Jio ವಾರ್ಷಿಕೋತ್ಸವದ ಆಫರ್: ಆಯ್ದ ರೀಚಾರ್ಜ್ ಮೇಲೆ 700ರೂ. ಮೌಲ್ಯದ ಪ್ರಯೋಜನ!
ಟೆಲಿಕಾಂ ದಿಗ್ಗಜ ರಿಲಯನ್ಸ್ ಜಿಯೋ 8 ನೇ ವಾರ್ಷಿಕೋತ್ಸವದಂದು ತನ್ನ ಬಳಕೆದಾರರಿಗೆ ವಾರ್ಷಿಕೋತ್ಸವದ ಆಫರ್ ತಂದಿದೆ. ಸಂಸ್ಥೆಯ ಆಯ್ದ ರೀಚಾರ್ಜ್ ಪ್ಲಾನ್ ಗಳ ಮೇಲೆ ಈ ವಿಶೇಷ ಕೊಡುಗೆಯನ್ನು ಪಡೆಯಬಹುದು. ಜಿಯೋ 899 ರೂ ಮತ್ತು 999 ರೂ. ಗಳ ತ್ರೈಮಾಸಿಕ ಪ್ಲಾನ್ ಗಳು ಹಾಗೂ 3599 ರೂ. ಗಳ ವಾರ್ಷಿಕ ಪ್ಲಾನ್ ಜೊತೆಗೆ ಬಳಕೆದಾರರು 700ರೂ. ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತಾರೆ.
ಈ ಆಫರ್ 175ರೂ. ಮೌಲ್ಯದ 10 ಒಟಿಟಿ ಅಪ್ಲಿಕೇಷನ್‌ಗಳಿಗೆ ಚಂದಾದಾರಿಕೆಯೊಂದಿಗೆ 10 GB ಡೇಟಾ ಪ್ಯಾಕ್ ಅನ್ನು ಒಳಗೊಂಡಿರುತ್ತದೆ. ಇದರ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ. ಅಲ್ಲದೇ ಝೊಮ್ಯಾಟೊದ 3 ತಿಂಗಳ ಗೋಲ್ಡ್ ಸದಸ್ಯತ್ವವನ್ನು ಉಚಿತವಾಗಿ ನೀಡಲಾಗುವುದು. 2999ರೂ. ಕ್ಕಿಂತ ಹೆಚ್ಚಿನ ಖರೀದಿಗಳಲ್ಲಿ ಗ್ರಾಹಕರು 500ರೂ. ಮೌಲ್ಯದ ಅಜಿಯೋ ವೋಚರ್‌ಗಳನ್ನು ಸಹ ಪಡೆಯುತ್ತಾರೆ. ಸೆಪ್ಟೆಂಬರ್ 5 ರಿಂದ 10ನೇ ತಾರೀಕಿನ ಮಧ್ಯೆ ರೀಚಾರ್ಜ್ ಮಾಡುವ ಚಂದಾದಾರರಿಗೆ ಮಾತ್ರ ಆಫರ್ ಲಭ್ಯವಿದೆ.

ಜಿಯೋ ಆರಂಭವಾಗಿ 8 ವರ್ಷಗಳಾಗಿವೆ. ಈ 8 ವರ್ಷಗಳಲ್ಲಿ ವೈರ್‌ಲೆಸ್ ಮತ್ತು ವೈರ್‌ಲೈನ್ ವಿಭಾಗ ಎರಡರಲ್ಲೂ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮಿದೆ. ಇಂದಿಗೆ ಜಿಯೋ 13 ಕೋಟಿ 5G ಗ್ರಾಹಕರು ಸೇರಿದಂತೆ 49 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಜಿಯೋ ವಿಶ್ವದ ಅತಿ ದೊಡ್ಡ ಮತ್ತು ವೇಗವಾದ ಸ್ಟ್ಯಾಂಡ್-ಅಲೋನ್ 5G ನೆಟ್‌ವರ್ಕ್ ತಂದಿದ್ದು, ದೇಶದಲ್ಲಿ ಸ್ಥಾಪಿಸಲಾದ ಎಲ್ಲ 5G ಬಿಟಿಎಸ್ ಗಳಲ್ಲಿ ಶೇ 85 ಕ್ಕಿಂತ ಹೆಚ್ಚು ಜಿಯೋದಿಂದ ಬಂದಿದೆ.
ಜಿಯೋ 3599ರೂ. ರೀಚಾರ್ಜ್ ಯೋಜನೆ
ರಿಲಯನ್ಸ್ ಜಿಯೋ 3599ರೂ. ರೀಚಾರ್ಜ್ ಯೋಜನೆ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಸಿಗಲಿದೆ. ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ಯೋಜನೆಯಲ್ಲಿ 912.5GB ಡೇಟಾ ಸೌಲಭ್ಯ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.
ಜಿಯೋ 899ರೂ. ರೀಚಾರ್ಜ್ ಯೋಜನೆ
ಜಿಯೋ ಕಂಪನಿಯ 899ರೂ. ರೀಚಾರ್ಜ್ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯ ಸೌಲಭ್ಯ ಸಿಗುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 200 GB ಡೇಟಾ ಸೌಲಭ್ಯ ಸಿಗಲಿದೆ. ಇದಲ್ಲದೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಇದ್ದು, ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 20 GB ಡೇಟಾ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯ.
ಜಿಯೋ 999ರೂ. ರೀಚಾರ್ಜ್ ಯೋಜನೆ
ಜಿಯೋ (Jio) ಸಂಸ್ಥೆಯ 999ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 98 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯ ಇದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ ಸೇವೆಗಳು ಲಭ್ಯ.


Click it and Unblock the Notifications








