Home
ಸುದ್ದಿಜಾಲ

ಬಹುನಿರೀಕ್ಷಿತ ಜಿಯೋ ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್!

ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಸಂಸ್ಥೆಯು ಜಿಯೋ ಫೋನ್‌ ಬಿಡುಗಡೆ ಮಾಡಿ ಈಗಾಗಲೇ ಮೋಡಿ ಮಾಡಿದೆ. ಹಾಗೆಯೇ ಜಿಯೋ ಕಂಪನಿಯು ಅಗ್ಗದ ಬೆಲೆಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸಂಗತಿ ತಿಳಿದೆ ಇದೆ. ಬಹುನಿರೀಕ್ಷೆತ ಜಿಯೋ ಸ್ಮಾರ್ಟ್‌ಫೋನಿನ ಲೀಕ್ ಫೀಚರ್ಸ್‌ಗಳು ಗ್ರಾಹಕರಲ್ಲಿ ಈಗ ಕುತೂಹಲ ಮೂಡಿಸಿವೆ.

ಬಹುನಿರೀಕ್ಷಿತ ಜಿಯೋ ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್!

ಹೌದು, ರಿಲಾಯನ್ಸ್‌ ಜಿಯೋ ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಲಿದೆ. ಓರ್ಬಿಕ್ (RC545L) ಎಂಬ ಸಂಕೇತನಾಮ ಹೊಂದಿರುವ ಜಿಯೋ ಫೋನ್ ಅನ್ನು ಗೂಗಲ್ ಪ್ಲೇ ಕನ್ಸೋಲ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಪ್ರಸಿದ್ಧ ಟಿಪ್‌ಸ್ಟರ್ ಮುಕುಲ್ ಶರ್ಮಾ ಗುರುತಿಸಿದ್ದಾರೆ. ಈ ಪಟ್ಟಿಯು ಇದು ಜಿಯೋ ಸ್ಮಾರ್ಟ್‌ಫೋನ್ ಎಂದು ನಮಗೆ ಸೂಚಿಸುತ್ತದೆ. ಈ ಫೋನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗ್ತಿದೆ.

ಬಹುನಿರೀಕ್ಷಿತ ಜಿಯೋ ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್!

ಬರಲಿರುವ ಜಿಯೋ ಫೋನ್ ಕ್ವಾಲ್ಕಾಮ್ ಪ್ರೊಸೆಸರ್ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್‌ಗಳಾದ ಅಡ್ರಿನೊ 306 ಜಿಪಿಯುನೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಕ್ಯೂಎಂ 215 ನಿಂದ ಜಿಯೋ ಸ್ಮಾರ್ಟ್‌ಫೋನ್ ಚಾಲಿತವಾಗಬಹುದು ಎಂದು ಸೂಚಿಸುತ್ತದೆ. ಇದರರ್ಥ ಬಜೆಟ್ ಜಿಯೋ ಸ್ಮಾರ್ಟ್‌ಫೋನ್ ಗೂಗಲ್‌ನ ಆಂಡ್ರಾಯ್ಡ್ ಗೋ ಉಪಕ್ರಮದ ಭಾಗವಾಗಲಿದೆ. RAM ಕಾನ್ಫಿಗರೇಶನ್ ತಿಳಿದಿಲ್ಲವಾದರೂ, ಸ್ಮಾರ್ಟ್ಫೋನ್ 1GB ಅಥವಾ 2GB RAM ಅನ್ನು ಪಡೆಯುವ ಸಾಧ್ಯತೆಯಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಓಎಸ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಹೆಚ್‌ಡಿ ಪ್ಲಸ್‌ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಡಿಸ್‌ಪ್ಲೇಯು 320 dpi ಸಾಂದ್ರತೆಯನ್ನು ಪಡೆಯುತ್ತದೆ ಎಂದು ಸುಳಿವು ನೀಡಲಾಗಿದೆ. ಹೆಚ್ಚುವರಿಯಾಗಿ, ಇದು ಕೆಪ್ಯಾಸಿಟಿವ್ ಬಟನ್‌ಗಳೊಂದಿಗೆ ಹಳೆಯ ಟಾಪ್ ಮತ್ತು ಬಾಟಮ್ ಬೆಜೆಲ್‌ಗಳೊಂದಿಗೆ ಸ್ಮಾರ್ಟ್‌ಫೋನ್‌ನ ನಿರೂಪಣೆಯನ್ನು ತೋರಿಸುತ್ತದೆ.

ಬಹುನಿರೀಕ್ಷಿತ ಜಿಯೋ ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್!

ಬರಲಿರುವ ಜಿಯೋ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬೆಲೆ ಅಂದಾಜು ರೂ. 4,000 ಅಥವಾ 5000ರೂ ಇರಬಹುದು ಎನ್ನಲಾಗುತ್ತಿದೆ. ಹೀಗಾಗಿ ಹೆಚ್ಚಿನ ಬಳಕೆದಾರರು ಈ ಸ್ಮಾರ್ಟ್‌ಫೋನ್‌ಗೆ ಬದಲಾಗುತ್ತಾರೆ. ಇದು ಸ್ಪರ್ಧಾತ್ಮಕ 4G ಪ್ರಿಪೇಯ್ಡ್ ಯೋಜನೆಗಳೊಂದಿಗೆ ಮಾಡಿದಂತೆಯೇ ಜಿಯೋ ತನ್ನ ಪ್ರತಿಸ್ಪರ್ಧಿಗಳಾದ ರಿಯಲ್ಮೆ, ಶಿಯೋಮಿ ಮತ್ತು ಸ್ಯಾಮ್‌ಸಂಗ್‌ಗಳ ಮೇಲೆ ಮತ್ತೊಮ್ಮೆ ಟಾಂಗ್ ನೀಡುತ್ತದೆ.

Best Mobiles in India

English summary
Jio is expected to launch a budget Android smartphone that could be priced below Rs. 5,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+