ಜಿಯೋ ಮತ್ತು ಏರ್‌ಟೆಲ್ 599ರೂ. ಪ್ಲ್ಯಾನ್: ರೀಚಾರ್ಜ್‌ಗೆ ನಿಮ್ಮ ಆಯ್ಕೆ ಯಾವುದು?
ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಬಜೆಟ್ ದರದ. ದೀರ್ಗಾವಧಿಯ ಪ್ಲ್ಯಾನ್‌ಗಳು ಆಕರ್ಷಕ ಅನಿಸುತ್ತದೆ.

ಹೌದು, ಜಿಯೋ ಹಾಗೂ ಏರ್‌ಟೆಲ್ ಕೆಲವು ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಸೆಳೆದಿವೆ. ಮುಖ್ಯವಾಗಿ 999ರೂ. ಬೆಲೆಯ ಪ್ರೀಪೇಯ್ಡ್ ಯೋಜನೆಯು ಪ್ರತಿದಿನ ಡೇಟಾ ಸೌಲಭ್ಯ, ವಾಯಿಸ್ ಕರೆ, ಎಸ್‌ಎಮ್‌ಎಸ್ ಹಾಗೂ ಅಧಿಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಹೊಂದಿದ್ದು, ಬಹುತೇಕ ಬಳಕೆದಾರರನ್ನು ಆಕರ್ಷಿಸಿದೆ. ಹಾಗಾದರೇ ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂನ 999ರೂ. ಯೋಜನೆಯಲ್ಲಿ ಯಾವುದು ಬೆಸ್ಟ್?..ಪ್ರಯೋಜನಗಳೆನು?..ಮುಂದೆ ಓದಿರಿ.

ರಿಲಾಯನ್ಸ್ ಜಿಯೋ 599ರೂ. ಪ್ರೀಪೇಯ್ಡ್ ಯೋಜನೆ
ಜಿಯೋ 599ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಪಡೆದಿದ್ದು, ಜಿಯೋದಿಂದ ಇತರೆ ನೆಟವರ್ಕ ಕರೆಗಳಿಗೆ 3000 ಉಚಿತ ನಿಮಿಷಗಳ ಮಿತಿ ಹೊಂದಿದೆ. ಹಾಗೆಯೇ ಹೆಚ್ಚುವರಿಯಾಗಿ ಕೆಲವು ಆಪ್ ಸೇವೆಗಳು ದೊರೆಯಲಿವೆ.

ಭಾರ್ತಿ ಏರ್‌ಟೆಲ್-599ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್‌ನ 599ರೂ. ಪ್ರೀಪೇಡ್ ಪ್ಲ್ಯಾನ್ ಸಹ ದೀರ್ಘಾವಧಿಯ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 56 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್ ಕರೆಯ ಸೌಲಭ್ಯ ಹಾಗೂ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ. ಫ್ರೀ ಹೆಲೋ ಟ್ಯೂನ್ಸ್, ವಿಂಕ್ ಮ್ಯೂಸಿಕ್ ಸೇವೆಗಳು ಲಭ್ಯವಾಗಲಿವೆ.

ಪ್ರಯೋಜನಗಳಲ್ಲಿ ಭಿನ್ನತೆ
ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಕಂಡು ಬಂದರೂ, ಕೆಲವು ಭಿನ್ನ ಪ್ರಯೋಜನಗಳು ಕಾಣಿಸುತ್ತವೆ. ಸದ್ಯ 599ರೂ. ಬಜೆಟ್ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೈಲಿ 2GB ಡೇಟಾ ಪ್ರಯೋಜನ ಹೊಂದಿವೆ. ಎಸ್‌ಎಮ್‌ಎಸ್ ಸೌಲಭ್ಯ ನೀಡಿವೆ. ಆದರೆ ವ್ಯಾಲಿಡಿಟಿ ಹಾಗೂ ವಾಯಿಸ್ ಕರೆ ಪ್ರಯೋಜನಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ರೀಚಾರ್ಜ್ ಮಾಡಿಸಲು ಯಾವುದು ಬೆಸ್ಟ್?
599ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಪ್ರಯೋಜನ ನೀಡಿದ್ದು, ಪ್ರತಿದಿನ 2GB ಡೇಟಾ ಆಫರ್ ಹೊಂದಿವೆ. ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಜಿಯೋ ಉತ್ತಮ ಅನಿಸಲಿದೆ. ಏಕೆಂದರೇ ಜಿಯೋ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು, ಏರ್‌ಟೆಲ್ 56 ದಿನಗಳ ವ್ಯಾಲಿಡಿಟಿ ಪಡೆದಿದೆ. ಇನ್ನು ಡೇಟಾ ಜೊತೆಗೆ ಓಟಿಟಿ ಸೌಲಭ್ಯ ಬಯಸುವ ಗ್ರಾಹಕರಿಗೆ ಏರ್‌ಟೆಲ್ ಯೋಜನೆ ಆಯ್ಕೆ ಉತ್ತಮ ಅನಿಸಲಿದೆ. ಏರ್‌ಟೆಲ್‌ನ ಯೋಜನೆಯು ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿದೆ.


Click it and Unblock the Notifications








