ಏರ್‌ಟೆಲ್ ಮತ್ತು ಜಿಯೋ 666ರೂ.ಪ್ಲ್ಯಾನ್: ಯಾವುದು ಹೆಚ್ಚು ಪ್ರಯೋಜನ?
ಪ್ರಸ್ತುತ ಎಲ್ಲ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳನ್ನು ನೀಡುತ್ತ ಸಾಗಿವೆ. ಪ್ರೀಪೇಯ್ಡ್ ಜೊತೆ ಪೋಸ್ಟ್‌ಪೇಯ್ಡ್ ಚಂದಾದಾರರನ್ನು ಹೆಚ್ಚಿಸಲು ಕಡಿಮೆ ಬೆಲೆಯಲ್ಲಿ ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಹಾಗೆಯೇ ಈ ಎರಡು ಟೆಲಿಕಾಂಗಳು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಸಹ ಒಳಗೊಂಡಿವೆ. ಆ ಪೈಕಿ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳು ಚಂದಾದಾರರ ಗಮನ ಸೆಳೆದಿವೆ.

ಹೌದು, ಸದ್ಯ ಮೂಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಾಯನ್ಸ್ ಜಿಯೋ ಹಾಗೂ ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ಭಿನ್ನ ದರದಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಆಯ್ಕೆ ಯನ್ನು ಒಳಗೊಂಡಿವೆ. ಅವುಗಳಲ್ಲಿ ಜಿಯೋ ಟೆಲಿಕಾಂನ 666ರೂ ಹಾಗೂ ಏರ್‌ಟೆಲ್ ಟೆಲಿಕಾಂ 666ರೂ. ಪ್ರಿಪೇಯ್ಡ್ ಯೋಜನೆಗಳು ಅತ್ಯುತ್ತಮ ಪ್ರಯೋಜನಗಳೊಂದಿಗೆ ಹೆಚ್ಚುವರಿ ಯಾಗಿ ಪ್ರಯೋಜನಗಳನ್ನು ಒದಗಿಸಿವೆ. ಹಾಗಾದರೇ ಜಿಯೋ ಮತ್ತು ವಿ ಟೆಲಿಕಾಂಗಳ 666ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಯಾವುದು ಉತ್ತಮ? ಪ್ಲ್ಯಾನ್ ಪ್ರಯೋಜನಗಳೇನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಏರ್‌ಟೆಲ್ 666ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್‌ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್ ಸೌಲಭ್ಯ ದೊರೆಯುತ್ತದೆ.

ಜಿಯೋದ 666ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126 GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.
ಕೊನೆಯ ಮಾತು: ಜಿಯೋ ಪ್ಲ್ಯಾನ್ ಉತ್ತಮವೇ?
ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಟೆಲಿಕಾಂ ಈ ಎರಡು ಕಂಪನಿಗಳು 666 ರೂ, ಪ್ರೀಪೇಯ್ಡ್ ಪ್ಲ್ಯಾನ್ ನಲ್ಲಿ ಆಕರ್ಷಕ ಸೌಲಭ್ಯಗಳನ್ನು ನೀಡಿವೆ. ಈ ಎರಡು ಟೆಲಿಕಾಂಗಳು ಬಹುತೇಕ ಸಾಮ್ಯತೆಯ ಪ್ರಯೋಜನ ಹೊಂದಿದ್ದರೂ, ಭಿನ್ನತೆ ಒಳಗೊಂಡಿವೆ. ಎರಡು ಪ್ಲ್ಯಾನ್ ಗಳ ವ್ಯಾಲಿಡಿಟಿಯಲ್ಲಿ ಭಿನ್ನತೆ ಕಾಣಬಹುದು. ಏರ್‌ಟೆಲ್‌ನ ಯೋಜನೆಯು 77 ದಿನಗಳ ವ್ಯಾಲಿಡಿಟಿ ಹೊಂದಿದ್ದರೆ, ಜಿಯೋ ಟೆಲಿಕಾಂನ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ ಒದಗಿಸಿದೆ. ಆದರೆ ಡೇಟಾ ವಿಷಯಕ್ಕೆ ಬಂದಾಗ ಜಿಯೋ ಮತ್ತು ಏರ್‌ಟೆಲ್ ಎರಡು ಟೆಲಿಕಾಂಗಳು ಪ್ರತಿದಿನ 1.5 GB ಡೇಟಾ ನೀಡುತ್ತದೆ. ಇನ್ನು ಈ ಎರಡು ಯೋಜನೆಗಳು ಡೈಲಿ 100 ಎಸ್‌ಎಮ್‌ಎಸ್ ಪ್ರಯೋಜನ ಪಡೆದಿವೆ. ಹಾಗೆಯೆ ಜಿಯೋ ಮತ್ತು ಏರ್‌ಟೆಲ್ ಹೆಚ್ಚುವರಿಯಾಗಿ ಕೆಲವು ಆಪ್‌ಗಳ ಸೌಲಭ್ಯ ನೀಡಿವೆ. ಒಟ್ಟಾರೆ ನೋಡುವುದಾದರೆ, ಜಿಯೋದ 666 ರೂ, ಪ್ರೀಪೇಯ್ಡ್ ಪ್ಲ್ಯಾನ್ ಉತ್ತಮ ಆಯ್ಕೆ ಎನಿಸುತ್ತವೆ.


Click it and Unblock the Notifications








