ಕಾರವಾರ, ಹಾವೇರಿ ಸೇರಿ ದೇಶದ 34 ನಗರಗಳಲ್ಲಿ ಜಿಯೋ 5G ಪ್ರಾರಂಭ!
ರಿಲಯನ್ಸ್ ಜಿಯೋ ಕಾರವಾರ, ರಾಣೆಬೆನ್ನೂರು, ಹಾವೇರಿಯಲ್ಲಿ ಜಿಯೋ ಟ್ರೂ 5ಜಿ ಸೇವೆ ಅನ್ನು ಇದೇ ಮಾರ್ಚ್ 15 ರಿಂದ ಆರಂಭಿಸಲಾಗಿದೆ. ಕರ್ನಾಟಕದ ಈ 3 ನಗರ ಸೇರಿದಂತೆ ದೇಶದ ಹತ್ತು ರಾಜ್ಯಗಳ, ಒಟ್ಟು 34 ಹೊಸ ನಗರಗಳಲ್ಲಿ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ರಿಲಯನ್ಸ್ ಜಿಯೋದಿಂದ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ ಇತರ ನಗರಗಳು ಹೀಗಿವೆ ಆಂಧ್ರಪ್ರದೇಶದ ಅಮಲಾಪುರಂ, ಧರ್ಮಾವರಂ, ಕವಲಿ, ತನುಕು, ತುನಿ, ವಿನುಕೊಂಡ, ಹರಿಯಾಣದ ಭಿವಾನಿ, ಜಿಂದ್, ಕೈತಾಲ್, ರೇವಾರಿ, ರೇವಾರಿ, ಹಿಮಾಚಲ ಪ್ರದೇಶದ ಧರ್ಮಶಾಲಾ, ಕಾಂಗ್ರಾ, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ, ಕಥುವಾ, ಕತ್ರಾ, ಸೋಪೋರ್,

ಕೇರಳದ ಅಟ್ಟಿಂಗಲ್, ಮೇಘಾಲಯದ ತುರಾ, ಒಡಿಶಾದ ಭವಾನಿಪಟ್ನಾ, ಜತಾನಿ, ಖೋರ್ಧಾ, ಸುಂದರ್‌ಗಢ, ತಮಿಳುನಾಡಿನ ಅಂಬೂರ್, ಚಿದಂಬರಂ , ನಾಮಕ್ಕಲ್, ಪುದುಕೋಟ್ಟೈ, ರಾಮನಾಥಪುರಂ, ಶಿವಕಾಶಿ, ತಿರುಚೆಂಗೋಡ್, ವಿಲುಪ್ಪುರಂ ಹಾಗೂ ತೆಲಂಗಾಣದ ಸೂರ್ಯಪೇಟ್ ನಲ್ಲಿ ಲಭ್ಯ ಇದೆ. ಇದರೊಂದಿಗೆ ದೇಶದ 365 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳು ಲಭ್ಯ ಆಗಲಿವೆ.
ಅಂದಹಾಗೆ, ಈ ಮೇಲ್ಕಂಡ ನಗರ ಗಳ ಪೈಕಿ ಬಹುತೇಕ ನಗರ ಗಳಲ್ಲಿ ಟ್ರೂ 5ಜಿ ಸೇವೆ ಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ. ಹಾಗೆಯೇ ಟೆಲಿಕಾಂ ಆಪರೇಟರ್ ಜಿಯೋ ಭಾರತದ ಡಿಜಿಟಲ್ ರೂಪಾಂತರದ ಕಡೆಗೆ ಕೆಲಸ ಮಾಡುತ್ತಿದೆ.

