ಹೆಚ್ಚಳಕ್ಕೆ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಹೆಚ್ಚಳವು ಶೇಕಡಾ 15-17 ರ ನಡುವೆ ಇರಲಿದೆ ಎಂದು ತಿಳಿದುಬಂದಿದೆ.

ಹೌದು, ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್‌ ಹಾಗೂ ಜಿಯೋ (Airtel and Jio) ಈಗಾಗಲೇ ತಮ್ಮ ಪ್ಲ್ಯಾನ್‌ಗಳ ಬೆಲೆಯನ್ನು ಏರಿಕೆ ಮಾಡಿವೆ. ಆದರೂ ಈಗ ಇನ್ನಷ್ಟು ಹೆಚ್ಚಿಗೆ ಮಾಡಲು ಈ ಕಂಪೆನಿಗಳು ಎಲ್ಲಾ ತಯಾರಿ ಮಾಡಿಕೊಂಡಿವೆ. ಹಾಗಿದ್ರೆ, ಯಾಕೆ ಈ ಕೆಲಸ ಮಾಡಲಾಗುತ್ತಿದೆ?, ಇದರಿಂದ ಮೊದಲು ಯಾರಿಗೆ ಲಾಭ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಾಕಿಂಗ್‌... ಜಿಯೋ ಮತ್ತು ಏರ್‌ಟೆಲ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ದುಬಾರಿ!

ಏರ್‌ಟೆಲ್‌ ಹಾಗೂ ಜಿಯೋ ಪ್ಲ್ಯಾನ್‌: ಭಾರತೀಯ ಟೆಲಿಕಾಂ ಉದ್ಯಮವು ಗಮನಾರ್ಹ ಸುಂಕ ಹೆಚ್ಚಳಕ್ಕೆ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಆಂಟಿಕ್ ಸ್ಟಾಕ್ ಬ್ರೋಕಿಂಗ್‌ನ ವಿಶ್ಲೇಷಕರ ವರದಿಯ ಪ್ರಕಾರ, ಈ ಹೆಚ್ಚಳವು ಶೇಕಡಾ 15-17 ರ ನಡುವೆ ಅಂದಾಜಿಸಲಾಗಿದೆ. ಚುನಾವಣೆ ನಂತರ ಈ ಬದಲಾವಣೆ ಆಗಲಿದ್ದು, ಭಾರ್ತಿ ಏರ್‌ಟೆಲ್ ಪ್ರಾಥಮಿಕ ಫಲಾನುಭವಿ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಪಿಟಿಐ ವರದಿ ಮಾಡಿದ್ದು, ಡಿಸೆಂಬರ್ 2021 ರಲ್ಲಿ ಸರಿಸುಮಾರು ಶೇಕಡಾ 20 ರಷ್ಟು ಶುಲ್ಕ ಹೆಚ್ಚಳವಾಗಿದೆ ಎಂದು ಹೈಲೈಟ್ ಮಾಡಲಾಗಿದೆ. ಭಾರತಿ ಏರ್‌ಟೆಲ್‌ನ ಸರಾಸರಿ ಆದಾಯ ಪ್ರತಿ ಬಳಕೆದಾರರಿಗೆ (ARPU) ಎಫ್‌ವೈ 27 ರ ಅಂತ್ಯದ ವೇಳೆಗೆ ಪ್ರಸ್ತುತ 208 ರೂ.ಗಳಿಂದ 286 ರೂ.ಗಳಿಗೆ ಏರುತ್ತದೆ ಎಂದು ಹೇಳಲಾಗಿದೆ. ಶುಲ್ಕದ ಹೆಚ್ಚಳ, 2G ಗ್ರಾಹಕರನ್ನು 4G ಗೆ ಪರಿವರ್ತಿಸುವುದು ಮತ್ತು 4G ಮತ್ತು 5G ಎರಡರಲ್ಲೂ ಹೆಚ್ಚಿನ ಡೇಟಾ ಯೋಜನೆಗಳಿಗೆ ಗ್ರಾಹಕರನ್ನು ಸೆಳೆಯುವುದೇ ಆಗಿದೆ. ಇಷ್ಟಾದರೂ ಸಹ ಯಾವುದೇ ಕಂಪನಿಗಳಿಂದ ಈ ಶುಲ್ಕ ಹೆಚ್ಚಳದ ಅಧಿಕೃತ ದೃಢೀಕರಣವಿಲ್ಲ.

