ಜಿಯೋ ಮತ್ತು ಏರ್‌ಟೆಲ್ 299ರೂ. ಪ್ಲ್ಯಾನ್: ರೀಚಾರ್ಜ್‌ಗೆ ಯಾವುದು ಬೆಸ್ಟ್?
ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ, ವಿ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ಇತ್ತೀಚಿಗೆ ಪ್ರಿಪೇಯ್ಡ್ ಯೋಜನೆಗಳ ದರ ಹೆಚ್ಚಳ ಮಾಡಿವೆ. ಅದಾಗ್ಯೂ, ಚಂದಾದಾರರನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಸರ್ಕಸ್ ನಡೆಸುತ್ತ ಸಾಗಿವೆ. ಆ ಪೈಕಿ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂಗಳು ಪೈಪೋಟಿಯಲ್ಲಿ ಕಾಣಿಸಿಕೊಂಡಿದ್ದು, ಬಹುತೇಕ ಹೋಲಿಕೆಯ ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಹೊಂದಿವೆ. ಸೇರಿವೆ. ಆದರೆ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಆ ಪೈಕಿ ಬಹುತೇಕ ಬಳಕೆದಾರರು 299ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, ರಿಯಲನ್ಸ್ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು 299ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್ ಆಯ್ಕೆ ಹೊಂದಿವೆ. ಈ ಎರಡು ಟೆಲಿಕಾಂಗಳ ಈ ಮೊತ್ತದ ರೀಚಾರ್ಜ್ ಯೋಜನೆ ಯಲ್ಲಿ ಅಧಿಕ ದೈನಂದಿನ ಡೇಟಾ, ಅಧಿಕ ವ್ಯಾಲಿಡಿಟಿ, ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳು ಸೇರಿವೆ. ಹಾಗೆಯೇ ಹೆಚ್ಚುವರಿಯಾಗಿ ಆಪ್ಸ್‌ಗಳ ಸೌಲಭ್ಯಗಳು ಸಿಗಲಿವೆ. ಆದರೂ ಈ ಎರಡು ಟೆಲಿಕಾಂಗಳ 299ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೆಲವು ಭಿನ್ನತೆಗಳು ಕಾಣಬಹುದಾಗಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂನ 299ರೂ. ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ ಯಾವುದು ಉತ್ತಮ? ಯೋಜನೆಗಳ ಪ್ರಯೋಜನಗಳೆನು ಮುಂದೆ ನೋಡೋಣ ಬನ್ನಿರಿ.

ಜಿಯೋ 299ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋ ದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.

ಏರ್‌ಟೆಲ್ 299ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಏರ್‌ಟೆಲ್‌ನಿಂದ ಏರ್‌ಟೆಲ್ ಕರೆಗಳು ಸೇರಿದಂತೆ ಏರ್‌ಟೆಲ್‌ನಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 42 GB ಡೇಟಾ ಸಿಗಲಿದೆ. ಹೆಚ್ಚುವರಿ ಯಾಗಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ನಲ್ಲಿ ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗೆಯೇ ವೆಂಕ್ ಮ್ಯೂಸಿಕ್ ಸಪೋರ್ಟ್ ದೊರೆಯಲಿದೆ.

ರೀಚಾರ್ಜ್‌ಗೆ ಯಾವುದು ಉತ್ತಮ?
ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಈ ಎರಡು ಕಂಪನಿಗಳು ಆಕರ್ಷಕ ಸೌಲಭ್ಯ ಗಳನ್ನು ನೀಡಿವೆ. ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಒಂದೇ ರೀತಿಯ ವ್ಯಾಲಿಡಿಟಿ ಪ್ರಯೋಜನ ನೀಡಿವೆ. ಹಾಗೆಯೇ ಈ ಎರಡು ಟೆಲಿಕಾಂಗಳು ಎಸ್‌ಎಮ್‌ಎಸ್ ಪ್ರಯೋಜನ ಸಹ ಪಡೆದಿದ್ದು, ದೈನಂದಿನ ಡೇಟಾ ಸೌಲಭ್ಯ ನೀಡಿವೆ. ಆದರೆ ಡೇಟಾ ಪ್ರಯೋಜನದಲ್ಲಿ ಭಿನ್ನತೆ ಕಾಣಬಹುದಾಗಿದೆ. ನೀವು ಹೆಚ್ಚಿನ ಡೇಟಾ ವನ್ನು ಬಯಸುತ್ತಿದ್ದರೇ, ನಿಮಗೆ ಜಿಯೋ ಉತ್ತಮ ಅನಿಸಲಿದೆ. ಡೇಟಾ ಬಗ್ಗೆ ಅಷ್ಟೇನು ಗಮನ ನೀಡದಿದ್ದರೇ ಮತ್ತು ಡೈಲಿ ಡೇಟಾ ಇದ್ದರೇ ಸಾಕು ಎಂದಾದಾರೇ ಏರ್‌ಟೆಲ್ ಟೆಲಿಕಾಂ ಯೋಜನೆಯು ಉತ್ತಮ ಎನಿಸಿದೆ.


Click it and Unblock the Notifications