ಇಂದಿನಿಂದ ಹೆಚ್ಚಿನ ವೇಗದ, ಲೋ- ಲೇಟೇನ್ಸಿ, ಅದ್ವಿತೀಯ ಟ್ರೂ 5ಜಿ ಸೇವೆಗಳ ತಾಂತ್ರಿಕ ಪ್ರಯೋಜನಗಳನ್ನು ಈ ನಗರಗಳ ಜನರು ಮತ್ತು ವ್ಯವಹಾರಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಪ್ರವಾಸೋದ್ಯಮ, ಉತ್ಪಾದನೆ, ಎಸ್ಎಂಇಗಳು, ಆಡಳಿತ, ಶಿಕ್ಷಣ, ಆರೋಗ್ಯ, ಕೃಷಿ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಐಟಿ ಈ ಕ್ಷೇತ್ರಗಳಲ್ಲಿ ಹೊಸ ಬೆಳವಣಿಗೆಯ ಅವಕಾಶಗಳನ್ನು ತೆರೆಯುತ್ತದೆ.
2023ರ ಡಿಸೆಂಬರ್ ವೇಳೆಗೆ ಜಿಯೋ ಟ್ರೂ 5ಜಿ ದೇಶದ ಪ್ರತಿ ಪಟ್ಟಣವನ್ನು ತಲುಪಲಿದೆ. ಭಾರತವನ್ನು ಡಿಜಿಟಲ್ ಸೊಸೈಟಿಯನ್ನಾಗಿ ಪರಿವರ್ತಿಸುವ ಜಿಯೋ ಬದ್ಧತೆಗೆ ಇದು ಸಾಕ್ಷಿಯಾಗಿದೆ. ತಮ್ಮ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವುದಕ್ಕೆ ಬೆಂಬಲ ನೀಡಿದ ರಾಜ್ಯ ಸರ್ಕಾರಗಳು ಮತ್ತು ಆಡಳಿತಗಾರರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಜಿಯೋ ವಕ್ತಾರರು ಹೇಳಿದ್ದಾರೆ.
ಜಿಯೋ 5G ಸೇವೆ ಲಭ್ಯವಿರುವ ಪ್ರದೇಶದ ಗ್ರಾಹಕರು ಜಿಯೋ 239 ರೂ. ಪ್ರಿಪೇಯ್ಡ್ ಯೋಜನೆ ಅಥವಾ ಅದಕ್ಕಿಂತ ಅಧಿಕ ಮೊತ್ತದ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರು ಹೆಚ್ಚುವರಿ ಪ್ಯಾಕ್ ಖರೀದಿಸುವ ಅಗತ್ಯವಿಲ್ಲ. ಆದರೆ ಕಡಿಮೆ ಬೆಲೆಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿರುವ ಗ್ರಾಹಕರಿಗೆ 5G ಅನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಯೋ ಹೊಸ 5G ಅಪ್‌ಗ್ರೇಡ್ ಪ್ರಿಪೇಯ್ಡ್ ಯೋಜನೆಯನ್ನು ಈಗ ಅವರಿಗೆ ಲಭ್ಯ ಮಾಡಿದೆ. ಅದುವೇ ಜಿಯೋ 61ರೂ. ಪ್ಲ್ಯಾನ್ ಆಗಿದ್ದು, ಇದು 6GB ಡೇಟಾ ಪ್ರಯೋಜನ ಪಡೆದಿದೆ.

ಗ್ರಾಹಕರು ತಮ್ಮ ಚಾಲ್ತಿ ಇರುವ ಪ್ರಿಪೇಯ್ಡ್ ಯೋಜನೆ ಅವಧಿ ಮುಗಿಯುವವರೆಗೆ 61ರೂ. ಪ್ಲ್ಯಾನ್ ಸಕ್ರಿಯವಾಗಿರುತ್ತದೆ. ಜಿಯೋ 119ರೂ, ಜಿಯೋ 149ರೂ, ಜಿಯೋ 179ರೂ, ಜಿಯೋ 199ರೂ ಅಥವಾ ಜಿಯೋ 209ರೂ. ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿರುವ ಗ್ರಾಹಕರಿಗೆ ಈ 5G ಅಪ್‌ಗ್ರೇಡ್ ಡೇಟಾ ಪ್ಲಾನ್ ಕಾರ್ಯನಿರ್ವಹಿಸುತ್ತದೆ. ಆದರೆ, ಗ್ರಾಹಕರು ಜಿಯೋ 5G ವೆಲ್ಕಮ್ ಆಫರ್ ಅನ್ನು ಸ್ವೀಕರಿಸದಿದ್ದರೆ, ಈ ಪ್ಲ್ಯಾನ್ ಉಪಯುಕ್ತವಾಗದು.


Click it and Unblock the Notifications








