Home
ಸುದ್ದಿಜಾಲ

ಜಿಯೋ V/S ವಿ ಟೆಲಿಕಾಂ 399ರೂ. ರೀಚಾರ್ಜ್‌ ಪ್ಲ್ಯಾನ್: ಯಾವುದು ಬೆಸ್ಟ್‌ ಅಂತೀರಾ?

ದೇಶಿಯ ಟೆಲಿಕಾಂ ವಲಯದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಆಕರ್ಷಕ ಪ್ರಯೋಜನಗಳ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ ಹಾಗೂ ವಿ ಟೆಲಿಕಾಂ (ವೊಡಾಫೋನ್-ಐಡಿಯಾ) ಸಂಸ್ಥೆಗಳು ಹೆಚ್ಚು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಟೆಲಿಕಾಂಗಳ ಬಜೆಟ್‌ ದರದಲ್ಲಿನ ದೀರ್ಘಾವಧಿಯ ಯೋಜನೆಗಳು ಗಮನ ಸೆಳೆದಿವೆ.

ಟೆಲಿಕಾಂ

ಹೌದು, ಜಿಯೋ ಹಾಗೂ ವಿ ಟೆಲಿಕಾಂನ ಕೆಲವು ಬಜೆಟ್‌ ಪ್ರೈಸ್‌ನ ಪ್ರೀಪೇಯ್ಡ್‌ ಯೋಜನೆಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿವೆ. ಮುಖ್ಯವಾಗಿ 399ರೂ. ದರದ ಪ್ರೀಪೇಯ್ಡ್‌ ಪ್ಲ್ಯಾನ್ ಟ್ರೆಂಡಿ ಅನಿಸಿದ್ದು, ಈ ಯೋಜನೆಯು ದೈನಂದಿನ ಡೇಟಾ ಸೌಲಭ್ಯ, ಅನಿಯಮಿತ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ ಹಾಗೂ ಆಕರ್ಷಕ ವ್ಯಾಲಿಡಿಟಿ ಅವಧಿಯಂತಹ ಪ್ರಯೋಜನಗಳನ್ನು ಒಳಗೊಂಡಿದೆ. ಈ ಎರಡು ಯೋಜನೆಗಳ ಬೆಲೆಯಲ್ಲಿ ಸಾಮ್ಯತೆ ಇದ್ದರೂ, ಪ್ರಯೋಜನೆಗಳಲ್ಲಿ ಅಲ್ಪ ಭಿನ್ನತೆ ಕಾಣಬಹುದು. ಹಾಗಾದರೇ ಜಿಯೋ ಮತ್ತು ವಿ ಟೆಲಿಕಾಂನ 599ರೂ. ಯೋಜನೆಯಲ್ಲಿ ರೀಚಾರ್ಜ್‌ಗೆ ಯಾವುದು ಉತ್ತಮ?..ಈ ಯೋಜನೆಗಳ ಪ್ರಯೋಜನಗಳೆನು? ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 399ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 399ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 399ರೂ. ಪ್ರೀಪೇಯ್ಡ್‌ ಯೋಜನೆಯು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಈ ಪ್ಲ್ಯಾನ್ ಸಹ ಪ್ರತಿದಿನ 1.5GB ಡೇಟಾ ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಹಾಗೂ ಜಿಯೋದಿಂದ ಇತರೆ ನೆಟವರ್ಕಗೂ ಕರೆಗಳಿ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಹೊಂದಿದೆ. ಹಾಗೆಯೇ ಹೆಚ್ಚುವರಿಯಾಗಿ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ನ್ಯೂಸ್‌ನಂತಹ ಕೆಲವು ಆಪ್‌ ಸೇವೆಗಳು ದೊರೆಯಲಿವೆ.

ವಿ ಟೆಲಿಕಾಂ 399ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 399ರೂ. ಪ್ರೀಪೇಯ್ಡ್‌ ಯೋಜನೆ

ವೊಡಾಫೋನಿನ 399ರೂ. ಪ್ಲ್ಯಾನ್ ದೀರ್ಘಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಸಿಗಲಿದೆ. ಹೆಚ್ಚುವರಿಯಾಗಿ ಯಾವುದೇ ಶುಲ್ಕವಿಲ್ಲದೇ 12AM ಟು 6AM ಅವಧಿಯಲ್ಲಿ ಅನಿಯಮಿತ ಡೇಟಾ ಕೊಡುಗೆ ಹಾಗೂ ವೀಕೆಂಡ್‌ ಡೇಟಾ ರೋಲ್‌ಓವರ್ ಸೇರಿದಂತೆ ವಿ ಆಪ್ಸ್‌ ಸೇವೆಗಳು ಲಭ್ಯವಾಗಲಿವೆ.

ಪ್ರಯೋಜನಗಳಲ್ಲಿ ಭಿನ್ನತೆ

ಪ್ರಯೋಜನಗಳಲ್ಲಿ ಭಿನ್ನತೆ

ಜಿಯೋ ಹಾಗೂ ವಿ ಟೆಲಿಕಾಂಗಳ ಬಹುತೇಕ ಯೋಜನೆಗಳಲ್ಲಿ ಸಾಮ್ಯತೆ ಕಂಡು ಬಂದರೂ, ಪ್ರಯೋಜನಗಳಲ್ಲಿ ಭಿನ್ನತೆ ಇದ್ದೆ ಇವೆ. ಸದ್ಯ 399ರೂ. ಬಜೆಟ್‌ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಎರಡು ಟೆಲಿಕಾಂಗಳು ಡೈಲಿ 1.5GB ಡೇಟಾ ಪ್ರಯೋಜನ ಹೊಂದಿವೆ. ಎಸ್‌ಎಮ್‌ಎಸ್‌ ಸೌಲಭ್ಯ ನೀಡಿವೆ. ಆದರೆ ಟೆಲಿಕಾಂಗಳು ನೀಡುವ ಹೆಚ್ಚುವರಿ ಪ್ರಯೋಜನಗಳಲ್ಲಿ ಭಿನ್ನತೆ ಕಾಣಬಹುದಾಗಿದೆ.

ರೀಚಾರ್ಜ್‌ ಮಾಡಿಸಲು ಯಾವ ಪ್ಲ್ಯಾನ್ ಬೆಸ್ಟ್?

ರೀಚಾರ್ಜ್‌ ಮಾಡಿಸಲು ಯಾವ ಪ್ಲ್ಯಾನ್ ಬೆಸ್ಟ್?

399ರೂ. ದರದ ಪ್ರೀಪೇಯ್ಡ್‌ ಯೋಜನೆಯಲ್ಲಿ ಜಿಯೋ ಹಾಗೂ ವಿ ಟೆಲಿಕಾಂ ಆಕರ್ಷಕ ಪ್ರಯೋಜನ ನೀಡಿವೆ. ಈ ಎರಡು ಟೆಲಿಕಾಂಗಳು ಪ್ರತಿದಿನ 1.5GB ಡೇಟಾ ಆಫರ್ ಹೊಂದಿವೆ. ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆಯು ಗಮನ ಸೆಳೆಯುತ್ತದೆ. ಏಕೆಂದರೇ ಎರಡು ಟೆಲಿಕಾಂಗಳು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಒದಗಿಸಿವೆ. ಇನ್ನು ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ವಿ ಟೆಲಿಕಾಂ ಉತ್ತಮ ಅನಿಸಲಿದೆ.

Best Mobiles in India

English summary
Jio And Vi Telecom Rs 399 Prepaid Plans Compared: Which One Better To Recharge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+