ಶಾಕಿಂಗ್‌... ಜಿಯೋ ಮತ್ತು ಏರ್‌ಟೆಲ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ದುಬಾರಿ!

ಇನ್ನು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಏರ್‌ಟೆಲ್‌ ಚಂದಾದಾರರ ಮೂಲವು ಉದ್ಯಮದ ಸರಾಸರಿಗಿಂತ ಎರಡು ಪಟ್ಟು ಬೆಳೆಯುತ್ತದೆ ಎಂದು ನಿರೀಕ್ಷಿಸುತ್ತಿದೆ. ಇದು ಕಂಪನಿಯ ದೃಢವಾದ ಕಾರ್ಯಕ್ಷಮತೆಯ ಹಂತವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಆಶಾವಾದಿ ದೃಷ್ಟಿಕೋನಕ್ಕೆ ಕಾರಣವಾಗುವ ಅಂಶಗಳೆಂದರೆ 2G ನಿಂದ 4G ಅಪ್‌ಗ್ರೇಡ್‌ಗಳು, ಎಂಟರ್‌ಪ್ರೈಸ್ ಮತ್ತು ಫೈಬರ್-ಟು-ದ-ಹೋಮ್ ಬೆಳವಣಿಗೆ ಹಾಗೂ 5G ರೋಲ್‌ಔಟ್ ನಂತರ ಕಡಿಮೆಯಾದ ಬಂಡವಾಳಗಳು ಇದಕ್ಕೆ ಕಾರಣ ಆಗಿವೆ.

ಈ ನಡುವೆ ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಮಾರುಕಟ್ಟೆ ಷೇರು ಡೈನಾಮಿಕ್ಸ್ ಅನ್ನು ವರದಿ ಮಾಡಲಾಗಿದ್ದು, ಕಳೆದ 5.5 ವರ್ಷಗಳಲ್ಲಿ, ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ನ ವೆಚ್ಚದಲ್ಲಿ ಸ್ಥಿರವಾಗಿ ಮಾರುಕಟ್ಟೆ ಪಾಲನ್ನು ಗಳಿಸಿಕೊಂಡಿವೆ. ಸೆಪ್ಟೆಂಬರ್ 2018 ರಿಂದ ವಿ ಟೆಲಿಕಾಂನ ಮಾರುಕಟ್ಟೆ ಪಾಲು ಅರ್ಧದಷ್ಟು ಕಡಿಮೆಯಾಗಿದೆ. ಜಿಯೋ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸುವ ಮೂಲಕ ಅತಿದೊಡ್ಡ ಲಾಭದಾಯಕವಾಗಿ ಹೊರಹೊಮ್ಮಿದೆ.

ಶಾಕಿಂಗ್‌... ಜಿಯೋ ಮತ್ತು ಏರ್‌ಟೆಲ್ ಪ್ಲ್ಯಾನ್‌ಗಳು ಶೀಘ್ರದಲ್ಲೇ ದುಬಾರಿ!

ವಿವರವಾಗಿ ಹೇಳುವುದಾದರೆ ವೊಡಾಫೋನ್ ಐಡಿಯಾ ಸೆಪ್ಟೆಂಬರ್ 2018 ರಲ್ಲಿ ಶೇಕಡಾ 37.2 ರಿಂದ ಡಿಸೆಂಬರ್ 2023 ರಲ್ಲಿ ಶೇಕಡಾ 19.3 ಕ್ಕೆ ಸುಮಾರು ಅರ್ಧಕ್ಕೆ ಇಳಿದಿದ್ದರೆ, ಈ ಅವಧಿಯಲ್ಲಿ ಏರ್‌ಟೆಲ್‌ ಮಾರುಕಟ್ಟೆ ಪಾಲು ಶೇಕಡಾ 29.4 ರಿಂದ ಶೇಕಡಾ 33 ಕ್ಕೆ ಏರಿದೆ. ಹಾಗೆಯೇ ಜಿಯೋ ಶೇಕಡಾ 21.6 ರಿಂದ 39.7 ಕ್ಕೆ ಏರಿಕೆ ಆಗುತ್ತಿದ್ದು, ಅತಿದೊಡ್ಡ ಲಾಭದಾಯಕವಾಗಿ ಗುರುತಿಸಿಕೊಂಡಿದೆ.

Best Mobiles in India

English summary
Major telecom companies like Airtel and Jio have already increased the price of their plans. But now these companies are all set to do even more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+